ಉತ್ತರ ಪ್ರದೇಶದಲ್ಲಿ ಬಿಜೆಪಿ ಮಣಿಸಲು ಹೊಸ ಸೂತ್ರ; 5 ವರ್ಷದಲ್ಲಿ 5 ಸಿಎಂ 20 ಉಪ ಮುಖ್ಯಮಂತ್ರಿ!

ಉತ್ತರ ಪ್ರದೇಶದ ಆಡಳಿತಾರೂಢ ಬಿಜೆಪಿಯನ್ನು ಶತಾಯಗತಾಯ ಮಣಿಸಲೇಬೇಕು ಎಂದು ಸಜ್ಜಾಗಿರುವ ಪ್ರತಿಪಕ್ಷಗಳು ಇದೀಗ ಹೊಸ ಮೈತ್ರಿಕೂಟವನ್ನೇ ರಚನೆ ಮಾಡಿಕೊಂಡಿದ್ದು, 5 ವರ್ಷಗಳಲ್ಲಿ 5 ಸಿಎಂ 20 ಉಪ ಮುಖ್ಯಮಂತ್ರಿಗಳ ಸೂತ್ರವನ್ನು ಸಿದ್ಧಪಡಿಸಿವೆ.
Om Prakash Rajbhar
Om Prakash Rajbhar
Updated on

ಲಖನೌ: ಉತ್ತರ ಪ್ರದೇಶದ ಆಡಳಿತಾರೂಢ ಬಿಜೆಪಿಯನ್ನು ಶತಾಯಗತಾಯ ಮಣಿಸಲೇಬೇಕು ಎಂದು ಸಜ್ಜಾಗಿರುವ ಪ್ರತಿಪಕ್ಷಗಳು ಇದೀಗ ಹೊಸ ಮೈತ್ರಿಕೂಟವನ್ನೇ ರಚನೆ ಮಾಡಿಕೊಂಡಿದ್ದು, 5 ವರ್ಷಗಳಲ್ಲಿ 5 ಸಿಎಂ 20 ಉಪ ಮುಖ್ಯಮಂತ್ರಿಗಳ ಸೂತ್ರವನ್ನು ಸಿದ್ಧಪಡಿಸಿವೆ.

ಹೌದು.. ಈ ಬಗ್ಗೆ ಸುಹೇಲ್ ದೇವ್ ಭಾರತೀಯ ಸಮಾಜ ಪಾರ್ಟಿ ಮುಖ್ಯಸ್ಥ ಓಂ ಪ್ರಕಾಶ್ ರಾಜ್ ಭರ್ ಅವರು ಮಾಹಿತಿ ನೀಡಿದ್ದು, ಎಂಐಎಂ ಸೇರಿದಂತೆ ಒಟ್ಟು 10 ಪಕ್ಷಗಳು ಸೇರಿ ಮೈತ್ರಿಕೂಟ ರಟನೆ ಮಾಡಲಾಗಿದೆ. ಇದನ್ನು ಭಗಿದಾರಿ ಸಂಕಲ್ಪ ಮೋರ್ಚಾ ಎಂದು ಹೆಸರಿಸಲಾಗಿದ್ದು, ಬಿಜೆಪಿಯನ್ನು ಅಧಿಕಾರದಿಂದ  ದೂರು ಇಡುವುದೇ ಈ ಮೈತ್ರಿಕೂಟದ ಸಂಕಲ್ಪವಾಗಿದೆ ಎಂದು ಹೇಳಿದ್ದಾರೆ.

ಆದಾಗ್ಯೂ, ಅಧಿಕಾರವನ್ನು ಹಂಚಿಕೊಳ್ಳುವ ದೃಢನಿಶ್ಚಯವು ಇದರಲ್ಲಿ ದೊಡ್ಡದಾಗಿದ್ದು, ಚುನಾವಣೆಗೆ ಇನ್ನೂ ಸಮಯವಿದೆ, ಯಾರು ಸರ್ಕಾರ ರಚಿಸುತ್ತಾರೆ ಎಂಬುದನ್ನು ಮತದಾರರು ನಿರ್ಧರಿಸುತ್ತಾರೆ, ಆದರೆ ಎಷ್ಟು ಮಂದಿ ಮತ್ತು ಯಾರು ಸಿಎಂ ಮತ್ತು ಉಪ ಸಿಎಂ ಆಗುತ್ತಾರೆ ಎಂದು ಮೈತ್ರಿಕೂಟ ನಿರ್ಧರಿಸಿದೆ.

ಸುಹೇಲ್ದೇವ್ ಭಾರತೀಯ ಸಮಾಜ ಪಕ್ಷದ (ಸುಭಾಸ್ಪ್) ಮುಖ್ಯಸ್ಥ ಓಂ ಪ್ರಕಾಶ್ ರಾಜ್ಭರ್ ಅವರ ಪ್ರಕಾರ, ಅವರ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಐದು ವರ್ಷಗಳಲ್ಲಿ ಐದು ಸಿಎಂಗಳನ್ನು ನೇಮಕ ಮಾಡಲಾಗುತ್ತದೆ. ಐದು ಸಮುದಾಯಗಳಿಂದ ಐದು ಮಂದಿ ಸಿಎಂ ಆಗುತ್ತಾರೆ. ಅಂದರೆ ಕುಶ್ವಾಹ, ರಾಜ್ಭರ್, ಚೌಹಾಣ್, ಮುಸ್ಲಿಂ ಮತ್ತು ಪಟೇಲ್ ಸಮುದಾಯದಿಂದ ಸಿಎಂಗಳಾಗುತ್ತಾರೆ.  ಬಳಿಕ ಪ್ರತಿ ವರ್ಷ ನಾಲ್ಕು ಉಪ ಮುಖ್ಯಮಂತ್ರಿಗಳ ಸೂತ್ರ ಕೂಡ ಇದ್ದು, ಐದು ವರ್ಷಕ್ಕೆ ಇಪ್ಪತ್ತು ಉಪ ಮುಖ್ಯಮಂತ್ರಿಗಳನ್ನು ನೇಮಕ ಮಾಡಲಾಗುವುದು ಎಂದು ಹೇಳಿದರು.

403 ಸ್ಥಾನಗಳಲ್ಲೂ ಸ್ಪರ್ಧೆ
ಭಗಿದಾರಿ ಸಂಕಲ್ಪ ಮೋರ್ಚಾ ಸಣ್ಣ ಪಕ್ಷಗಳ ವೇದಿಕೆಯಾಗಿದ್ದು, ಇದರಲ್ಲಿ ಓಂ ಪ್ರಕಾಶ್ ರಾಜ್‌ಭರ್ ಅವರ ಸುಭಾಸ್ಪಿ ಮತ್ತು ಅಸದುದ್ದೀನ್ ಒವೈಸಿ ಅವರ ಎಐಐಎಂ, ಕೃಷ್ಣ ಪಟೇಲ್ ನೇತೃತ್ವದ ಅಪ್ನಾ ದಳ ಮತ್ತು ಮಾಜಿ ಸಚಿವ ಬಾಬು ಸಿಂಗ್ ಕುಶ್ವಾಹ ನೇತೃತ್ವದ ಜನ ಅಧಿಕಾರ ಮಂಚ್ ಸೇರಿವೆ. ಓಂಪ್ರಕಾಶ್  ರಾಜ್‌ಭರ್ ಭಗಿದಿ ಸಂಕಲ್ಪ ಮೋರ್ಚಾ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ 403 ಸ್ಥಾನಗಳಲ್ಲೂ ಸ್ಪರ್ಧಿಸುವುದಾಗಿ ಘೋಷಿಸಿದ್ದು, ಒಟ್ಟಾಗಿ ಸರ್ಕಾರ ರಚಿಸುವುದಾಗಿ ಹೇಳಿಕೊಂಡಿದೆ.

ಕೇಶವ್ ಪ್ರಸಾದ್ ಮೌರ್ಯ ಅವರ ಹೆಸರಿನಲ್ಲಿ ಹಿಂದುಳಿದ ವರ್ಗದ ಮತಗಳನ್ನು ಪಡೆಯುವುದು ಇಷ್ಟವಿಲ್ಲ. ಮುಖ್ಯಮಂತ್ರಿಯನ್ನು ನೇಮಿಸುವ ಸಮಯ ಬಂದಾಗ ಉತ್ತರಾಖಂಡದಿಂದ ಒಬ್ಬರನ್ನು ಕರೆತನ್ನಿ. ಹಿಂದುಳಿದ ಜಾತಿಯ ಜನರು ಮುಖ್ಯಮಂತ್ರಿ ಹುದ್ದೆ ಪಡೆಯಲು ತಮ್ಮ ಸರದಿಗಾಗಿ ಕಾಯುತ್ತಿದ್ದಾರೆ.  ಮುಖ್ಯಮಂತ್ರಿಯಾಗುವುದು ಮತಗಳ ಮೇಲೆ ಅವಲಂಬಿತವಾಗಿದ್ದರೆ, ನಾನು ಏಕೆ ಒಕ್ಕೂಟವನ್ನು ರಚಿಸಬಾರದು ಮತ್ತು ಮುಖ್ಯಮಂತ್ರಿಯಾಗಬಾರದು. ಪ್ರತಿ ಪಕ್ಷವು ಜಾತಿ ಮತ್ತು ಮತ ಬ್ಯಾಂಕ್ ಆಧರಿಸಿ ಟಿಕೆಟ್ ವಿತರಿಸುತ್ತದೆ. ಸರ್ಕಾರಿ ಅಧಿಕಾರಿಗಳ ಪೋಸ್ಟಿಂಗ್ ಅನ್ನು ಜಾತಿ ಆಧರಿಸಿ ಮಾಡಲಾಗುತ್ತದೆ. ಜನರು ತಮಗೆ ಬೇಕಾದುದನ್ನು ಹೇಳಬಹುದು, ಆದರೆ ಜಾತಿ ಆಧಾರಿತ ರಾಜಕಾರಣವೇ ಸಮಾಜದ ವಾಸ್ತವ. ಇದೇ ಕಾರಣಕ್ಕಾಗಿ ನಾವು ಜಾತಿ ಮತ್ತು ಸಮುದಾಯ ಆಧಾರದ ಮೇಲೆ ಸಿಎಂಗಳನ್ನು ಆಯ್ಕೆ ಮಾಡುತ್ತೇವೆ ಎಂದು ರಾಜ್‌ಭರ್ ಹೇಳಿದರು.

ಇನ್ನು ಭಗಿದಾರಿ ಸಂಕಲ್ಪ ಮೋರ್ಚಾ ನೇತೃತ್ವದಲ್ಲಿ ಉತ್ತರಪ್ರದೇಶದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 100 ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿ ಅಖಿಲ ಭಾರತ ಮಜ್ಲಿಸ್-ಎ-ಇಟ್ಟೇಹದುಲ್ ಮುಸ್ಲೀಮೀನ್ (ಎಐಐಎಂಐಎಂ) ಮುಖ್ಯಸ್ಥ ಅಸದುದ್ದೀನ್ ಒವೈಸಿ ಹೇಳಿದ್ದು, ಸ್ಥಾನ ಹಂಚಿಕೆ ಇನ್ನೂ ಅಂತಿಮವಾಗಿಲ್ಲ. ಸೀಟು ಹಂಚಿಕೆ ಕುರಿತು ನಾವು ಮಾತುಕತೆ ನಡೆಸಿಲ್ಲ. ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಒಕ್ಕೂಟದಲ್ಲಿ ಯಾವುದೇ ವಿವಾದಗಳಿಲ್ಲ ಎಂದು ಹೇಳಿದ್ದಾರೆ.

ಹಗಲುಗನಸು ಕಾಣುತ್ತಿರುವ ರಾಜ್ ಭರ್
ಇನ್ನು ರಾಜ್‌ಭರ್ ಅವರು ಅಧಿಕಾರದ ಹಗಲು ಗನಸು ಕಾಣುತ್ತಿದ್ದು, ಅವರ ಈ ಸೂತ್ರ ಫಲಿಸುವುದಿಲ್ಲ ಎಂದು ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com