ಕೋವಿಡ್-19 ಸೋಂಕು ಪತ್ತೆ ಪರೀಕ್ಷೆ (ಸಾಂಕೇತಿಕ ಚಿತ್ರ)
ಕೋವಿಡ್-19 ಸೋಂಕು ಪತ್ತೆ ಪರೀಕ್ಷೆ (ಸಾಂಕೇತಿಕ ಚಿತ್ರ)

ಮಹಾರಾಷ್ಟ್ರದಲ್ಲಿ ಒಂದೇ ದಿನ 6 ಓಮಿಕ್ರಾನ್ ಪ್ರಕರಣ ವರದಿ; ದೇಶದಲ್ಲಿ ಸೋಂಕಿತರ ಸಂಖ್ಯೆ 150ಕ್ಕೆ ಏರಿಕೆ

ಮಹಾರಾಷ್ಟ್ರದಲ್ಲಿ ಭಾನುವಾರ ಓಮಿಕ್ರಾನ್ ಕೋವಿಡ್-19 ರೂಪಾಂತರಿ ಸೋಂಕು ಹರಡಿರುವ 6 ಹೊಸ ಪ್ರಕರಣಗಳು ವರದಿಯಾಗಿದ್ದು, ಭಾರತದಲ್ಲಿ ಓಮಿಕ್ರಾನ್ ಸೋಂಕಿತರ ಸಂಖ್ಯೆ 151 ಕ್ಕೆ ಏರಿಕೆಯಾಗಿದೆ.
Published on

ನವದೆಹಲಿ: ಮಹಾರಾಷ್ಟ್ರದಲ್ಲಿ ಭಾನುವಾರ ಓಮಿಕ್ರಾನ್ ಕೋವಿಡ್-19 ರೂಪಾಂತರಿ ಸೋಂಕು ಹರಡಿರುವ 6 ಹೊಸ ಪ್ರಕರಣಗಳು ವರದಿಯಾಗಿದ್ದು, ಭಾರತದಲ್ಲಿ ಓಮಿಕ್ರಾನ್ ಸೋಂಕಿತರ ಸಂಖ್ಯೆ 151 ಕ್ಕೆ ಏರಿಕೆಯಾಗಿದೆ. 

ಈ ನಡುವೆ ಬ್ರಿಟನ್ ನಿಂದ ಇತ್ತೀಚೆಗೆ ಗುಜರಾತ್‌ಗೆ ಆಗಮಿಸಿದ 45 ವರ್ಷದ ಎನ್‌ಆರ್‌ಐ ಮತ್ತು ಹದಿಹರೆಯದ ಹುಡುಗನಿಗೆ ಕೋವಿಡ್-19 ರೂಪಾಂತರಿ ಓಮಿಕ್ರಾನ್ ಪಾಸಿಟಿವ್ ದೃಢಪಟ್ಟಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ ಓಮಿಕ್ರಾನ್ ಪ್ರಕರಣಗಳು 11 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ- ಮಹಾರಾಷ್ಟ್ರ (54) ದೆಹಲಿ (22) ರಾಜಸ್ಥಾನ (17) ಕರ್ನಾಟಕ (14) ತೆಲಂಗಾಣ (20) ಗುಜರಾತ್ (9)  ಕೇರಳ (11) ಆಂಧ್ರಪ್ರದೇಶ (1) ಚಂಡೀಗಢ (1) ತಮಿಳುನಾಡು (1) ಪಶ್ಚಿಮ ಬಂಗಾಳ (1) ಪ್ರಕರಣಗಳು ವರದಿಯಾಗಿವೆ. 

ಮಹಾರಾಷ್ಟ್ರದಲ್ಲಿ 6 ಪ್ರಕರಣಗಳು ವರದಿಯಾಗುವ ಮೂಲಕ  ಆ ರಾಜ್ಯದಲ್ಲಿನ ಓಮಿಕ್ರಾನ್ ಸೋಂಕಿತರ ಸಂಖ್ಯೆ 54 ಕ್ಕೆ ಏರಿಕೆಯಾಗಿದೆ.  ಹೊಸದಾಗಿ ಸೋಂಕು ತಗುಲಿಸಿಕೊಂಡಿರುವ 6 ಮಂದಿಯ ಪೈಕಿ 5 ಮಂದಿ ಪೂರ್ಣ ಪ್ರಮಾಣದ ಲಸಿಕೆ ಪಡೆದಿದ್ದಾರೆ. 54 ಪ್ರಕರಣಗಳ ಪೈಕಿ 22 ಪ್ರಕರಣಗಳು ಮುಂಬೈ ನಲ್ಲಿ ಪತ್ತೆಯಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com