ಮಹಾತ್ಮ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ: ಖಜುರಾಹೋದಲ್ಲಿ ಸನ್ಯಾಸಿ ಕಾಳಿಚರಣ್ ಮಹಾರಾಜ್ ಬಂಧನ

ಛತ್ತೀಸ್‌ಗಢದ ರಾಯ್‌ಪುರ್ ದಲ್ಲಿ ನಡೆದ ಧರ್ಮ ಸಂಸದ್ ಕಾರ್ಯಕ್ರಮದಲ್ಲಿ ಕಾಳಿಚರಣ್, ಗಾಂಧೀಜಿ ಅವರನ್ನು ನಿಂದಿಸಿದ್ದಲ್ಲದೆ, ಅವರನ್ನು ಕೊಂದ ನಾಥೂರಾಂ ಗೋಡ್ಸೆಯನ್ನು ಹೊಗಳಿದ್ದರು. 
ಕಾಳಿಚರಣ್ ಮಹಾರಾಜ್
ಕಾಳಿಚರಣ್ ಮಹಾರಾಜ್

ರಾಯ್‌ಪುರ್: ರಾಷ್ಟ್ರಪಿತ ಮಹಾತ್ಮಾ ಗಾಂಧಿ ಕುರಿತಾಗಿ ನಿಂದನಾತ್ಮಕ ಹೇಳಿಕೆ ನೀಡಿದ್ದ ಕಾಳಿಚರಣ್ ಮಹಾರಾಜ್ ಅವರನ್ನು ರಾಯ್‌ಪುರ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಖಜುರಾಹೋದಲ್ಲಿದ್ದ ಕಾಳಿ ಚರಣ್‌ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಛತ್ತೀಸ್‌ಗಢದ ರಾಯ್‌ಪುರ್ ದಲ್ಲಿ ನಡೆದ ಧರ್ಮ ಸಂಸದ್ ಕಾರ್ಯಕ್ರಮದಲ್ಲಿ ಕಾಳಿಚರಣ್, ಗಾಂಧೀಜಿ ಅವರನ್ನು ನಿಂದಿಸಿದ್ದಲ್ಲದೆ, ಅವರನ್ನು ಕೊಂದ ನಾಥೂರಾಂ ಗೋಡ್ಸೆಯನ್ನು ಹೊಗಳಿದ್ದರು. 

ರಾಯ್‌ ಪುರ್‌ ಮಾಜಿ ಮೇಯರ್‌ ಪ್ರಮೋದ್‌ ದುಬೆ ನೀಡಿದ್ದ ದೂರು ಆಧರಿಸಿ ತಿಕ್ರಪಾರಾ ಠಾಣೆ ಪೊಲೀಸರು ಕಾಳಿ ಚರಣ್ ವಿರುದ್ಧ ಐಪಿಸಿ ಸೆಕ್ಷನ್ 505 (2) 294 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ರಾಯ್‌ ಪುರ್‌ ಪೊಲೀಸರು ಪ್ರಕರಣ ದಾಖಲಿಸಿದ ಕೂಡಲೇ ಕಾಳಿಚರಣ್‌ ಮಹಾರಾಜ್‌ ಚತ್ತೀಸಘಡದಿಂದ ನಾಪತ್ತೆಯಾಗಿದ್ದರು ಎಂದು ವರದಿಯಾಗಿದೆ.

ಆರೋಪಿ ಕಾಳಿಚರಣ್‌ನನ್ನು ಬಂಧಿಸಲು ಪೊಲೀಸರು ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶ ರಾಜ್ಯಗಳಿಗೆ ವಿಶೇಷ ತಂಡಗಳನ್ನು ಕಳುಹಿಸಲಾಗಿತ್ತು ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com