ಕ್ಯೂಎಸ್ ಜಾಗತಿಕ ವಿಶ್ವವಿದ್ಯಾಲಯಗಳ ರ್ಯಾಂಕಿಂಗ್: ಅಗ್ರ 200 ವಿವಿಗಳಲ್ಲಿ ಬೆಂಗಳೂರು, ಬಾಂಬೇ, ದೆಹೆಲಿ ಐಐಎಸ್ಸಿ ಗೆ ಸ್ಥಾನ!

ಕ್ಯೂಎಸ್ ಜಾಗತಿಕ ವಿಶ್ವವಿದ್ಯಾಲಯಗಳ ರ್ಯಾಂಕಿಂಗ್-2022 ಪಟ್ಟಿಯಲ್ಲಿ ಅಗ್ರ 200 ವಿಶ್ವವಿದ್ಯಾಲಯಗಳಲ್ಲಿ ಬೆಂಗಳೂರು, ಬಾಂಬೇ ಮತ್ತು ದೆಹಲಿ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಗಳು ಸ್ಥಾನ ಪಡೆದಿದ್ದು,  ಪ್ರಧಾನಿ ಮೋದಿ ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
ಐಐಎಸ್ ಸಿ ಬೆಂಗಳೂರು
ಐಐಎಸ್ ಸಿ ಬೆಂಗಳೂರು

ನವದೆಹಲಿ: ಲಂಡನ್​ ಮೂಲದ ಕ್ವಾಕ್ವೆರೆಲ್ಲಿ ಸೈಮಂಡ್ಸ್​ (ಕ್ಯೂಎಸ್​) ಬಿಡುಗಡೆ ಮಾಡಿರುವ ಜಾಗತಿಕ ವಿಶ್ವವಿದ್ಯಾಲಯಗಳ ರ್ಯಾಂಕಿಂಗ್-2022 ಪಟ್ಟಿಯಲ್ಲಿ ಅಗ್ರ 200 ವಿಶ್ವವಿದ್ಯಾಲಯಗಳಲ್ಲಿ ಬೆಂಗಳೂರು, ಬಾಂಬೇ ಮತ್ತು ದೆಹಲಿ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಗಳು ಸ್ಥಾನ ಪಡೆದಿದ್ದು,  ಪ್ರಧಾನಿ ಮೋದಿ ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

ವಿಶ್ವದಲ್ಲಿಯೇ ಭಾರತದ ಅತ್ಯುತ್ತಮ ವಿಶ್ವವಿದ್ಯಾಲಯಗಳ ಪಟ್ಟಿಯ ಅಗ್ರ 200 ವಿವಿಗಳ ಪಟ್ಟಿಯಲ್ಲಿ ಭಾರತದ ಮೂರು ಪ್ರತಿಷ್ಟಿತ ಸಂಸ್ಥೆಗಳು ಸ್ಥಾನ ಪಡೆದಿದ್ದು, ಬೆಂಗಳೂರಿನ ಇಂಡಿಯನ್​ ಇನ್​ಸ್ಟಿಟ್ಯೂಟ್​ ಆಫ್​ ಸೆನ್ಸ್​ (ಐಐಎಸ್​ಸಿ), ಬಾಂಬೇ ಐಐಎಸ್ಸಿ, ದೆಹಲಿ ಐಐಎಸ್ಸಿ ಸ್ಥಾನ ಪಡೆದಿವೆ.  

ಕ್ಯೂಎಸ್‌ನ ಸಂಶೋಧನಾ ನಿರ್ದೇಶಕ ಬೆನ್ ಸೌಟರ್ ಅವರು ಈ ಬಗ್ಗೆ ಮಾತನಾಡಿದ್ದು, 'ಈ ವರ್ಷದ ಕ್ಯೂಎಸ್ ವಿಶ್ವ ವಿಶ್ವವಿದ್ಯಾಲಯ ಶ್ರೇಯಾಂಕದ ಆವೃತ್ತಿಯು ಅನೇಕ ಭಾರತೀಯ ವಿಶ್ವವಿದ್ಯಾಲಯಗಳು ತಮ್ಮ ಸಂಶೋಧನಾ ಹೆಜ್ಜೆಗುರುತನ್ನು ಸುಧಾರಿಸಲು ಮಾಡುತ್ತಿರುವ ಅತ್ಯುತ್ತಮ ಕಾರ್ಯವನ್ನು  ತೋರಿಸುತ್ತದೆ, ಜಾಗತಿಕ ವೇದಿಕೆಯಲ್ಲಿ ಅವರ ಖ್ಯಾತಿಗೆ ಧನಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.

ಬೆಂಗಳೂರು ಐಐಎಸ್ಸಿಗೆ ಸಂಶೋಧನಾ ವಿಭಾಗದಲ್ಲಿ ಅತ್ಯುತ್ತಮ ಸ್ಥಾನ
ಉತ್ತಮ ಬೋಧಕರ ವರ್ಗ ಹೊಂದಿರುವ ಬೆಂಗಳೂರು ಐಐಎಸ್ಸಿ ಸಂಶೋಧನಾ ವಿಭಾಗದಲ್ಲಿ ಅತ್ಯುತ್ತಮ ಸ್ಥಾನವನ್ನು ಪಡೆದಿದ್ದು, ವಿಶ್ವದ ಉನ್ನತ ವಿಶ್ವವಿದ್ಯಾಲಯಗಳಾದ ಪ್ರಿನ್ಸ್ಟನ್​, ಹಾವರ್ಡ್​ ಮತ್ತು ಮ್ಯಾಸಚೂಸೆಟ್ಸ್​​ ಇನ್ಸ್ಟಿಟ್ಯೂಟ್​ ಆಫ್​ ಟೆಕ್ನಾಲಜಿಯನ್ನು ಮೆಟ್ರಿಕ್​ನಲ್ಲಿ ಹಿಂದಿಕ್ಕಿ ಬೆಂಗಳೂರು ಐಐಎಸ್ಸಿ ಈ ಸ್ಥಾನ  ಪಡೆದಿದೆ. ಮಂಗಳವಾರ ತಡರಾತ್ರಿ ಬಿಡುಗಡೆಯಾದ ವರದಿಯು ವಿಶ್ವವಿದ್ಯಾನಿಲಯಗಳನ್ನು ಬೋಧಕವರ್ಗದ ಗಾತ್ರಕ್ಕೆ ಸರಿಹೊಂದಿಸಿದಾಗ ಸಿಟೇಶನ್ಸ್ ಪರ್ ಫ್ಯಾಕಲ್ಟಿ (ಸಿಪಿಎಫ್) ಸೂಚಕ ಸೇರಿದಂತೆ ಆರು ನಿಯತಾಂಕಗಳನ್ನು ಹೊಂದಿದೆ. ಈ ಪೈಕಿ ಬೆಂಗಳೂರು ಐಐಎಸ್ಸಿ 100/100 ಸಂಪೂರ್ಣ ಅಂಕಗಳಿಸಿ  ಸಂಶೋಧನಾ ವಿಭಾಗದಲ್ಲಿ ಅತ್ಯುತ್ತಮ ಸ್ಥಾನ ಪಡೆದಿದೆ. ಇದರ ಜೊತೆಗೆ ಭಾರತದ ಮತ್ತೆರಡು ಪ್ರತಿಷ್ಟಿತ ವಿವಿಗಳಾದ ದೆಹಲಿ ಐಐಟಿ ಮತ್ತು ಬಾಂಬೆ ಐಐಟಿ ಕೂಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಥಾನ ಪಡೆದಿದೆ.

ಕ್ಯೂಎಸ್ ಜಗತ್ತಿನ ಯಾವುದೇ ಸಂಸ್ಥೆ ಹಾಗೂ ವಿಶ್ವವಿದ್ಯಾಲಯಗಳನ್ನು ಆರು ಸೂಚಕಗಳ ಮೇಲೆ ನಿರ್ಧರಿಸುತ್ತದೆ. ಅವುಗಳೆಂದರೆ ಶೈಕ್ಷಣಿಕ ಖ್ಯಾತಿ, ಉದ್ಯೋಗದಾತರ ಖ್ಯಾತಿ. ಪ್ರತಿ ಬೋಧಕ ವರ್ಗಗಳ ಉಲ್ಲೇಖ ಹಾಗೂ ಬೋಧಕ ವರ್ಗ ಮತ್ತು ವಿದ್ಯಾರ್ಥಿಗಳ ಅನುಪಾತ, ಅಂತರಾಷ್ಟ್ರೀಯ ಅಧ್ಯಾಪಕರ ಅನುಪಾತ  ಮತ್ತು ಅಂತರಾಷ್ಟ್ರೀಯ ವಿದ್ಯಾರ್ಥಿ ಅನುಪಾತ ಆಧಾರದ ಮೇಲೆ ನಿರ್ಧರಿಸಲಾಗಿದೆ.

ಜಾಗತಿಕ ವಿವಿಗಳ ಪಟ್ಟಿಯಲ್ಲಿ ಬೆಂಗಳೂರು ಐಐಎಸ್ಸಿಗೆ 186ನೇ ಸ್ಥಾನ
ಕ್ಯೂಎಸ್ ನಡೆಸಿದ ವಿಶ್ಲೇಷಣೆಯಲ್ಲಿ ಬೆಂಗಳೂರಿನ ಐಐಎಸ್ಸಿ ಬೋಧಕ ವರ್ಗದ ಮೆಟ್ರಿಕ್​ ವಿಶ್ಲೇಷಣೆಯಲ್ಲಿ 100ಕ್ಕೆ 100 ಅಂಕ ಗಳಿಸಿದೆ. ಐಐಟಿ ದೆಹಲಿ ಭಾರತದ ಎರಡನೇ ಅತ್ಯುತ್ತಮ ವಿಶ್ವವಿದ್ಯಾಲಯ ಎಂಬ ಶ್ರೇಯಾಂಕಕ್ಕೆ ಪಾತ್ರವಾಗಿದ್ದು, ಇದು 193 ನೇ ಸ್ಥಾನದಿಂದ 185ನೇ ಸ್ಥಾನಕ್ಕೆ ಏರಿದೆ.  ಐಐಎಸ್ಸಿಯನ್ನು ಹಿಂದಿಕ್ಕಿ ದೆಹಲಿ ಐಐಟಿ 186 ನೇ ಸ್ಥಾನ ಪಡೆದಿದೆ. ಬಾಂಬೇ ಐಐಟಿ 177ನೇ ಸ್ಥಾನ ಪಡೆದಿವೆ. ಐಐಟಿ ಹೈದ್ರಾಬಾದ್​ 591-600ರ ಸ್ಥಾನ ಪಡೆದಿದ್ದು. ಇದೇ ಮೊದಲ ಬಾರಿ 600ಒಳಗೆ ಸ್ಥಾನ ಪಡೆದಿದೆ, ಇದೇ ಮೊದಲ ಬಾರಿ ದೆಹಲಿಯ ಜವಹರ್ ​ಲಾಲ್​ ನೆಹರು ವಿಶ್ವವಿದ್ಯಾಲಯ  (ಜೆಎನ್​ಯು) ಕ್ಯೂಎಸ್​ ವರ್ಲ್ಡ್​​ ಯೂನಿವರ್ಸಿಟಿಯಲ್ಲಿ ಸ್ಥಾನ ಪಡೆದಿದೆ, ಜೆಎನ್​ಯು 561-570 ಬ್ಯಾಂಡ್​ನಲ್ಲಿ ಸ್ಥಾನ ಪಡೆದಿದೆ.

ಗ್ಲೋಬಲ್ ಟಾಪ್-3 ಪಟ್ಟಿಯಲ್ಲಿ ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಗ್ರ ಸ್ಥಾನ ಪಡೆದಿದ್ದು, ಆಕ್ಸ್ ಫರ್ಡ್ ಯೂನಿವರ್ಸಿಟಿ 2ನೇ ಸ್ಥಾನ ಮತ್ತು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ ಅಥವಾ ಕೇಂಬ್ರಿಡ್ಜ್ ವಿಶ್ವವಿದ್ಯಾಲಯ 3ನೇ ಸ್ಥಾನ ಪಡೆದಿವೆ.

ಟ್ವೀಟ್‌ ಮೂಲಕ ಪ್ರಧಾನಿ ಮೋದಿ ಅಭಿನಂದನೆ
ಭಾರತದ ಪ್ರತಿಷ್ಠಿತ ವಿವಿಗಳು ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆದ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಅಭಿನಂದನೆ ತಿಳಿಸಿದ್ದು, ಟ್ವಿಟರ್​ನಲ್ಲಿ ಈ ಕುರಿತು ಸಂತಸ ವ್ಯಕ್ತಪಡಿಸಿರುವ ಅವರು, 'ಭಾರತದ ಹೆಚ್ಚಿನ ವಿಶ್ವ ವಿದ್ಯಾಲಯಗಳು ಜಾಗತಿಕ ಶ್ರೇಷ್ಠತೆಗಳಿಸಿಕೊಳ್ಳುತ್ತಿವೆ. ಯುವಕರಲ್ಲಿ ಬೌದ್ಧಿಕ  ಪರಾಕ್ರಮವನ್ನು ಬೆಂಬಲಿಸಲಾಗುತ್ತಿದೆ ಎಂದು ಅವರು ಅಭಿನಂದನೆ ಸಲ್ಲಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com