ಬ್ರಹ್ಮೋಸ್ ಕ್ಷಿಪಣಿ (ಸಂಗ್ರಹ ಚಿತ್ರ)
ಬ್ರಹ್ಮೋಸ್ ಕ್ಷಿಪಣಿ (ಸಂಗ್ರಹ ಚಿತ್ರ)

ಭಾರತದ ರಕ್ಷಣಾ ರಫ್ತು ಪ್ರಮಾಣ ಭಾರಿ ಏರಿಕೆ

ದೇಶದಲ್ಲಿ ರಕ್ಷಣಾ ಉತ್ಪನ್ನಗಳ ರಫ್ತು ವ್ಯವಹಾರದಲ್ಲಿ ಭಾರಿ ಹೆಚ್ಚಳ ಕಂಡುಬಂದಿದ್ದು,  ಭಾರತವು 2019-20ರಲ್ಲಿ 9,116 ಕೋಟಿ ರೂ.ಗಳ ರಕ್ಷಣಾ ಉತ್ಪನ್ನಗಳನ್ನು ರಫ್ತು ಮಾಡಿದೆ. 
Published on

ನವದೆಹಲಿ: ದೇಶದಲ್ಲಿ ರಕ್ಷಣಾ ಉತ್ಪನ್ನಗಳ ರಫ್ತು ವ್ಯವಹಾರದಲ್ಲಿ ಭಾರಿ ಹೆಚ್ಚಳ ಕಂಡುಬಂದಿದ್ದು,  ಭಾರತವು 2019-20ರಲ್ಲಿ 9,116 ಕೋಟಿ ರೂ.ಗಳ ರಕ್ಷಣಾ ಉತ್ಪನ್ನಗಳನ್ನು ರಫ್ತು ಮಾಡಿದೆ. 

2014-15ರಲ್ಲಿ 1,941 ರೂ.ಗಳಿಂದ ಉಂಟಾಗಿರುವ ಗಣನೀಯ ಏರಿಕೆಯಾಗಿದೆ ಇದಾಗಿದ್ದು, ಭಾರತ ಕಳೆದ 7 ವರ್ಷಗಳಲ್ಲಿ ಸೇನೆಗೆ ಸಂಬಂಧಿಸಿದ 35,777 ಕೋಟಿ ರೂಪಾಯಿಗಳ ಮೌಲ್ಯದ ಹಾರ್ಡ್ ವೇರ್ ಹಾಗೂ ರಕ್ಷಣಾ ವ್ಯವಸ್ಥೆಗಳನ್ನು ರಫ್ತು ಮಾಡಿದೆ.

2020 ರಲ್ಲಿ ‘20 ಸುಧಾರಣೆಗಳು ’ಎಂಬ ಇ-ಕಿರುಹೊತ್ತಿಗೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೋಮವಾರ ಬಿಡುಗಡೆ ಮಾಡಿದ್ದು, ಅದರ ಪ್ರಕಾರ ರಫ್ತು ಹೆಚ್ಚಳಕ್ಕೆ ಖಾಸಗಿ ವಲಯದ ಸಹಭಾಗಿತ್ವ ಮತ್ತು 84 ದೇಶಗಳಿಗೆ ಸಾಗಣೆಯನ್ನು ವಿಸ್ತರಿಸುವುದಕ್ಕೆ ಸರ್ಕಾರ ಕಾರಣವಾಗಿದೆ.

ನೀತಿ ಬದಲಾವಣೆಗಳು, ನಾವೀನ್ಯತೆ ಮತ್ತು ಡಿಜಿಟಲ್ ರೂಪಾಂತರದ ಮೂಲಕ ಸಶಸ್ತ್ರ ಪಡೆಗಳ ಹೆಚ್ಚಿನ ಒಗ್ಗಟ್ಟು ಮತ್ತು ಆಧುನೀಕರಣವನ್ನು ತರಲು 2020 ರಲ್ಲಿ ಸಚಿವಾಲಯ ಕೈಗೊಂಡ ಪ್ರಮುಖ ಸುಧಾರಣೆಗಳನ್ನು ಪುಸ್ತಕ  ಉಲ್ಲೇಖಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com