5ಜಿ ತಂತ್ರಜ್ಞಾನಕ್ಕೆ ಸ್ವಾಗತ, ಆದರೆ ಅದು ಸುರಕ್ಷಿತವೇ ಎಂಬುದನ್ನು ತಿಳಿಯಬೇಕು: ಜೂಹಿ ಚಾವ್ಲಾ

ಬಹು ನಿರೀಕ್ಷಿತ 5ಜಿ ತಂತ್ರಜ್ಞಾನಕ್ಕೆ ಸ್ವಾಗತ, ಆದರೆ ಅದು ಸುರಕ್ಷಿತವೇ ಎಂಬುದನ್ನು ತಿಳಿಯಬೇಕು ಎಂದು ನಟಿ ಜೂಹಿ ಚಾವ್ಲಾ ಹೇಳಿದ್ದಾರೆ.
ನಟಿ ಜೂಹಿ ಚಾವ್ಲಾ
ನಟಿ ಜೂಹಿ ಚಾವ್ಲಾ
Updated on

ಮುಂಬೈ: ಬಹು ನಿರೀಕ್ಷಿತ 5ಜಿ ತಂತ್ರಜ್ಞಾನಕ್ಕೆ ಸ್ವಾಗತ, ಆದರೆ ಅದು ಸುರಕ್ಷಿತವೇ ಎಂಬುದನ್ನು ತಿಳಿಯಬೇಕು ಎಂದು ನಟಿ ಜೂಹಿ ಚಾವ್ಲಾ ಹೇಳಿದ್ದಾರೆ.

ಈ ಹಿಂದೆ ಇದೇ 5ಜಿ ತಂತ್ರಜ್ಞಾನ ಜೀವ ಸಂಕುಲಕ್ಕೆ ಅಪಾಯ ತಂದೊಡ್ಡುತ್ತದೆ ಎಂದು ಆರೋಪಿಸಿ ದೆಹಲಿ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದ ನಟಿ, 5ಜಿ ತಂತ್ರಜ್ಞಾನ ಜಾರಿಗೆ ತಡೆ ನೀಡಬೇಕು ಎಂದು ಕೋರಿದ್ದರು. ಆದರೆ ಜೂಹಿ ಚಾವ್ಲಾ ಅವರ ಈ ಅರ್ಜಿಯನ್ನು ಪ್ರಚಾರಕ್ಕಾಗಿ ಎಂದು ಪರಿಗಣಿಸಿದ ಕೋರ್ಟ್  ಅರ್ಜಿಯನ್ನು ವಜಾಗೊಳಿಸಿದ್ದು ಮಾತ್ರವಲ್ಲದೇ ನಟಿಗೆ 20 ಲಕ್ಷ ರೂ ದಂಡ ವಿಧಿಸಿತ್ತು. ಅಂತೆಯೇ ಇದೇ ಪ್ರಕರಣದ ವರ್ಚುವಲ್ ವಿಚಾರಣೆ ವೇಳೆ ನಟಿಯ ಹಾಡು ಹಾಡಿ ವಿಚಾರಣೆಗೆ ಅಡ್ಡಿ ಪಡಿಸಿದ್ದ ಅಭಿಮಾನಿಯನ್ನೂ ಕೋರ್ಟ್ ತರಾಟೆಗೆತೆಗೆದುಕೊಂಡಿತ್ತು. ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ  ಸೂಚಿಸಿತ್ತು.

ಈ ಬೆಳವಣಿಗೆಯಿಂದ 53 ವರ್ಷದ ನಟಿ ತೀವ್ರ ಮುಜುಗರಕ್ಕೊಳಗಾಗಿದ್ದರು. ಸಾಮಾಜಿಕ ಜಾಲತಾಣಗಳಲ್ಲೂ ನಟಿಯ ವಿರುದ್ಧ ವ್ಯಾಪಕ ಟೀಕೆ ಮತ್ತು ಮೀಮ್ ಗಳು ಹರಿದಾಡಿತ್ತು. ಇದೀಗ ಮತ್ತೆ ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ನಟಿ, ನಾನು 5ಜಿ ತಂತ್ರಜ್ಞಾನದ ವಿರೋಧಿಯಲ್ಲ. ಆದರೆ ಇದರಿಂದ  ಆಗಬಹುದಾದ ಸಮಸ್ಯೆಗಳನ್ನು ತಡೆಯಬೇಕು. ಮತ್ತು ಪ್ರತೀಯೊಬ್ಬರಿಗೂ ಇದು ಸುರಕ್ಷಿತ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com