ಕೇರಳದಲ್ಲಿ ಮತ್ತೆ 4 ಓಮಿಕ್ರಾನ್ ಪ್ರಕರಣ ದೃಢ: ಹೊಸ ರೂಪಾಂತರಿ ಸಂಖ್ಯೆ 5ಕ್ಕೆ ಹೆಚ್ಚಳ

ಕೇರಳದಲ್ಲಿ ಬುಧವಾರ ಒಂದೇ ದಿನ 4 ಓಮಿಕ್ರಾನ್ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಆ ಮೂಲಕ ರಾಜ್ಯದಲ್ಲಿ ಹೊಸ ರೂಪಾಂತರಿ ಸೋಂಕು ಪ್ರಕರಣಗಳ ಸಂಖ್ಯೆ 5ಕ್ಕೇರಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕೊಚ್ಚಿನ್: ಕೇರಳದಲ್ಲಿ ಬುಧವಾರ ಒಂದೇ ದಿನ 4 ಓಮಿಕ್ರಾನ್ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಆ ಮೂಲಕ ರಾಜ್ಯದಲ್ಲಿ ಹೊಸ ರೂಪಾಂತರಿ ಸೋಂಕು ಪ್ರಕರಣಗಳ ಸಂಖ್ಯೆ 5ಕ್ಕೇರಿದೆ.

ಈ ಬಗ್ಗೆ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಮಾಹಿತಿ ನೀಡಿದ್ದು, ಕೇರಳದಲ್ಲಿ ಬುಧವಾರ 4 ಓಮಿಕ್ರಾನ್ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಆ ಮೂಲಕ ರಾಜ್ಯದಲ್ಲಿ ಹೊಸ ರೂಪಾಂತರಿ ಸೋಂಕು ಪ್ರಕರಣಗಳ ಸಂಖ್ಯೆ 5ಕ್ಕೇರಿದೆ ಎಂದು ಹೇಳಿದ್ದಾರೆ. 

ಅಂತೆಯೇ ವರದಿಯಾದ ಒಟ್ಟು 4 ಪ್ರಕರಣಗಳಲ್ಲಿ, 2 ಕೊಚ್ಚಿಯಲ್ಲಿ ವರದಿಯಾದ 1 ನೇ ಪ್ರಕರಣದೊಂದಿಗೆ ಸಂಪರ್ಕಕ್ಕೆ ಬಂದ ಜನರಾಗಿದ್ದಾರೆ. 3 ನೇ ವ್ಯಕ್ತಿ ಕಾಂಗೋದಿಂದ ಎರ್ನಾಕುಲಂ ವ್ಯಕ್ತಿಯಾಗಿದ್ದಾರೆ. ಅಂತೆಯೇ ಬ್ರಿಟನ್‌ನಿಂದ ತಿರುವನಂತಪುರಂಕ್ಕೆ ಬಂದ ವ್ಯಕ್ತಿಗೂ ಓಮಿಕ್ರಾನ್ ಒಕ್ಕರಿಸಿದ್ದು, ಇದು ದಿನದ 4ನೇ ಪ್ರಕರಣವಾಗಿದೆ ಎಂದು ಅವರು ಹೇಳಿದ್ದಾರೆ.

ಈ ಹಿಂದೆ ಯುನೈಟೆಡ್ ಕಿಂಗ್‌ಡಮ್‌ನಿಂದ ಬಂದ ಕೇರಳ ಮೂಲದವರಲ್ಲಿ ಓಮಿಕ್ರಾನ್ ಸೋಂಕು ಪತ್ತೆಯಾಗಿತ್ತು. ಇದು ಕೇರಳದಲ್ಲಿ ಪತ್ತೆಯಾದ ಮೊದಲ ಹೊಸ ರೂಪಾಂತರಿ ಸೋಂಕು ಪ್ರಕರಣವಾಗಿತ್ತು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com