ಅವರನ್ನು ಬೂಟಿನಿಂದ ಹೊಡೆಯಬೇಕು: ಅಮಿತ್ ಶಾ-ಮೋದಿ ವಿರುದ್ಧ ನಾಲಗೆ ಹರಿಬಿಟ್ಟ ರಾಜಸ್ತಾನ ಕಾಂಗ್ರೆಸ್ ಶಾಸಕ!

ರಾಜಸ್ತಾನ ಕಾಂಗ್ರೆಸ್ ಶಾಸಕ ಗಣೇಶ್ ಘೋಗ್ರಾ ಗುರುವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಹರಿಹಾಯ್ದಿದ್ದಾರೆ.  
ನರೇಂದ್ರ ಮೋದಿ ಮತ್ತು ಅಮಿತ್ ಶಾ
ನರೇಂದ್ರ ಮೋದಿ ಮತ್ತು ಅಮಿತ್ ಶಾ
Updated on: 

ಜೈಪುರ: ರಾಜಸ್ತಾನ ಕಾಂಗ್ರೆಸ್ ಶಾಸಕ ಗಣೇಶ್ ಘೋಗ್ರಾ ಗುರುವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಹರಿಹಾಯ್ದಿದ್ದಾರೆ.  

ಪೆಗಾಸಸ್ ಗೂಡಚರ್ಯೆ ವಿರುದ್ಧ ಕಾಂಗ್ರೆಸ್ ರಾಜ್ ಭವನದಲ್ಲಿ ನಡೆದ ಪ್ರತಿಭಟನೆ ವೇಳೆ ಮಾತನಾಡಿದ ಶಾಸಕ ಗಣೇಶ್ ಘೋಗ್ರಾ ರಾಜಸ್ತಾನ ರಾಜ್ಯಪಾಲ ಕಾಲ್ರಾಜ್ ಮಿಶ್ರಾ ಕೇಂದ್ರ ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. 

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಅಸಂಸದೀಯ ಪದ ಬಳಸಿದರು ಮೋದಿ ಮತ್ತು ಅಮಿತ್ ಶಾ ಕುಖ್ಯಾತ ಕ್ರಿಮಿನಲ್  ಜೋಡಿ ಎಂದು ಹೇಳಿದರು.

ಹಣದುಬ್ಬರವು ಸಾರ್ವಕಾಲಿಕ ಎತ್ತರದಲ್ಲಿದೆ ಮತ್ತು ಅದು ಸಾಮಾನ್ಯ ಜನರ ಬೆನ್ನನ್ನು ಮುರಿದಿದೆ. ಮೋದಿ ಮತ್ತು ಷಾ ನಮ್ಮ ದೇಶವನ್ನು ಗುಲಾಮರನ್ನಾಗಿ ಮಾಡಲು ಬಯಸುತ್ತಿದ್ದಾರೆ. ಈಗ, ನಮ್ಮ ವೈಯಕ್ತಿಕ ಮಾತುಕತೆಗಳನ್ನು ರೆಕಾರ್ಡ್ ಮಾಡಲಾಗುತ್ತಿದೆ ಅವರನ್ನು ಬೂಟುಗಳಿಂದ ಹೊಡೆಯಬೇಕು ಎಂದು ಕೆಟ್ಟ ಪದ ಬಳಸಿದರು.

ಕಾಂಗ್ರೆಸ್ ಶಾಸಕರ ಹೇಳಿಕೆ ನೀಡಿದ ಕೂಡಲೇ ಬಿಜೆಪಿ ಮುಖಂಡರು ಅಶೋಕ್ ನಗರ ಪೊಲೀಸ್ ಠಾಣೆಗೆ ಡುಂಗರ್‌ಪುರ ಶಾಸಕ ಗಣೇಶ್ ಘೋಗ್ರಾ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com