ಭಾರತದ ಕೀರ್ತಿ ಪತಾಕೆ ಹಾರಿಸಿದ ಹಾಲಿ ಭುವನ ಸುಂದರಿ ಹರ್ನಾಜ್ ಸಂಧು ಯಾರು?

ಹರ್ನಾಜ್ ಬದುಕಿನಲ್ಲಿ ಇಬ್ಬರು ಪ್ರಮುಖ ಮಹಿಳೆಯರಿದ್ದಾರೆ.. ಒಬ್ಬರು ತಮ್ಮ ತಾಯಿ, ಇನ್ನೊಬ್ಬರು ಬಾಲಿವುಡ್ ನಟಿ, ಮಾಜಿ ವಿಶ್ವಸುಂದರಿ ಪ್ರಿಯಾಂಕಾ ಚೋಪ್ರಾ.
ಹರ್ನಾಜ್, ಭುವನ ಸುಂದರಿ ಕಿರೀಟ ಮುಡಿಗೇರಿಸಿಕೊಂಡ ಸಂಭ್ರಮದ ಕ್ಷಣ
ಹರ್ನಾಜ್, ಭುವನ ಸುಂದರಿ ಕಿರೀಟ ಮುಡಿಗೇರಿಸಿಕೊಂಡ ಸಂಭ್ರಮದ ಕ್ಷಣ
Updated on

1. ಹರ್ನಾಜ್ ಸಂಧು ಎರಡು ದಶಕಗಳ ನಂತರ ಭಾರತಕ್ಕೆ ಭುವನಸುಂದರಿ ಪಟ್ಟ ತಂದುಕೊಟ್ಟಿದ್ದಾರೆ. 2000 ಇಸವಿಯಲ್ಲಿ ಲಾರಾ ದತ್ತಾ ಭುವನ ಸುಂದರಿಯಾಗಿದ್ದೇ ಸೌಂದರ್ಯ ಸ್ಪರ್ಧೆಯಲ್ಲಿ ಭಾರತಕ್ಕೆ ಕಡೆಯ ವಿಜಯವಾಗಿತ್ತು.

2. 21ರ ಹರೆಯದ ಹರ್ನಾಜ್ ಹುಟ್ಟಿದ್ದು ಬೆಳೆದಿದ್ದು ಎಲ್ಲಾ ಪಂಜಾಬಿನಲ್ಲಿ. ಸರ್ಕಾರಿ ಬಾಲಕಿಯರ ಕಾಲೇಜಿನಲ್ಲಿ ವಿದ್ಯಾಭ್ಯಾಸ.

3. ಪ್ರಸ್ತುತ ಆಕೆ ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ವಿಷಯದಲ್ಲಿ ಮಾಸ್ಟರ್ಸ್ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.

4. ಹರ್ನಾಜ್, ಮೊದಲು ಸೌಂದರ್ಯ ಸ್ಪರ್ಧೆಗಳಿಗೆ ಪಾದಾರ್ಪಣೆ ಮಾಡಿದಾಗ ಆಕೆಗೆ 17 ವರ್ಷ ವಯಸ್ಸು.  

5. ಹರ್ನಾಜ್ ಎರಡು ಪಂಜಾಬಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಎರಡೂ ಸಿನಿಮಾಗಳು 2022ರಲ್ಲಿ ಬಿಡುಗಡೆಯಾಗಬೇಕಿವೆ.

6. 2019ರಲ್ಲಿ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಹರ್ನಾಜ್ ಅಂತಿಮ 12ರ ಪಟ್ಟಿಗೆ ಆಯ್ಕೆಯಾದರೂ, ಪ್ರಶಸ್ತಿ ಗೆಲ್ಲಲಾಗಿರಲಿಲ್ಲ.

7. ಹರ್ನಾಜ್ ಬದುಕಿನಲ್ಲಿ ಇಬ್ಬರು ಪ್ರಮುಖ ಮಹಿಳೆಯರಿದ್ದಾರೆ.. ಒಬ್ಬರು ತಮ್ಮ ತಾಯಿ, ಇನ್ನೊಬ್ಬರು ಪ್ರಿಯಾಂಕಾ ಚೋಪ್ರಾ. ಮಾಜಿ ವಿಶ್ವಸುಂದರಿ ಪ್ರಿಯಾಂಕಾ ಚೋಪ್ರಾ ಅವರ ಅಭಿಮಾನಿಯಾಗಿರುವ ಹರ್ನಾಜ್ ಅವರಿಂದ ಪ್ರೇರಣೆ ಪಡೆದುಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com