ಕೇರಳದಲ್ಲಿ ಭೀಕರ ಕೊಲೆ: ಹಾಡಹಗಲೇ ದಂತ ವೈದ್ಯಕೀಯ ವಿದ್ಯಾರ್ಥಿನಿಗೆ ಗುಂಡಿಟ್ಟು ಹತ್ಯೆ

ಕೇರಳದಲ್ಲಿ ಹಾಡಹಗಲೇ ಭೀಕರ ಕೊಲೆ ನಡೆದಿದ್ದು, ದಂತ ವೈದ್ಯಕೀಯ ವಿದ್ಯಾರ್ಥಿನಿಗೆ ಗುಂಡಿಟ್ಟು ಹತ್ಯೆ ಮಾಡಲಾಗಿದೆ.
ಕೊಲೆಯಾದ ವಿದ್ಯಾರ್ಥಿನಿ ಮಾನಸ
ಕೊಲೆಯಾದ ವಿದ್ಯಾರ್ಥಿನಿ ಮಾನಸ
Updated on: 

ಕೊಚ್ಚಿ: ಕೇರಳದಲ್ಲಿ ಹಾಡಹಗಲೇ ಭೀಕರ ಕೊಲೆ ನಡೆದಿದ್ದು, ದಂತ ವೈದ್ಯಕೀಯ ವಿದ್ಯಾರ್ಥಿನಿಗೆ ಗುಂಡಿಟ್ಟು ಹತ್ಯೆ ಮಾಡಲಾಗಿದೆ.

ಕೇರಳದ ಕೊಚ್ಚಿಯಿಂದ 35 ಕಿಮೀ ದೂರದಲ್ಲಿರುವ ಕೋತಮಂಗಲಂ ಸಮೀಪದ ನೆಲ್ಲಿಕುಳಿಯಲ್ಲಿ ಈ ಘಟನೆ ನಡೆದಿದೆ. 240 ವರ್ಷದ ದಂತ ವೈದ್ಯಕೀಯ ವಿದ್ಯಾರ್ಥಿನಿ ಪಿವಿ ಮಾನಸ ಎಂಬುವವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ಪೊಲೀಸರ ಪ್ರಕಾರ, ಕೊಲೆಗಾರನನ್ನು ರಾಖಿಲ್ (24 ವರ್ಷ|) ಎಂದು ಗುರುತಿಸಲಾಗಿದ್ದು, ಮಾನಸ ಪಿ ವಿ (24) ನಾಲ್ಕನೇ ವರ್ಷದ ವಿದ್ಯಾರ್ಥಿಯಾಗಿದ್ದರು. ಕೋತಮಂಗಲಂನ ಇಂದಿರಾಗಾಂಧಿ ಕಾಲೇಜಿನಲ್ಲಿ ದಂತವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದರು. ಆರೋಪಿ ಮತ್ತು ಸಂತ್ರಸ್ಥೆ ಇಬ್ಬರೂ ಕಣ್ಣೂರು ಜಿಲ್ಲೆಯವರು  ಎಂದು ತಿಳಿದುಬಂದಿದೆ. ಇಬ್ಬರ ನಡುವಿನ ವೈಯಕ್ತಿಕ ದ್ವೇಷವೇ ಕೊಲೆಗೆ ಕಾರಣ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಕೊತಮಂಗಲಂನ ಇಂದಿರಾ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್ ಬಳಿ ಮಧ್ಯಾಹ್ನ 3: 30 ರ ಸುಮಾರಿಗೆ ಈ ಘಟನೆ ನಡೆದಿದ್ದು, ಮಾನಸ ಪೇಯಿಂಗ್ ಗೆಸ್ಟ್ ಆಗಿ ವಾಸಿಸುತ್ತಿದ್ದ  ಸ್ಥಳದ ಸಮೀಪದಲ್ಲೇ ಈ ಘಟನೆ ನಡೆದಿದೆ. 

ಮಾನಸ ಪಿಜಿಯಲ್ಲಿರುವಾಗಲೇ ಕಾರಿನಲ್ಲಿ ಬಂದ ದುಷ್ಕರ್ಮಿ ರಾಖಿಲ್ ನೇರವಾಗಿ ಪಿಜಿಯೊಳಗೆ ನುಗ್ಗಿ ಮಾನಸ ಮೇಲೆ ಗುಂಡು ಹಾರಿಸಿದ್ದಾನೆ. ಈ ಬಗ್ಗೆ ಹೆಚ್ಚಿನ ವಿವರ ಕಲೆಹಾಕುತ್ತಿದ್ದೇವೆ ಎಂದು ಕೋತಮಂಗಲಂ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ಹಿಂದೆ ತಮ್ಮ ಮಗಳನ್ನು ಹಿಂಬಾಲಿಸುತ್ತಿದ್ದ ಮತ್ತು ಕಿರುಕುಳ ನೀಡುತ್ತಿದ್ದ ಎಂದು ಮಾನಸ ಪೋಷಕರು ಈ ಹಿಂದೆ ಕಣ್ಣೂರಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೇ ಕೋಪದಿಂದ ರಾಖಿಲ್ ಆಕೆಯನ್ನು ಕೊಂದಿರುವ ಶಂಕೆ ವ್ಯಕ್ತವಾಗಿದೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com