ಜುಲೈ 4 ರಿಂದಲೇ ಕೋವಿಡ್-19 ಮೂರನೇ ಅಲೆ ಆರಂಭವಾಗಿದೆ: ಆಘಾತಕಾರಿ ಮಾಹಿತಿ ಬಿಚ್ಚಿಟ್ಟ ಹೈದರಾಬಾದ್ ವಿಜ್ಞಾನಿ

ಸೆಪ್ಟೆಂಬರ್ ನಲ್ಲಿ ಭಾರತಕ್ಕೆ ಕೋವಿಡ್ ಮೂರನೇ ಅಲೆ ಅಪ್ಪಳಿಸುತ್ತದೆ ಎಂಬ ತಜ್ಞರ ವರದಿಯ ಬೆನ್ನಲ್ಲೇ ಇತ್ತ ಹೈದರಾಬಾದ್ ಮೂಲಕ ವಿಜ್ಞಾನಿಯೊಬ್ಬರು ಕಳೆದ ಜುಲೈ 4ರಿಂದಲೇ ಕೋವಿಡ್ ಮೂರನೇ ಅಲೆ ಆರಂಭವಾಗಿದೆ ಎಂಬ ಆಘಾತಕಾರಿ ಮಾಹಿತಿಯನ್ನು ಹೊರ ಹಾಕಿದ್ದಾರೆ.
ಸಂಗ್ರಹ ಚಿತ್ರ (ಚಿತ್ರಕೃಪೆ: ಪಿಟಿಐ)
ಸಂಗ್ರಹ ಚಿತ್ರ (ಚಿತ್ರಕೃಪೆ: ಪಿಟಿಐ)

ಹೈದರಾಬಾದ್: ಸೆಪ್ಟೆಂಬರ್ ನಲ್ಲಿ ಭಾರತಕ್ಕೆ ಕೋವಿಡ್ ಮೂರನೇ ಅಲೆ ಅಪ್ಪಳಿಸುತ್ತದೆ ಎಂಬ ತಜ್ಞರ ವರದಿಯ ಬೆನ್ನಲ್ಲೇ ಇತ್ತ ಹೈದರಾಬಾದ್ ಮೂಲಕ ವಿಜ್ಞಾನಿಯೊಬ್ಬರು ಕಳೆದ ಜುಲೈ 4ರಿಂದಲೇ ಕೋವಿಡ್ ಮೂರನೇ ಅಲೆ ಆರಂಭವಾಗಿದೆ ಎಂಬ ಆಘಾತಕಾರಿ ಮಾಹಿತಿಯನ್ನು ಹೊರ ಹಾಕಿದ್ದಾರೆ.

ಹೈದರಾಬಾದ್ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ಸೇವೆ ಸಲ್ಲಿಸಿದ ಹಿರಿಯ ಭೌತವಿಜ್ಞಾನಿ ಡಾ.ವಿಪಿನ್ ಶ್ರೀವಾಸ್ತವ ಅವರು, ಭಾರತದಲ್ಲಿ ಕೋವಿಡ್-19 ಸೋಂಕಿನ ಹರಡುವಿಕೆಯನ್ನು ವಿವರವಾಗಿ ವಿಶ್ಲೇಷಿಸಿದ್ದು, ಜುಲೈ 4 ರಿಂದಲೇ ಮೂರನೇ ಅಲೆ ಪ್ರಾರಂಭವಾಗಿರಬಹುದು ಎಂದು ಹೇಳಿದ್ದಾರೆ.

ಕಳೆದ 463 ದಿನಗಳಲ್ಲಿ ದೇಶದಲ್ಲಿ ಸೋಂಕು ಪ್ರಕರಣಗಳು ಮತ್ತು ಸಾವುಗಳ ಸಂಖ್ಯೆಯನ್ನು ಅಧ್ಯಯನ ಮಾಡಲು ವಿಶೇಷ ವಿಧಾನವನ್ನು ಅಭಿವೃದ್ಧಿಪಡಿಸಿರುವ ಡಾ.ವಿಪಿನ್ ಶ್ರೀವಾಸ್ತವ ಅವರು ಈ ವರದಿಯ ಆಧಾರದ ಮೇರೆಗೆ ಜುಲೈ 4 ರ ದಿನಾಂಕದಿಂದಲೇ ಮೂರನೇ ಅಲೆ ಆರಂಭವಾಗಿದೆ ಎಂದು  ಅಭಿಪ್ರಾಯಪಟ್ಟಿದ್ದಾರೆ. ಈ ಹಿಂದೆ ಈ ವರ್ಷದ ಫೆಬ್ರವರಿ ಮೊದಲ ವಾರದಲ್ಲಿ ಎರಡನೇ ತರಂಗ ಆರಂಭವಾಗಿತ್ತು. ಇದರ ಲೆಕ್ಕಾಚಾರದ ಮೇರೆಗೆ ಜುಲೈ 4ರಿಂದಲೇ ಮೂರನೇ ಅಲೆ ಆರಂಭವಾಗಿರಬಹುದು ಎಂದು ಲೆಕ್ಕಾಚಾರ ಹಾಕಿದ್ದಾರೆ. 

ದೈನಂದಿನ ಸಾವಿನ ಸಂಖ್ಯೆಯಲ್ಲಿ ತ್ವರಿತ ಏರಿಳಿತ
ಇನ್ನು ದೇಶದಲ್ಲಿ ಕೋವಿಡ್ ಸೋಂಕಿನಿಂದಾಗಿ ದೈನಂದಿನ ಸಾವಿನ ಪ್ರಕರಣಗಳು (Daily Death Load-DDL) ಹೆಚ್ಚುತ್ತಿರುವ ಪ್ರವೃತ್ತಿ ಕಡಿಮೆಯಾಗುತ್ತಿರುವ ಅಥವಾ ಹೆಚ್ಚಾಗುತ್ತಿರುವ ಪ್ರವೃತ್ತಿ ತೋರುತ್ತಿದೆ. ಈ ಹಿಂದೆ 2ನೇ ಅಲೆ ಆರಂಭಕ್ಕೂ ಮುನ್ನ ಕೂಡ ಇಂತಹುದೇ ಪ್ರವೃತ್ತಿ ಕಂಡುಬಂದಿತ್ತು.  ಹೀಗಾಗಿ ಇದೇ ಲೆಕ್ಕಾಚಾರದಲ್ಲಿ ಶ್ರೀವಾಸ್ತವ ಅವರು 3ನೇ ಅಲೆ ಕುರಿತು ಮಾಹಿತಿ ನೀಡಿದ್ದಾರೆ.

24 ಗಂಟೆಗಳ ಅವಧಿಯಲ್ಲಿ ಸೋಂಕಿನಿಂದ ಉಂಟಾಗುವ ಸಾವಿನ ಅನುಪಾತವನ್ನು ಅದೇ ಅವಧಿಯಲ್ಲಿ ಚಿಕಿತ್ಸೆಯಲ್ಲಿರುವ ಹೊಸ ರೋಗಿಗಳ ಸಂಖ್ಯೆಗೆ ಲೆಕ್ಕಹಾಕಲಾಗಿದ್ದು, ಅದಕ್ಕೆ ಡಿಡಿಎಲ್ ಎಂದು ಶ್ರೀವಾಸ್ತವ ಅವರು ಹೆಸರಿಸಿದ್ದಾರೆ. ಇದೇ ವಿಧಾನದ ಮೇರೆಗೆ, ಕಳೆದ ಫೆಬ್ರವರಿ ಮೊದಲ ವಾರದಲ್ಲಿ, ಡಿಡಿಎಲ್‌ನಲ್ಲಿ  ಈ ಚಂಚಲತೆಯನ್ನು ನಾವು ನೋಡಿದ್ದೇವೆ. ಆದಾಗ್ಯೂ, ಆ ಸಮಯದಲ್ಲಿ ಸೋಂಕಿನಿಂದ ಉಂಟಾಗುವ ಸಾವಿನ ಸಂಖ್ಯೆ 100 ಅಥವಾ ಅದಕ್ಕಿಂತ ಕಡಿಮೆ ಕ್ರಮದಲ್ಲಿತ್ತು. ನಾವು ಅದನ್ನು ನಿರ್ಲಕ್ಷಿಸಿದೆವು. ಆದರೆ ನಂತರ ಪರಿಸ್ಥಿತಿ ಭೀಕರವಾಯಿತು. ಜುಲೈ 4 ರಿಂದ ಇದೇ ರೀತಿಯ ಪ್ರವೃತ್ತಿಯ ಆರಂಭವನ್ನು  ಕಾಣಬಹುದು ಎಂದು ಶ್ರೀವಾಸ್ತವ ಹೇಳಿದ್ದಾರೆ.

ಅಲ್ಲದೆ ಎರಡನೇ ಅಲೆಯ ಭಯಾನಕ ರೂಪವನ್ನು ನೋಡಿದ ನಂತರ, ಸಾರ್ವಜನಿಕರು ಮತ್ತು ಆಡಳಿತ ಅಥವಾ ಸರ್ಕಾರಗಳು ಹೆಚ್ಚಿನ ಎಚ್ಚರಿಕೆ ವಹಿಸಬೇಕಾಗುತ್ತದೆ. ಹೊಸ ಅಲೆಯ ಪ್ರಾರಂಭದ ಬಗ್ಗೆ ಯಾವುದೇ ಸಂದೇಹ ಬೇಡ. ನಾವು ಬಹಳ ಜಾಗರೂಕರಾಗಿರಬೇಕು. 24 ಗಂಟೆಗಳಲ್ಲಿ ಚೇತರಿಸಿಕೊಳ್ಳುವ  ರೋಗಿಗಳ ಸಂಖ್ಯೆಗೆ ಹೋಲಿಸಿದರೆ ಅದೇ ಅವಧಿಯಲ್ಲಿ ಹೊಸ ರೋಗಿಗಳ ಸಂಖ್ಯೆಯು ಹೆಚ್ಚಾಗುತ್ತಿದೆ. ಇದು ಋಣಾತ್ಮಕ ಡಿಡಿಎಲ್ ಸಹ ಉತ್ತಮವಾಗಿಲ್ಲ ಎಂಬುದರ ಸೂಚಕವಾಗಿದೆ. ಹೀಗಾಗಿ ಎಲ್ಲರೂ ಅತ್ಯಂತ ಜಾಗರೂಕರಾಗಿರಬೇಕು ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com