ಭಾರತಕ್ಕೆ ಮತ್ತೊಂದು ಕೊರೋನಾ ಭೀತಿ: ಉತ್ತರ ಪ್ರದೇಶದಲ್ಲಿ 2 ಕಪ್ಪಾ ರೂಪಾಂತರ ಸೋಂಕು ಪ್ರಕರಣಗಳು ಪತ್ತೆ!

ವ್ಯಾಪಕವಾಗಿ ಹರಡಬಲ್ಲ ಕೊವಿಡ್-19ನ ಕಪ್ಪಾ ತಳಿ ರೂಪಾಂತರ ಸೋಂಕುಗಳು ಉತ್ತರ ಪ್ರದೇಶದಲ್ಲಿ ಪತ್ತೆಯಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಲಖನೌ: ವ್ಯಾಪಕವಾಗಿ ಹರಡಬಲ್ಲ ಕೊವಿಡ್-19ನ ಕಪ್ಪಾ ತಳಿ ರೂಪಾಂತರ ಸೋಂಕುಗಳು ಉತ್ತರ ಪ್ರದೇಶದಲ್ಲಿ ಪತ್ತೆಯಾಗಿದೆ.

ಕಪ್ಪಾ ತಳಿಯ ಎರಡು ಪ್ರಕರಣಗಳು ಇಲ್ಲಿ ಪತ್ತೆಯಾಗಿರುವುದಾಗಿ ರಾಜ್ಯ ಸರ್ಕಾರ ಹೇಳಿದೆ. ಅಧಿಕೃತ ಹೇಳಿಕೆಯ ಪ್ರಕಾರ ಲಖನೌದ ಕಿಂಗ್ ಜಾರ್ಜ್ ವೈದ್ಯಕೀಯ ಕಾಲೇಜಿನಲ್ಲನ ಮಾದರಿಗಳನ್ನು ಪರೀಕ್ಷೆಗೊಳಪಡಿಸಿದಾಗ ಈ ತಳಿ ಪತ್ತೆಯಾಗಿದೆ. ಶುಕ್ರವಾರ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯಲ್ಲಿ ಈ ಬಗ್ಗೆ  ಮಾಹಿತಿ ನೀಡಿದ್ದು, ಕಳೆದ ಕೆಲವು ದಿನಗಳಲ್ಲಿ ಇಲ್ಲಿನ ಕಿಂಗ್ ಜಾರ್ಜ್ ವೈದ್ಯಕೀಯ ಕಾಲೇಜಿನಲ್ಲಿ 109 ಮಾದರಿಗಳ ಜೀನೋಮ್ ಪರೀಕ್ಷೆಗಳನ್ನು ಮಾಡಲಾಗಿದೆ.

ಈಗಾಗಲೇ ಉತ್ತರ ಪ್ರದೇಶದಲ್ಲಿ ಡೆಲ್ಟಾ ರೂಪಾಂತರ ಕೂಡ ಪತ್ತೆಯಾಗಿದ್ದು, ಆ ಮೂಲಕ ಉತ್ತರ ಪ್ರದೇಶದಲ್ಲಿ ಎರಡು ರೂಪಾಂತರಗಳು ಪತ್ತೆಯಾದಂತಾಗಿದೆ. ಈ ಎರಡೂ ರೂಪಾಂತರಗಳು ರಾಜ್ಯಕ್ಕೆ ಹೊಸತಲ್ಲ. ರಾಜ್ಯದಲ್ಲಿ ಜೀನೋಮ್ ಅನುಕ್ರಮಣಿಕೆಯ ಸೌಲಭ್ಯವನ್ನು ಹೆಚ್ಚಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ  ಯೋಗಿ ಆದಿತ್ಯನಾಥ ಅವರು ನಡೆಸಿದ ಕೊವಿಡ್ ಪರಿಶೀಲನಾ ಸಭೆಯ ಪ್ರಕಟಣೆ ತಿಳಿಸಿದರು. 

ಈ ಬಗ್ಗೆ ಮಾಹಿತಿ ನೀಡಿದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಆರೋಗ್ಯ) ಅಮಿತ್ ಮೋಹನ್ ಪ್ರಸಾದ್ ಅವರು, 'ಜೀನೋಮ್ ಸೀಕ್ವೆನ್ಸಿಂಗ್ ಎನ್ನುವುದು ಪ್ರಯೋಗಾಲಯ ಪ್ರಕ್ರಿಯೆಯಾಗಿದ್ದು, ಇದು ರೂಪಾಂತರಗಳನ್ನು ನಿರೂಪಿಸಲು ಮತ್ತು ರೋಗ ಪತ್ತೆಹಚ್ಚಲಿರುವ ವಿಧಾನವಾಗಿದೆ. ಪ್ರಸ್ತುತ, ಉತ್ತರ ಪ್ರದೇಶ  ರಾಜ್ಯದಲ್ಲಿ ದೈನಂದಿನ ಸಕಾರಾತ್ಮಕ ದರವು ಶೇಕಡಾ 0.04 ಆಗಿದೆ. ಈ ಹಿಂದೆ ಈ ಕಪ್ಪಾ ರೂಪಾಂತರದ ಪ್ರಕರಣಗಳು ರಾಜ್ಯದಲ್ಲಿ ಕಂಡುಬಂದಿವೆ ಎಂದು ಹೇಳಿದರು.

ಈ ರೂಪಾಂತರಿ ಬಗ್ಗೆ ಚಿಂತೆ ಮಾಡುವ ಅಗತ್ಯವಿಲ್ಲ. ಇದು ಕೊರೊನಾವೈರಸ್ ನ ಒಂದು ರೂಪಾಂತರವಾಗಿದೆ ಮತ್ತು ಅದರ ಚಿಕಿತ್ಸೆಯು ಸಾಧ್ಯವಿದೆ. ಎಚ್ಚರಿಕೆಯ ಕ್ರಮವಾಗಿ, ಪೀಡಿತ ಜಿಲ್ಲೆಗಳ ಹೆಸರುಗಳು ಅಥವಾ ಅದರ ಮೂಲದ ಸ್ಥಳಗಳನ್ನು ಬಹಿರಂಗಪಡಿಸಲಿಲ್ಲ ಎಂದು ಪ್ರಸಾದ್ ಹೇಳಿದರು.

ಸೋಂಕಿನ ಎರಡನೆಯ ಅಲೆಯ ನಡುವೆಯೇ ಡೆಲ್ಟಾ, ಆಲ್ಫಾ ಮತ್ತು ಕಪ್ಪಾದಂತಹ ರೂಪಾಂತರಗಳು ಹೆಚ್ಚು ಹರಡುತ್ತವೆ ಎಂದು ಹೇಳಲಾಗುತ್ತಿರುವುದರಿಂದ ರಾಜ್ಯ ಸರ್ಕಾರಗಳು ಹೆಚ್ಚಿನ ಜಾಗ್ರತೆ ವಹಿಸಿವೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com