ಓಮಿಕ್ರಾನ್ ಭೀತಿ: ಭಾರತದಲ್ಲಿ ಯಾವುದೇ ಪರಿಸ್ಥಿತಿಗೂ ಸಿದ್ಧರಾಗಿ: ಏಮ್ಸ್ ಗಂಭೀರ ಎಚ್ಚರಿಕೆ

ಜಗತ್ತಿನ 90ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಭೀತಿ ಸೃಷ್ಚಿಸಿರುವ ಕೋವಿಡ್ ವೈರಸ್ ನ ನೂತನ ರೂಪಾಂತರ ಓಮಿಕ್ರಾನ್ ಕುರಿತಂತೆ ಯಾವುದೇ ಪರಿಸ್ಥಿತಿ ಸಿದ್ಧರಾಗಿರುವಂತೆ ದೆಹಲಿ ಏಮ್ಸ್ (All India Institute of Medical Sciences) ಗಂಭೀರ ಎಚ್ಚರಿಕೆ ನೀಡಿದೆ.
ಡಾ.ರಂದೀಪ್ ಗುಲೇರಿಯಾ
ಡಾ.ರಂದೀಪ್ ಗುಲೇರಿಯಾ
Updated on

ನವದೆಹಲಿ: ಜಗತ್ತಿನ 90ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಭೀತಿ ಸೃಷ್ಚಿಸಿರುವ ಕೋವಿಡ್ ವೈರಸ್ ನ ನೂತನ ರೂಪಾಂತರ ಓಮಿಕ್ರಾನ್ ಕುರಿತಂತೆ ಯಾವುದೇ ಪರಿಸ್ಥಿತಿ ಸಿದ್ಧರಾಗಿರುವಂತೆ ದೆಹಲಿ ಏಮ್ಸ್ (All India Institute of Medical Sciences) ಗಂಭೀರ ಎಚ್ಚರಿಕೆ ನೀಡಿದೆ.

ಈಗಾಗಲೇ ಓಮಿಕ್ರಾನ್ ರೂಪಾಂತರಿ ತಳಿಯಿಂದ ಬ್ರಿಟನ್ ಮತ್ತು ಅಮೆರಿಕ ಸೇರಿದಂತೆ ಜಗತ್ತಿನ ಸಾಕಷ್ಟು ರಾಷ್ಟ್ರಗಳಲ್ಲಿ ದೈನಂದಿನ ಸೋಂಕು ಪ್ರಕರಣಗಳು ದಾಖಲೆ ಮಟ್ಟಕ್ಕೇರಿವೆ. ಪ್ರಮುಖವಾಗಿ ಬ್ರಿಟನ್ ನಲ್ಲಿ ಪ್ರತಿ ನಿತ್ಯ ಸರಾಸರಿ 1 ಲಕ್ಷ ಹೊಸ ಸೋಂಕು ಪ್ರಕರಣಗಳು ವರದಿಯಾಗುತ್ತಿದ್ದು, ಇದು ಜಗತ್ತಿನ ತೀವ್ರ ಕಳವಳಕ್ಕೆ ಕಾರಣವಾಗುತ್ತಿದೆ. ಬ್ರಿಟನ್ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಭಾರತವು ಯಾವುದೇ ಪರಿಸ್ಥಿತಿಗೂ ತನ್ನನ್ನು ತಾನು ಸಿದ್ಧಪಡಿಸಿಕೊಳ್ಳಬೇಕು ಎಂದು ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಹೇಳಿದ್ದಾರೆ.

ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿರುವ ಅವರು, ಬ್ರಿಟನ್ ಪರಿಸ್ಥಿತಿಯನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ನಾವು ಯಾವುದೇ ರೀತಿಯ ಪರಿಸ್ಥಿತಿ ಎದುರಿಸಲು ಸಿದ್ಧವಾಗಬೇಕು. ಆದರೂ ಓಮಿಕ್ರಾನ್ ಬಗ್ಗೆ ಸ್ಪಷ್ಟ ಮಾಹಿತಿ ತಿಳಿಯಲು ನಮಗೆ ಇನ್ನು ಹೆಚ್ಚಿನ ದತ್ತಾಂಶಗಳು ಬೇಕು. ಪ್ರಪಂಚದ ಇತರೆ ಭಾಗಗಳಲ್ಲಿ ಪ್ರಕರಣಗಳಲ್ಲಿ ಉಲ್ಬಣವು ಕಂಡುಬಂದಾಗ, ನಾವು ಅದನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಬೇಕಾಗುತ್ತದೆ ಮತ್ತು ಯಾವುದೇ ಪರಿಸ್ಥಿತಿಗೂ ನಾವು ಸಿದ್ಧರಾಗಿರಬೇಕು. ಕಾವಲು ಪಡೆಯದೆ ಸಿಕ್ಕಿಹಾಕಿಕೊಳ್ಳುವುದಕ್ಕಿಂತ ಹೋರಾಟಕ್ಕೆ ಸಿದ್ಧವಾಗಿರುವುದು ಉತ್ತಮ" ಎಂದು ಗುಲೇರಿಯಾ ಹೇಳಿದ್ದಾರೆ.

ಇನ್ನು ಭಾರತದಲ್ಲಿ ಈ ವರೆಗೂ ಕನಿಷ್ಠ 163 ಓಮಿಕ್ರಾನ್ ಪ್ರಕರಣಗಳು ವರದಿಯಾಗಿದ್ದು,  COVID-19 ನ ಹೊಸ ರೂಪಾಂತರವನ್ನು ನವೆಂಬರ್ 25 ರಂದು ದಕ್ಷಿಣ ಆಫ್ರಿಕಾದಿಂದ ವಿಶ್ವ ಆರೋಗ್ಯ ಸಂಸ್ಥೆಗೆ ಮೊದಲು ವರದಿ ಮಾಡಲಾಗಿತ್ತು. ಅಂದಿನಿಂದ ಇಂದಿನವರೆಗೂ ಈ ಆತಂಕಕಾರಿ ರೂಪಾಂತರಿ ವೈರಸ್ ಜಗತ್ತಿನ 90ಕ್ಕೂ ಅಧಿಕ ರಾಷ್ಟ್ರಗಳಲ್ಲಿ ವ್ಯಾಪಿಸಿದೆ. WHO ಪ್ರಕಾರ, ಈ ವರ್ಷ ನವೆಂಬರ್ 9 ರಂದು ಸಂಗ್ರಹಿಸಿದ ಮಾದರಿಯಿಂದ ಮೊದಲ ದೃಢಪಡಿಸಿದ B.1.1.529 ರೂಪಾಂತರಿ ಸೋಂಕು ಇದಾಗಿದೆ. ಅಂತೆಯೇ WHO ಒಮಿಕ್ರಾನ್ ಅನ್ನು 'ಕಳವಳಕಾರಿ ರೂಪಾಂತರ' ಎಂದು ವರ್ಗೀಕರಿಸಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com