ರಾಜ್ ಕುಂದ್ರಾ, ಶಿಲ್ಪಾಶೆಟ್ಟಿಗೆ 3 ಲಕ್ಷ ರೂ. ದಂಡ ವಿಧಿಸಿದ ಸೆಬಿ

ಆಂತರಿಕ ವ್ಯಾಪಾರ ನಿಯಮಗಳ ಉಲ್ಲಂಘನೆ ಮತ್ತು  ಮಾಹಿತಿ ಬಹಿರಂಗದಲ್ಲಿ ಲೋಪಕ್ಕಾಗಿ ವಿಯಾನ್ ಇಂಡಸ್ಟ್ರೀಸ್ ಲಿಮಿಟೆಡ್ ನ ಪ್ರವರ್ತಕರಾದ ರಾಜ್ ಕುಂದ್ರಾ ಹಾಗೂ ನಟಿ ಶಿಲ್ಪಾಶೆಟ್ಟಿಗೆ ಮಾರುಕಟ್ಟೆ ನಿಯಂತ್ರಣ ಸಂಸ್ಥೆ ಸೆಬಿ ಬುಧವಾರ ದಂಡ ವಿಧಿಸಿದೆ. ಒಟ್ಟು 3 ಮೂರು ಲಕ್ಷ ರೂ. ದಂಡವನ್ನು ಪಾವತಿಸುವಂತೆ ಸೆಬಿ ಆದೇಶಿಸಿದೆ.
ರಾಜ್ ಕುಂದ್ರಾ, ಶಿಲ್ಪಾಶೆಟ್ಟಿ
ರಾಜ್ ಕುಂದ್ರಾ, ಶಿಲ್ಪಾಶೆಟ್ಟಿ
Updated on

ಮುಂಬೈ: ಆಂತರಿಕ ವ್ಯಾಪಾರ ನಿಯಮಗಳ ಉಲ್ಲಂಘನೆ ಮತ್ತು  ಮಾಹಿತಿ ಬಹಿರಂಗದಲ್ಲಿ ಲೋಪಕ್ಕಾಗಿ ವಿಯಾನ್ ಇಂಡಸ್ಟ್ರೀಸ್ ಲಿಮಿಟೆಡ್ ನ ಪ್ರವರ್ತಕರಾದ ರಾಜ್ ಕುಂದ್ರಾ ಹಾಗೂ ನಟಿ ಶಿಲ್ಪಾಶೆಟ್ಟಿಗೆ ಮಾರುಕಟ್ಟೆ ನಿಯಂತ್ರಣ ಸಂಸ್ಥೆ ಸೆಬಿ ಬುಧವಾರ ದಂಡ ವಿಧಿಸಿದೆ. ಒಟ್ಟು 3 ಮೂರು ಲಕ್ಷ ರೂ. ದಂಡವನ್ನು ಪಾವತಿಸುವಂತೆ ಸೆಬಿ ಆದೇಶಿಸಿದೆ.

ವಿಯಾನ್ ಇಂಡಸ್ಟ್ರೀಸ್ ಲಿಮಿಟೆಡ್ ನಿಂದ ಸೆಪ್ಟೆಂಬರ್ 2013 - ಡಿಸೆಂಬರ್ 2015ರ ನಡುವೆ ನಡೆಸಲಾದ ತನಿಖೆಯಲ್ಲಿ ಆಂತರಿಕ ವ್ಯಾಪಾರ ನಿಯಮಗಳ ಉಲ್ಲಂಘನೆ ದೃಢಪಟ್ಟಿದ್ದರಿಂದ ಸೆಬಿ ದಂಡ ವಿಧಿಸಿದೆ. 

ಅಕ್ಟೋಬರ್ 2015 ರಲ್ಲಿ ವಿಯಾನ್ ಇಂಡಸ್ಟ್ರೀಸ್ ನಾಲ್ಕು ವ್ಯಕ್ತಿಗಳಿಗೆ 5 ಲಕ್ಷ ಈಕ್ವಿಟಿ ಷೇರು ಮತ್ತು 1,28,800 ಲಕ್ಷ ಷೇರುಗಳನ್ನು ತಲಾ 2.57 ಕೋಟಿ ರೂ.ಗಳಂತೆ ಹಂಚಿಕೆ ಮಾಡಿದ್ದು,  ರಿಪು ಮತ್ತು ಶಿಲ್ಪಾಗೂ ಹಂಚಿಕೆಯಾಗಿತ್ತು. ಈ ನಿಟ್ಟಿನಲ್ಲಿ, ವಹಿವಾಟಿನ ಮೌಲ್ಯವು 10 ಲಕ್ಷ ರೂ.ಗಳನ್ನು ಮೀರಿದ ಕಾರಣ ಪಿಐಟಿ ಮಾನದಂಡಗಳ ಪ್ರಕಾರ ಅವರು ಕಂಪನಿಗೆ ಸಮಯೋಚಿತವಾಗಿ ಮಾಹಿತಿ ಬಹಿರಂಗಪಡಿಸುವ ಅಗತ್ಯವಿತ್ತು. 

ಆದರೆ ಈ ಸಂಬಂಧಿತ ನೋಟಿಸ್ ಗಳಿಗೆ ಮೂರು ವರ್ಷಗಳಿಗಿಂತ ಹೆಚ್ಚು ವಿಳಂಬ ಮಾಡಿರುವುದನ್ನು ಸೆಬಿ ಗಮನಿಸಿತ್ತು. ಆದ್ದರಿಂದ ಈ ಅಂಶಗಳು ಮತ್ತು ಘಟನಾವಳಿಗಳನ್ನು ಪರಿಗಣಿಸಿ, ನೋಟಿಸ್ ಗಳ ಆಧಾರದ ಮೇಲೆ ದಂಡ ವಿಧಿಸಲಾಗಿದೆ ಎಂದು ತೀರ್ಪು ನೀಡುವ ಅಧಿಕಾರಿ ಸುರೇಶ್ ಬಿ ಮೆನನ್ ಆದೇಶದಲ್ಲಿ ತಿಳಿಸಿದ್ದಾರೆ.

ನೋಟಿಸ್ ಗಳು ವಿಯಾನ್ ಇಂಡಸ್ಟ್ರೀಸ್, ಶಿಲ್ಪಾಶೆಟ್ಟಿ ಕುಂದ್ರಾ ಮತ್ತು ರಿಪು ಸುದಾನ್ ಕುಂದ್ರಾ ಅವರನ್ನು ಉಲ್ಲೇಖಿಸುತ್ತವೆ.ಶಿಲ್ಪಾ ಶೆಟ್ಟಿ ಮತ್ತು ರಿಪು ಸಂಸ್ಥೆಯ ಪ್ರವರ್ತಕರಾಗಿದ್ದಾರೆ. ವಿಯಾನ್ ಇಂಡಸ್ಟ್ರೀಸ್  ಹಿಂದೂಸ್ತಾನ್ ಸುರಕ್ಷಿತ ಗಾಜು ಇಂಡಸ್ಟ್ರೀಸ್ ಲಿಮಿಟೆಡ್ ಎಂದು ಹೆಸರಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com