ಉತ್ತರಪ್ರದೇಶ: ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ ದೋಣಿ ಪಲ್ಪಿಯಾಗಿ 3 ಹುಡುಗಿಯರ ಸಾವು
ಡಿಯೋರಿಯಾ(ಉತ್ತರ ಪ್ರದೇಶ): ಸೆಲ್ಫಿ ತೆಗೆದುಕೊಳ್ಳುವಾಗ ದೋಣಿ ಪಲ್ಟಿಯಾದ ಪರಿಣಾಮ ಮೂವರು ಹುಡುಗಿಯರು ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಸರ್ಕಾರಿ ಹಿರಿಯ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ಮೃತ ಬಾಲಕಿಯರು 8-12 ವಯಸ್ಸಿನವರಾಗಿದ್ದರು. ಶುಕ್ರವಾರ ಸಂಜೆ ಭಲುವಾನಿ ಪೊಲೀಸ್ ಠಾಣೆ ವ್ಯಾಪ್ತಿಯ ಮಹಾದೇವ್ ತಾಲ್‌ನಲ್ಲಿ ಏಳು ಹುಡುಗಿಯರು ದೋಣಿ ವಿಹಾರಕ್ಕೆ ತೆರಳಿದ್ದರು.
ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ ದೋಣಿ ಪಲ್ಪಿಯಾಗಿದೆ ಎಂದು ಜಿಲ್ಲಾಧಿಕಾರಿ ಅಶುತೋಷ್ ನಿರಂಜನ್ ಹೇಳಿದ್ದಾರೆ.
ನಾಲ್ಕು ಹುಡುಗಿಯರು ತಮ್ಮ ಪ್ರಾಣವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರೆ ಮೂವರು ಮುಳುಗಿ ಪ್ರಾಣಬಿಟ್ಟಿದ್ದಾರೆ.
ಬದುಕುಳಿದ ನಾಲ್ವರು ಬಾಲಕಿಯರಲ್ಲಿ ಓರ್ವಳ ಸ್ಥಿತಿ ಗಂಭೀರವಾಗಿದ್ದು ಗೋರಖ್‌ಪುರ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ ಎಂದು ಅವರು ಹೇಳಿದರು.
ದೋಣಿಗಾರ ಕೂಡ ಈಜಿ ದಡ ಸೇರಿ ಪ್ರಾಣ ಉಳಿಸಿಕೊಂಡಿದ್ದಾನೆ ಎಂದು ನಿರಂಜನ್ ಹೇಳಿದರು. ಮೃತರ ಕುಟುಂಬಗಳಿಗೆ ಮಾನದಂಡಗಳ ಪ್ರಕಾರ ಸರ್ಕಾರದ ಪರಿಹಾರ ನೀಡಲಾಗುವುದು ಎಂದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ