12 ರಿಂದ 18 ವರ್ಷದ ಮಕ್ಕಳಿಗೆ ಕೋವ್ಯಾಕ್ಸಿನ್ ತುರ್ತು ಬಳಕೆಗೆ ಡಿಸಿಜಿಐ ಅನುಮತಿ

ಮಹತ್ವದ ಬೆಳವಣಿಗೆಯಲ್ಲಿ 12 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೊರೊನಾ ಲಸಿಕೆ ಕೋವ್ಯಾಕ್ಸಿನ್ ತುರ್ತು ಬಳಕೆಗೆ ಭಾರತೀಯ ಔಷಧ ನಿಯಂತ್ರಣ ಸಂಸ್ಥೆ(ಡಿಸಿಜಿಐ) ಅನುಮತಿ ನೀಡಿದೆ.
ಕೊವಾಕ್ಸಿನ್
ಕೊವಾಕ್ಸಿನ್
Updated on

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ 12 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೊರೊನಾ ಲಸಿಕೆ ಕೋವ್ಯಾಕ್ಸಿನ್ ತುರ್ತು ಬಳಕೆಗೆ ಭಾರತೀಯ ಔಷಧ ನಿಯಂತ್ರಣ ಸಂಸ್ಥೆ(ಡಿಸಿಜಿಐ) ಅನುಮತಿ ನೀಡಿದೆ.

ನಿನ್ನೆಯಷ್ಟೇ ಪ್ರಧಾನಿ ಮೋದಿ ದೇಶವನ್ನುದ್ದೇಶಿಸಿ ಮಾತನಾಡುತ್ತಾ ಬೂಸ್ಟರ್ ಡೋಸ್ ಮತ್ತು ಮಕ್ಕಳ ಲಸಿಕೆ ಕುರಿತು ಮಾತನಾಡಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ಡಿಸಿಜಿಐ Drugs Controller General of India (DCGI) 12 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೊರೊನಾ ಲಸಿಕೆ ಕೋವ್ಯಾಕ್ಸಿನ್ ತುರ್ತು ಬಳಕೆಗೆ ಅನುಮತಿ ನೀಡಿದೆ.

ದೇಶದಲ್ಲಿ ಓಮಿಕ್ರಾನ್ ಸೊಂಕಿತರ ಸಂಖ್ಯೆ ಏರಿಕೆ ಕಾಣುತ್ತಿದ್ದಂತೆ ಮೂರನೇ ಅಲೆ ಬರುವ ಸಾಧ್ಯತೆ ದಟ್ಟವಾಗಿದ್ದು, ಈ ಹಿಂದೆ ತಜ್ಞರು ಮೂರನೇ ಅಲೆ ಮಕ್ಕಳಿಗೆ ಪರಿಣಾಮ ಬೀರುತ್ತದೆ ಎಂಬ ಅಭಿಪ್ರಾಯ ತಿಳಿಸಿದ್ದರು. ಇದೀಗ ಮೂರನೇ ಅಲೆ ಪ್ರಾರಂಭದ ಹಂತದಲ್ಲೇ ಮಕ್ಕಳಿಗೆ ಭಾರತ್ ಬಯೋಟೆಕ್ ಕೋವ್ಯಾಕ್ಸಿನ್ ಲಸಿಕೆ ತುರ್ತು ಬಳಕೆಗೆ ಡಿಸಿಜಿಐ ಅನುಮತಿ ನೀಡಿದೆ.  ಎರಡು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಭಾರತ್ ಬಯೋಟೆಕ್‍ನ ಕೋವ್ಯಾಕ್ಸಿನ್ ಲಸಿಕೆಯ ಪರೀಕ್ಷೆ ನಡೆದಿದ್ದು, ಮಕ್ಕಳ ಮೇಲೆ ಕೋವ್ಯಾಕ್ಸಿನ್ ಲಸಿಕೆಯ ಕ್ಲಿನಿಕಲ್ ಪ್ರಯೋಗಕ್ಕೆ ಸಂಬಂಧಿಸಿದ ದತ್ತಾಂಶವನ್ನು ಭಾರತ್ ಬಯೋಟೆಕ್ ಕಂಪನಿ ಡಿಸಿಜಿಐಗೆ ಸಲ್ಲಿಸಿತ್ತು. 

ಇದನ್ನೂ ಓದಿ: ರಾಜಸ್ಥಾನದಲ್ಲಿ 21 ಹೊಸ ಓಮಿಕ್ರಾನ್ ಪ್ರಕರಣ ದೃಢ: 43ಕ್ಕೆ ಏರಿಕೆ|

ಐಸಿಎಂಆರ್(Indian Council of Medical Research) ಮತ್ತು ಹೈದರಾಬಾದ್ ಮೂಲದ ಲಸಿಕೆ ತಯಾರಕ ಭಾರತ್ ಬಯೋಟೆಕ್ ಕೋವ್ಯಾಕ್ಸಿನ್ ಅನ್ನು ಅಭಿವೃದ್ಧಿಪಡಿಸಿದ್ದು, ಭಾರತದ ಮೊದಲ ಸ್ಥಳೀಯ ಕೋವಿಡ್ -19 ಲಸಿಕೆಯಾಗಿದೆ. ಕಳೆದ ಅಕ್ಟೋಬರ್‌ನಲ್ಲಿ ಕೋವ್ಯಾಕ್ಸಿನ್‌ ಲಸಿಕೆಯನ್ನು 12-18ರ ವರ್ಷದ ಮಕ್ಕಳಿಗೆ ಬಳಸಲು ಕೊರೋನಾ ಲಸಿಕೆ ಸಂಬಂಧಿಸಿದ ತಜ್ಞರ ಸಮಿತಿ ಅನುಮೋದನೆ ನೀಡಿತ್ತು. ಅಂತಿಮ ಹಂತದ ಅನುಮೋದನೆಗಾಗಿ ಡಿಸಿಜಿಐಗೆ (DCGI)  ಕಳುಹಿಸಿಕೊಡಲಾಗಿತ್ತು.

 ಈಗಾಗಲೇ 18 ವರ್ಷ ಮೇಲ್ಪಟ್ಟವರು ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆ ಪಡೆಯುತ್ತಿದ್ದಾರೆ. ಆದರೆ ಈವರೆಗೆ ಮಕ್ಕಳಿಗೆ ಕೊರೊನಾ ಲಸಿಕೆಗೆ ಡಿಸಿಜಿಐ ಒಪ್ಪಿಗೆ ಸೂಚಿಸಿರಲಿಲ್ಲ ಇದೀಗ ಮಕ್ಕಳಿಗೂ ಕೂಡ ತುರ್ತು ಬಳಕೆಗೆ ಒಪ್ಪಿಗೆ ಸಿಕ್ಕಿದೆ.

ವಯಸ್ಕರ ಲಸಿಕೆಯೇ ಬಳಕೆ
ಸದ್ಯ ವಯಸ್ಕರಿಗೆ ಬಳಸಲಾಗುತ್ತಿರುವ ಕೋವ್ಯಾಕ್ಸಿನ್‌ ಲಸಿಕೆಯನ್ನೇ ಮಕ್ಕಳ ಮೇಲೂ ಪ್ರಯೋಗಕ್ಕೆ ಒಳಪಡಿಸಲಾಗಿತ್ತು. ದೇಶದ 6 ಕಡೆ 1000ಕ್ಕೂ ಹೆಚ್ಚು ಮಕ್ಕಳ (Kids) ಮೇಲೆ ಲಸಿಕೆಯನ್ನು ಪ್ರಯೋಗಿಸಲಾಗಿತ್ತು. ಮಕ್ಕಳ ಮೇಲಿನ ಲಸಿಕೆಯ ಕ್ಲಿನಿಕಲ್‌ ಪ್ರಯೋಗ ವರದಿಯನ್ನು ಭಾರತ್‌ ಬಯೋಟೆಕ್‌ ಕಂಪನಿ ಕೇಂದ್ರೀಯ ಔಷಧ ಗುಣಮಟ್ಟನಿಯಂತ್ರಣ ಸಂಸ್ಥೆಗೆ ಸಲ್ಲಿಸಿತ್ತು. ಬಳಿಕ ವಿಷಯ ತಜ್ಞರ ಸಮಿತಿ ಇದನ್ನು ಪರಿಶೀಲಿಸಿ ಅನುಮೋದನೆ ಒಪ್ಪಿಗೆ ನೀಡಿತ್ತು.

ಶೇ.77ರಷ್ಟು ರಕ್ಷಣೆ:    
ಕೋವ್ಯಾಕ್ಸಿನ್‌ ಲಸಿಕೆಯನ್ನು ವಯಸ್ಕರಂತೆಯೇ 28 ದಿನಗಳ ಅಂತರದಲ್ಲಿ ಎರಡು ಡೋಸ್‌ ಮೂಲಕ ನೀಡಲಾಗುತ್ತದೆ. ಪ್ರಯೋಗ ಹಂತದಲ್ಲಿ ಲಸಿಕೆಯು ವಯಸ್ಕರಷ್ಟೇ ಮಕ್ಕಳ ಮೇಲೂ ಪರಿಣಾಮಕಾರಿಯಾಗಿದೆ. ಕೋವಿಡ್‌ ವೈರಸ್‌ ವಿರುದ್ಧ ಮಕ್ಕಳಿಗೆ ಶೇ.77.8ರಷ್ಟುರಕ್ಷಣೆ ಒದಗಿಸುತ್ತದೆ ಎಂದು ವರದಿಗಳು ತಿಳಿಸಿವೆ.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com