ರಾಜ್ಯಗಳ ಬಳಿ ಇನ್ನೂ 1.24 ಕೋಟಿ ಡೋಸ್ ಕೋವಿಡ್ ಲಸಿಕೆ ಉಳಿದಿದೆ: ಕೇಂದ್ರ ಸರ್ಕಾರ

ದೇಶದ ಹಲವು ರಾಜ್ಯಗಳು ಕೋವಿಡ್ ಲಸಿಕೆಯ ಕೊರತೆಯ ಕುರಿತು ವರದಿ ಮಾಡುತ್ತಿರುವ ಬೆನ್ನಲ್ಲೇ ಈ ಕುರಿತು ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಬಳಿ ಇನ್ನೂ 1.24 ಕೋಟಿ ಡೋಸ್ ಲಸಿಕೆ ಬಳಕೆಯಾಗದೇ ಉಳಿದಿದೆ ಎಂದು ಹೇಳಿದೆ.
ಕೋವಿಡ್-19 ಲಸಿಕೆ
ಕೋವಿಡ್-19 ಲಸಿಕೆ

ನವದೆಹಲಿ: ದೇಶದ ಹಲವು ರಾಜ್ಯಗಳು ಕೋವಿಡ್ ಲಸಿಕೆಯ ಕೊರತೆಯ ಕುರಿತು ವರದಿ ಮಾಡುತ್ತಿರುವ ಬೆನ್ನಲ್ಲೇ ಈ ಕುರಿತು ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಬಳಿ ಇನ್ನೂ 1.24 ಕೋಟಿ ಡೋಸ್ ಲಸಿಕೆ ಬಳಕೆಯಾಗದೇ ಉಳಿದಿದೆ ಎಂದು ಹೇಳಿದೆ.

ದೇಶದಲ್ಲಿ ಕೋವಿಡ್ ಲಸಿಕಾ ಅಭಿಯಾನ ಭರದಿಂದ ಸಾಗಿದ್ದು, ಸಾಕಷ್ಟು ರಾಜ್ಯಗಳಲ್ಲಿ ಲಸಿಕೆ ವಿತರಣೆ ಕಾರ್ಯ ಚುರುಕು ಪಡೆದಿದೆ. ಇದರ ನಡುವೆಯೇ ಹಲವಾರು ರಾಜ್ಯಗಳು ಲಸಿಕೆಗಳ ಕೊರತೆಯನ್ನು ಎದುರಿಸುತ್ತಿರುವ ಕುರಿತು ವರದಿಗಳು ಕೂಡ ಕೇಳಿಬಂದಿದೆ. ಅದಾಗ್ಯೂ 1.24 ಕೋಟಿಗೂ ಹೆಚ್ಚು ಕೋವಿಡ್ ಲಸಿಕೆಗಳು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಬಳಿ ಬಾಕಿ ಅಥವಾ ಬಳಕೆಯಾಗದೇ ಉಳಿದಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಗುರುವಾರ ಈ ಕುರಿತಂತೆ ಹೇಳಿಕೆ ಬಿಡುಗಡೆ ಮಾಡಿರುವ ಕೇಂದ್ರ ಸರ್ಕಾರ ಮುಂದಿನ ವಾರ ರಾಜ್ಯಗಳಿಗೆ 94,66,420ಡೋಸ್ ಲಸಿಕೆ ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಮುಂದಿನ ಮೂರು ದಿನಗಳಲ್ಲಿ ಈ ಲಸಿಕೆಗಳನ್ನು ಪೂರೈಕೆ ಮಾಡಲಾಗುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ಭಾರತ ಸರ್ಕಾರ (ಉಚಿತ ಲಸಿಕೆ) ಮತ್ತು ನೇರ ರಾಜ್ಯ ಖರೀದಿ ವಿಭಾಗದ ಮೂಲಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಇದುವರೆಗೆ 32.92 ಕೋಟಿ ಡೋಸ್ ಲಸಿಕೆಗಳನ್ನು ನೀಡಲಾಗಿದೆ. ಇದರಲ್ಲಿ ವ್ಯರ್ಥ ಸೇರಿದಂತೆ ಒಟ್ಟು ಬಳಕೆ 31,67,50,891 ಪ್ರಮಾಣವಾಗಿದೆ ಎಂದು ಸಚಿವಾಲಯ ಮಾಹಿತಿ  ನೀಡಿದೆ. ಆ ಮೂಲಕ ಇನ್ನೂ 1.24 ಕೋಟಿ ಡೋಸ್ ಗಿಂತ ಹೆಚ್ಚು (1,24,50,909) ಲಸಿಕೆಗಳು ಬಾಕಿ ಮತ್ತು ಬಳಕೆಯಾಗದೇ ಉಳಿದೆ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com