ಹೆಸರು: ಎಂಎಸ್ ಧೋನಿ, ತಂದೆ ಹೆಸರು: ಸಚಿನ್ ತೆಂಡೂಲ್ಕರ್; ಟೀಚರ್ ಹುದ್ದೆಗೆ ಅರ್ಜಿ, ಪೊಲೀಸ್ ದೂರು ದಾಖಲು, ತನಿಖೆಗೆ ಆದೇಶ!

ಸಚಿನ್ ತೆಂಡೂಲ್ಕರ್ ಅವರ ಪುತ್ರ ಎಂಎಸ್ ಧೋನಿ ಟೀಚರ್ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಿದ್ದು, ಇದನ್ನು ನೋಡಿ ಆಘಾತಕ್ಕೊಳಗಾದ ಅಧಿಕಾರಿಗಳು ಪೊಲೀಸ್ ದೂರು ನೀಡಿದ್ದಾರೆ.
ಧೋನಿ-ಸಚಿನ್
ಧೋನಿ-ಸಚಿನ್
Updated on

ರಾಯ್ ಪುರ: ಸಚಿನ್ ತೆಂಡೂಲ್ಕರ್ ಅವರ ಪುತ್ರ ಎಂಎಸ್ ಧೋನಿ ಟೀಚರ್ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಿದ್ದು, ಇದನ್ನು ನೋಡಿ ಆಘಾತಕ್ಕೊಳಗಾದ ಅಧಿಕಾರಿಗಳು ಪೊಲೀಸ್ ದೂರು ನೀಡಿದ್ದಾರೆ.

ಹೌದು.. ಛತ್ತೀಸ್ ಗಢದಲ್ಲಿ ಅಲ್ಲಿನ ಶಿಕ್ಷಣ ಇಲಾಖೆ ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನಿಸಿದ್ದು, ಈ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆಯುತ್ತಿರುವ ಬೃಹತ್ ಗೋಲ್ ಮಾಲ್ ಗೆ ಈ ಒಂದೇ ಒಂದು ಅರ್ಜಿ ಸ್ಪಷ್ಟ ನಿದರ್ಶನವಾಗಿದೆ. ಧೋನಿ ಹೆಸರಿನಲ್ಲಿ ಅರ್ಜಿ ಹಾಕಲಾಗಿದ್ದು, ಈ ಅರ್ಜಿಯನ್ನು ನೋಡಿ ಅವಾಕ್ಕಾದ  ಅಧಿಕಾರಿಗಳು ಅರ್ಜಿದಾರನ ವಿರುದ್ಧ ದೂರು ದಾಖಲಿಸಿದ್ದಾರೆ.

ಏನಿದು ಪ್ರಕರಣ?
ಛತ್ತೀಸ್ ಗಢ ಶಿಕ್ಷಣ ಇಲಾಖೆ ವತಿಯಿಂದ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 14850 ಶಿಕ್ಷಕರ ನೇಮಕಾತಿಗಾಗಿ ರಾಜ್ಯಸರ್ಕಾರದಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಲಕ್ಷಾಂತರ ಮಂದಿ ಉದ್ಯೋಗಾಕಾಂಕ್ಷಿಗಳು ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಈ ಪೈಕಿ ಒಂದು ಅರ್ಜಿ ಎಂಎಸ್  ಧೋನಿ ಎಂಬ ಹೆಸರಿನಿಂದ ಬಂದಿದೆ. ಇದನ್ನು ಗಮನಿಸಿದ ಅಧಿಕಾರಿಗಳು ಅರೆ ಧೋನಿ ಟೀಚರ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆಯೇ ಎಂದು ಅರ್ಜಿ ಪರಿಶೀಲಿಸಿದಾಗ ಅದು ನಕಲಿ ಅರ್ಜಿ ಎಂದು ತಿಳಿದಿದೆ. ಅರ್ಜಿಯಲ್ಲಿ ಅರ್ಜಿದಾರನ ಹೆಸರು ಎಂಎಸ್ ಧೋನಿ ಎಂದೂ ತಂದೆಯ ಹೆಸರು ಸಚಿನ್ ತೆಂಡೂಲ್ಕರ್ ಎಂದೂ  ದಾಖಲಿಸಲಾಗಿದೆ. ಅಲ್ಲದೆ ಎಂ.ಎಸ್.ಧೋನಿ ಅವರು ದುರ್ಗ್‌ನ ಸಿಎಸ್‌ವಿಟಿಯು ವಿಶ್ವವಿದ್ಯಾಲಯದಿಂದ ಎಂಜಿನಿಯರಿಂಗ್ ಪದವೀಧರರಾಗಿದ್ದಾರೆ. ಈ ಅರ್ಜಿ ಬೆನ್ನಲ್ಲೇ ಅಕ್ರಮದ ವಾಸನೆ ಹಿಡಿದ ಅಧಿಕಾರಿಗಳು ಪೊಲೀಸ್ ದೂರು ದಾಖಲಿಸಿದ್ದಾರೆ.

ಶಿಕ್ಷಕರ ಸಂದರ್ಶನಕ್ಕೆ ಎಂ.ಎಸ್.ಧೋನಿ ಸೇರಿದಂತೆ 15 ಜನರನ್ನು ಅಧಿಕಾರಿಗಳು ಶುಕ್ರವಾರ ಕರೆದಿದ್ದರು. ಇದರಲ್ಲಿ ಎಲ್ಲರೂ ಹಾಜರಿದ್ದರು. ಆದರೆ ಈ ನಕಲಿ ಅರ್ಜಿ ಸಲ್ಲಿಕೆ ಮಾಡಿದ್ದ ಎಂ.ಎಸ್.ಧೋನಿ ಗೈರು ಹಾಜರಾಗಿದ್ದರು. ಅದಾಗಲೇ ಅಧಿಕಾರಿಗಳಿಗೆ ಅಕ್ರಮದ ಅನುಮಾನ ಗಾಢವಾಗಿತ್ತು. ಹೀಗಾಗಿ  ಅಧಿಕಾರಿಗಳು ಪೊಲೀಸ್ ದೂರು ನೀಡಿ ತನಿಖೆ ನಡೆಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com