ತಮಿಳುನಾಡು: ಮಾಜಿ ಸಿಎಂ ಜಯಲಲಿತಾ ನಿವಾಸದ ಬೀಗದ ಕೀ ಸೊಸೆ ದೀಪಾ ಜಯಕುಮಾರ್ ಗೆ ಹಸ್ತಾಂತರ

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಪೋಯಸ್ ಗಾರ್ಡನ್‍ನಲ್ಲಿರುವ ವೇದ ನಿವಾಸವು ಸೋದರ ಸೊಸೆ ದೀಪಾ ಜಯಕುಮಾರ್ ಅವರ ಕೈ ಸೇರಿದೆ.
ದೀಪಾ ಜಯಕುಮಾರ್
ದೀಪಾ ಜಯಕುಮಾರ್

ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಪೋಯಸ್ ಗಾರ್ಡನ್‍ನಲ್ಲಿರುವ ವೇದ ನಿವಾಸವು ಸೋದರ ಸೊಸೆ ದೀಪಾ ಜಯಕುಮಾರ್ ಅವರ ಕೈ ಸೇರಿದೆ.

ಚೆನ್ನೈ ಜಿಲ್ಲಾಡಳಿತವು ಮನೆಯ ಕೀಯನ್ನು ದೀಪಾ ಜಯಕುಮಾರ್ ಅವರಿಗೆ ಹಸ್ತಾಂತರಿಸಿದೆ. ನನ್ನ ಚಿಕ್ಕಮ್ಮನ ಅನುಪಸ್ಥಿತಿಯಲ್ಲಿ ನಾನು ಇದೇ ಮೊದಲ ಬಾರಿಗೆ ಈ ಮನೆಗೆ ಭೇಟಿ ನೀಡುತ್ತಿದ್ದೇನೆ. ಚಿಕ್ಕಮ್ಮ ಇಲ್ಲದ ಮನೆ ಈಗ ಬರಡು ಮತ್ತು ಖಾಲಿ ಎನಿಸುತ್ತಿದೆ. ನನ್ನ ಚಿಕ್ಕಮ್ಮ ಬಳಸುತ್ತಿದ್ದ ಪೀಠೋಪಕರಣಗಳನ್ನು ತೆಗೆದುಹಾಕಲಾಗಿದೆ ಎಂದು ದೀಪಾ  ಆರೋಪಿಸಿದ್ದಾರೆ.

ನವೆಂಬರ್ 24 ರಂದು ಮದ್ರಾಸ್ ಹೈಕೋರ್ಟ್‍ನ ಏಕಸದಸ್ಯ ಪೀಠವು ಜಯಲಲಿತಾ ಅವರ ನಿವಾಸ ವೇದ ನಿಲಯವನ್ನು ಸ್ವಾಧೀನಪಡಿಸಿಕೊಳ್ಳುವ ಆದೇಶವನ್ನು ರದ್ದುಗೊಳಿಸಿ ಮನೆಯನ್ನು ವಾರಸುದಾರರಿಗೆ ಹಸ್ತಾಂತರಿಸುವಂತೆ ಆದೇಶಿಸಿತು.

ಹಿಂದಿನ ಎಐಎಡಿಎಂಕೆ ಸರ್ಕಾರ ಜಯಲಲಿತಾ ಅವರ ಕುಟುಂಬಸ್ಥರನ್ನು ಸಂಪರ್ಕಿಸದೆ ಮನೆಯನ್ನು ಸ್ವಾಧೀನಪಡಿಸಿಕೊಂಡಿತು ಮತ್ತು ಆ ಮನೆಯನ್ನು ಸ್ಮಾರಕವನ್ನಾಗಿ ಪರಿವರ್ತಿಸಿತು.

ಬಂಗಲೆಯನ್ನು ಸ್ವಾಧೀನಪಡಿಸಿಕೊಂಡಿರುವುದನ್ನು ಪ್ರಶ್ನಿಸಿ ದೀಪಾ ಮತ್ತು ಅವರ ಸಹೋದರ ದೀಪಕ್ ಅರ್ಜಿ ಸಲ್ಲಿಸಿದ್ದರು. ಇದೀಗ ಮದ್ರಾಸ್ ಹೈಕೋರ್ಟ್ ತೀರ್ಪಿನ ಪ್ರಕಾರ ಜಯಲಲಿತಾ ಮನೆ ದೀಪಾ ಅವರಿಗೆ ಸಿಕ್ಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com