ರಿಬ್ಬನ್ ಕಟ್ಟಿಂಗ್ ಗೆ ತೆರಳಿದ್ದ ತೆಲಂಗಾಣ ಸಿಎಂ ಕತ್ತರಿ ಸಿಗದೇ ಕೋಪದಿಂದ ಮಾಡಿದ್ದೇನು ನೋಡಿ?

ಸಮುದಾಯ ವಸತಿ ಸಮುಚ್ಛಯ ಲೋಕಾರ್ಪಣೆ ಕಾರ್ಯಕ್ರಮಕ್ಕೆ ತೆರಳಿದ್ದ ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಒಂದು ಕ್ಷಣ ತಾಳ್ಮೆ ಕಳೆದುಕೊಂಡ ಘಟನೆ ಸೋಮವಾರ ನಡೆದಿದೆ.
ತೆಲಂಗಾಣ ಸಿಎಂ ಕೆಸಿಆರ್
ತೆಲಂಗಾಣ ಸಿಎಂ ಕೆಸಿಆರ್
Updated on

ಹೈದರಾಬಾದ್: ಸಮುದಾಯ ವಸತಿ ಸಮುಚ್ಛಯ ಲೋಕಾರ್ಪಣೆ ಕಾರ್ಯಕ್ರಮಕ್ಕೆ ತೆರಳಿದ್ದ ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಒಂದು ಕ್ಷಣ ತಾಳ್ಮೆ ಕಳೆದುಕೊಂಡ ಘಟನೆ ಸೋಮವಾರ ನಡೆದಿದೆ.

ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯ ತಂಗಲ್ಲಪಲ್ಲಿ ಮಂಡಲದ ಮೆಡಿಪಲ್ಲಿಯಲ್ಲಿ ನೂತನವಾಗಿ ನಿರ್ಮಿಸಲಾಗಿದ್ದ ಸಮುದಾಯ ಹೌಸಿಂಗ್ ಕಟ್ಟಡದ (ಅಪಾರ್ಟ್ ಮೆಂಟ್) ಉದ್ಘಾಟನೆಗೆ ತೆರಳಿದ್ದ ಸಿಎಂ ಕೆ ಚಂದ್ರಶೇಖರ್ ರಾವ್ ಅವರು ಕಟ್ಟಡದ ರಿಬ್ಬನ್ ಕಟ್ಟಿಂಗ್ ಮಾಡಬೇಕಿತ್ತು. ಆದರೆ ಕಾರ್ಯಕ್ರಮದ ಆಯೋಜಕರು ಕತ್ತರಿ  ಸಿಗದೇ ಪರದಾಡಿದ್ದರು. ಈ ವೇಳೆ ತಾಳ್ಮೆ ಕಳೆದುಕೊಂಡ ಸಿಎಂ ಕೆಸಿಆರ್ ನೋಡ ನೋಡುತ್ತಲೇ ರಿಬ್ಬನ್ ಅನ್ನು ಹಿಡಿದು ಎಳೆದು ಬಿಸಾಡಿ ಮಕ್ಕಳಿಗೆ ಒಳಗೆ ಹೋಗುವಂತೆ ಹೇಳಿದರು. 

ಬಡವರಿಗೆ ನಿವೇಶನ ಕಲ್ಪಿಸುವ ನಿಟ್ಟಿನಲ್ಲಿ ತೆಲಂಗಾಣ ಸರ್ಕಾರ ಸಿರ್ಸಿಲ್ಲಾದಲ್ಲಿ 1,320 ಫ್ಲಾಟ್ ಗಳನ್ನು ನಿರ್ಮಾಣ ಮಾಡಿದೆ. ಇದಕ್ಕೆ ಕೆಸಿಆರ್ ನಗರ ಎಂದು ನಾಮಕರಣ ಮಾಡಲಾಗಿದ್ದು, ಸುಮಾರು 80 ಕೋಟಿ ರೂಗಳ ವೆಚ್ಚದಲ್ಲಿ ಈ ಫ್ಲಾಟ್ ಗಳನ್ನು ನಿರ್ಮಾಣ ಮಾಡಲಾಗಿದೆ. 

ಮುಖ್ಯಮಂತ್ರಿಗಳ ಕಚೇರಿಯ ಪ್ರಕಾರ, ಈ ಪ್ರತಿಯೊಂದು ಫ್ಲ್ಯಾಟ್‌ಗಳು 560 ಚದರ ಅಡಿ ವಿಸ್ತೀರ್ಣವನ್ನು ಹೊಂದಿದ್ದು, ಕೆಸಿಆರ್ ನಗರದಲ್ಲಿ 5,000 ಜನರಿಗೆ ವಾಸಿಸಲು ಸೌಲಭ್ಯಗಳಿವೆ.

ಮೇಡಿಪಲ್ಲಿಯಲ್ಲಿ ಅಂತಾರಾಷ್ಟ್ರೀಯ ಚಾಲನಾ ತರಬೇತಿ ಶಾಲೆಯನ್ನು ಮುಖ್ಯಮಂತ್ರಿ ಉದ್ಘಾಟಿಸಿದ್ದು, 20 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಇದು ತೆಲಂಗಾಣದ ಮೊದಲ ಅಂತಾರಾಷ್ಟ್ರೀಯ ಚಾಲನಾ ತರಬೇತಿ ಸಂಸ್ಥೆ ಇದಾಗಿದೆ. ಇದರಲ್ಲಿ 30 ಪರಿಣಿತ ಚಾಲನಾ ತರಬೇತುದಾರರನ್ನು ಹೊಂದಿರುವ ಡ್ರೈವಿಂಗ್  ಇನ್ಸ್ಟಿಟ್ಯೂಟ್ 5,000 ನಿರುದ್ಯೋಗಿ ಯುವಕರಿಗೆ ತರಬೇತಿ ನೀಡಲು ವಿಶ್ವ ದರ್ಜೆಯ ಟ್ರ್ಯಾಕ್‌ಗಳಂತಹ ಎಲ್ಲಾ ಆಧುನಿಕ ಸೌಲಭ್ಯಗಳನ್ನು ಹೊಂದಿದೆ.  
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com