ಅಂತಾರಾಷ್ಟ್ರೀಯ ಯೋಗ ದಿನ: ಮೈ ಕೊರೆಯುವ ಚಳಿ ನಡುವೆಯೇ 18 ಸಾವಿರ ಅಡಿ ಎತ್ತರದ ಲಡಾಖ್ ನಲ್ಲಿ ಐಟಿಬಿಪಿ ಯೋಧರಿಂದ ಯೋಗ

ಜಗತ್ತಿನ 2ನೇ ಅತ್ಯಂತ ಎತ್ತರದ ರಣಭೂಮಿ ಎಂದೇ ಖ್ಯಾತಿ ಗಳಿಸಿರುವ ಲಡಾಖ್ ನಲ್ಲಿ ನಮ್ಮ ಭಾರತೀಯ ಯೋಧರು ಮೈಕೊರೆಯುವ ಚಳಿಯ  ನಡುವೆಯೇ ಯೋಗಾಭ್ಯಾಸ ಮಾಡುವ ಮೂಲಕ ಯೋಗ ದಿನಾಚರಣೆಯನ್ನು ಆಚರಿಸಿದ್ದಾರೆ.
ಲಡಾಖ್ ನಲ್ಲಿ ಐಟಿಬಿಪಿ ಯೋಧರ ಯೋಗಾಭ್ಯಾಸ
ಲಡಾಖ್ ನಲ್ಲಿ ಐಟಿಬಿಪಿ ಯೋಧರ ಯೋಗಾಭ್ಯಾಸ

ನವದೆಹಲಿ: ಮಾರಕ ಕೊರೋನಾ ಸಾಂಕ್ರಾಮಿಕದ ನಡುವೆಯೇ ಇಂದು ವಿಶ್ವಾದ್ಯಂತ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಅತ್ತ ಜಗತ್ತಿನ 2ನೇ ಅತ್ಯಂತ ಎತ್ತರದ ರಣಭೂಮಿ ಎಂದೇ ಖ್ಯಾತಿ ಗಳಿಸಿರುವ ಲಡಾಖ್ ನಲ್ಲಿ ನಮ್ಮ ಭಾರತೀಯ ಯೋಧರು ಮೈಕೊರೆಯುವ ಚಳಿಯ  ನಡುವೆಯೇ ಯೋಗಾಭ್ಯಾಸ ಮಾಡುವ ಮೂಲಕ ಯೋಗ ದಿನಾಚರಣೆಯನ್ನು ಆಚರಿಸಿದ್ದಾರೆ.

ಸಿಯಾಚಿನ್ ಬಳಿಕ ಜಗತ್ತಿನ ಅತ್ಯಂತ ಎತ್ತರದ 2ನೇ ರಣಭೂಮಿ ಎಂದೇ ಖ್ಯಾತಿಗಳಿಸಿರುವ ಲಡಾಖ್ ರಣಭೂಮಿಯಲ್ಲಿ ತಾಪಮಾನ -50 ಡಿಗ್ರಿವರೆಗೂ ಕುಸಿಯುತ್ತದೆ. ಇಂತಹ ಕಠಿಣ ಹವಾಮಾನದ ನಡುವೆ ಐಟಿಬಿಪಿ ಯೋಧರು ಯೋಗಾಭ್ಯಾಸ ನಡೆಸಿದ್ದಾರೆ. ಇಲ್ಲಿ ವರ್ಷದ 365 ದಿನಗಳ ಪೈಕಿ ಬರೊಬ್ಬರಿ 200  ದಿನಗಳ ಕಾಲ ಹಿಮಮಳೆ ಮತ್ತು ಹಿಮಪಾತವಾಗುತ್ತಿರುತ್ತದೆ. ಇಂತಹ ದುರ್ಗಮ ಗಡಿಯಲ್ಲಿ ಯೋಗಾಭ್ಯಾಸ ಮಾಡುವ ಮೂಲಕ ಭಾರತೀಯ ಯೋಧರು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಅಧಿಕಾರಿಯೊಬ್ಬರು ಇಲ್ಲಿನ ಕಠಿಣ ಮತ್ತು ಅತ್ಯಂತ ದುರ್ಗಮ ಹವಾಮಾನ ಪರಿಸ್ಥಿತಿಯಲ್ಲಿ  ನಾವು ಕರ್ತವ್ಯ ನಿರ್ವಹಿಸಲು ನಮ್ಮ ದೇಹಕ್ಕೆ ಯೋಗ ಸಾಮರ್ಥ್ಯ ಮತ್ತು ಶಕ್ತಿ ನೀಡುತ್ತದೆ ಎಂದು ಹೇಳಿದ್ದಾರೆ. 

ಅಂತೆಯೇ ಯೋಗ ನಮ್ಮ ದೈನಂದಿನ ಜೀವನ ಅವಿಭಾಜ್ಯ ಅಂಗವೇ ಆಗಿದ್ದು, ಪರಿವಾರಗಳನ್ನು ತೊರೆದು ದೂರದ ಗಡಿ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸುವ ಯೋಧರಿಗೆ ಯೋಗ ಶಾರೀರಿಕ ಮತ್ತು ಮಾನಸಿಕ ಆರೋಗ್ಯ ನೀಡುತ್ತದೆ. ಅಂತೆಯೇ ಇಂತಹ ದುರ್ಗಮ ಪ್ರದೇಶಗಳಲ್ಲಿ ಆಮ್ಲ ಜನಕದ ಪ್ರಮಾಣ ತೀರಾ  ಕಡಿಮೆ ಇದ್ದು, ಈ ವಿಷಮ ಪರಿಸ್ಥಿತಿಯಲ್ಲೂ ದೇಹಕ್ಕೆ ಅಗತ್ಯವಾದ ಆಮ್ಲಜನಕವನ್ನು ಹೊಂದಲು ಯೋಗ ಸಹಕಾರಿಯಾಗುತ್ತದೆ. 

ಹಿಮವೀರರೆಂದೇ ಖ್ಯಾತಿಗಳಿಸಿರುವ ಐಟಿಬಿಪಿ ಯೋಧರು ಇಂದು ಲಡಾಖ್ ನ ಗಾಲ್ವಾನ್ ಕಣಿವೆಯಲ್ಲಿ ಯೋಗಾಭ್ಯಾಸ ಮಾಡಿದರು. ಈಗಾಗಲೇ ಇದೇ ಗಾಲ್ವಾನ್ ಕಣಿವೆ ಚೀನಾ ಯೋಧರ ಅತಿಕ್ರಮಣ ಮತ್ತು ಭಾರತೀಯ ಯೋಧರ ಜೊತೆಗಿನ ಸಂಘರ್ಷದಿಂದ ಭಾರಿ ಸುದ್ದಿಗೆ ಗ್ರಾಸವಾಗಿತ್ತು. ಇದೀಗ ಇದೇ  ಕಣಿವೆಯಲ್ಲಿ ಭಾರತೀಯ ಯೋಧರು ಯೋಗಾಭ್ಯಾಸ ಮಾಡುವ ಮೂಲಕ 7ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಿದ್ದಾರೆ. ಸುಮಾರು 100ಕ್ಕೂ ಅಧಿಕ ಯೋಧರು ಪಾಂಗೋಂಗ್ ಟ್ಸೋ ಸರೋವರದ ತಟದಲ್ಲಿ ಏಕಕಾಲದಲ್ಲಿ ಯೋಗಾಭ್ಯಾಸ ಮಾಡಿದ್ದು, ಈ ಫೋಟೋಗಳು ಇದೀಗ ವೈರಲ್ ಆಗಿದೆ.

ಅಂತೆಯೇ ಇದೇ ಐಟಿಬಿಪಿಯ ಎಟಿಎಸ್ (ಅನಿಮಲ್ ಟ್ರೈನಿಂಗ್ ಸ್ಕೂಲ್) ನ ಸಿಬ್ಬಂದಿಗಳು ಅರುಣಾಚಲ ಪ್ರದೇಶದ ಲೋಹಿತ್ ಪುರ್ ಕ್ಯಾಂಪ್ ನಲ್ಲಿ ಅಶ್ವಗಳೊಂದಿಗೆ ಯೋಗಾಭ್ಯಾಸ ಮಾಡಿದ್ದು ವಿಶೇಷವಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com