ವಿಪಕ್ಷಗಳನ್ನು ಒಗ್ಗೂಡಿಸಲು ರಾಹುಲ್ ಗಾಂಧಿ, ಶರದ್ ಪವಾರ್ ಜೊತೆ ಕೈ ಜೋಡಿಸಬೇಕು: ಶಿವಸೇನೆ

ಕೇಂದ್ರದಲ್ಲಿ ಆಡಳಿತಾರೂಢ ಬಿಜೆಪಿಯನ್ನು ಸಮರ್ಥವಾಗಿ ಎದುರಿಸಲು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರೊಂದಿಗೆ ಕೈ ಜೋಡಿಸಿ ಕೆಲಸ ಮಾಡಬೇಕು ಎಂದು ಶಿವಸೇನೆ ಗುರುವಾರ ಹೇಳಿದೆ.
ರಾಹುಲ್ ಗಾಂಧಿ-ಶರದ್ ಪವಾರ್
ರಾಹುಲ್ ಗಾಂಧಿ-ಶರದ್ ಪವಾರ್
Updated on

ಮುಂಬೈ: ಕೇಂದ್ರದಲ್ಲಿ ಆಡಳಿತಾರೂಢ ಬಿಜೆಪಿಯನ್ನು ಸಮರ್ಥವಾಗಿ ಎದುರಿಸಲು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರೊಂದಿಗೆ ಕೈ ಜೋಡಿಸಿ ಕೆಲಸ ಮಾಡಬೇಕು ಎಂದು ಶಿವಸೇನೆ ಗುರುವಾರ ಹೇಳಿದೆ.

ಶಿವಸೇನೆಯ ಮುಖವಾಣಿ 'ಸಾಮ್ನಾದಲ್ಲಿ ಈ ಬಗ್ಗೆ ಸಂಪಾದಕೀಯ ಪ್ರಕಟಿಸಲಾಗಿದ್ದು, ರಾಹುಲ್ ಗಾಂಧಿ ಕೇಂದ್ರ ಸರ್ಕಾರ ಮತ್ತು ಅದರ ನೀತಿಗಳನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ್ದಾರೆ. ಆದರೆ ಅವರ ಹೋರಾಟ ಟ್ವಿಟರ್ ಗೆ ಸೀಮಿತವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಅಭಿವ್ಯಕ್ತಿಗಳು  ಬದಲಾಗಿವೆ. ದೇಶದ ಪರಿಸ್ಥಿತಿ ಕೈ ಮೀರಿ ಹೋಗುತ್ತಿದೆ. ಜನರ ಆಕ್ರೋಶದ ಹೊರತಾಗಿಯೂ, ಬಿಜೆಪಿ ಮತ್ತು ಎನ್ ಡಿಎ ಸರ್ಕಾರವು ಪ್ರತಿಪಕ್ಷಗಳ ದುರ್ಬಲತೆ ಮತ್ತು ಪ್ರತ್ಯೇಕವಾಗಿರುವುದನ್ನು ಅಸ್ತ್ರವಾಗಿ ಉಪಯೋಗಿಸಿಕೊಳ್ಳುತ್ತಿದೆ. ಇದರಿಂದ ಕೇಂದ್ರ ಸರ್ಕಾರಕ್ಕೆ ಅಂಕುಶಲೇ ಇಲ್ಲದಂತಾಗಿದೆ ಎಂದು  ಸಂಪಾದಕೀಯದಲ್ಲಿ ತಿಳಿಸಲಾಗಿದೆ. 

'ಎಲ್ಲಾ ವಿರೋಧ ಪಕ್ಷಗಳನ್ನು ಒಗ್ಗೂಡಿಸಲು ರಾಹುಲ್ ಗಾಂಧಿ ಅವರು ಶರದ್ ಪವಾರ್ ಅವರೊಂದಿಗೆ ಕೈಜೋಡಿಸಬೇಕು. ಶರದ್ ಪವಾರ್ ಎಲ್ಲ ವಿರೋಧ ಪಕ್ಷಗಳನ್ನು ಒಂದುಗೂಡಿಸಬಹುದು. ಆದರೆ, ನಂತರ ನಾಯಕತ್ವದ ಪ್ರಶ್ನೆ ಉದ್ಭವಿಸುತ್ತದೆ. ನಾವು ಕಾಂಗ್ರೆಸ್ನಿಂದ ನಾಯಕತ್ವವನ್ನು ನಿರೀಕ್ಷಿಸಿದರೆ ಆ ಪಕ್ಷವು  ಯಾವುದೇ ರಾಷ್ಟ್ರೀಯ ಅಧ್ಯಕ್ಷರಿಲ್ಲದೆ ನಡೆಯುತ್ತಿದೆ ಎಂದು ಹೇಳುವ ಮೂಲಕ ಶಿವಸೇನೆ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಸುವಂತೆ ಪರೋಕ್ಷ ಮನವಿ ಮಾಡಿದೆ.

ಅಂತೆಯೇ ರಾಹುಲ್ ಗಾಂಧಿ ತಮ್ಮ ನಿವಾಸದಲ್ಲಿ ವಿಪಕ್ಷ ನಾಯಕರಿಗಾಗಿ ಟೀ ಪಾರ್ಟಿಯನ್ನು ಆಯೋಜಿಸಬೇಕು ಎದು ಹೇಳಿರುವ ಶಿವಸೇನೆ, ಎಲ್ಲ ಪಕ್ಷಗಳ ನಾಯಕರ ಅಭಿಪ್ರಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಯುಪಿಎ (ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್) ಎಂಬ ಮೈತ್ರಿಕೂಟ  ಇದೆ. ಆದರೆ ದೇಶಕ್ಕೆ ಬಲವಾದ ಮತ್ತು ಸಂಘಟಿತ ವಿರೋಧ ಪಕ್ಷವಿದೆಯೇ? ಈ ಪ್ರಶ್ನೆಗೆ ಉತ್ತರ ಇನ್ನೂ ಬಾಕಿ ಇದೆ. ಶರದ್ ಪವಾರ್ ಅವರ ದೆಹಲಿ ನಿವಾಸದಲ್ಲಿ ನಡೆದ ಸಭೆ ಪ್ರತಿಪಕ್ಷಗಳ ನಿಜವಾದ ಸ್ಥಾನವನ್ನು ತೋರಿಸಿದೆ. ಎರಡೂವರೆ ಗಂಟೆಗಳ ಕಾಲ ನಡೆದ ಸಭೆಯಲ್ಲಿ ಮಾಧ್ಯಮಗಳ ಅತಿಯಾದ ವರದಿಗಳ  ಹೊರತಾಗಿಯೂ ಯಾವುದೇ ಒಮ್ಮತದ ನಿರ್ಣಯ ಹೊರಬರಲಿಲ್ಲ ಎಂದು ಪರೋಕ್ಷವಾಗಿ ಶಿವಸೇನೆ ವ್ಯಂಗ್ಯವಾಡಿದೆ. 

ಅಂತೆಯೇ ಈ ಸಭೆ ಮೂಲಕ ಯಶ್ವಂತ್ ಸಿನ್ಹಾ ಅವರು ಸ್ಥಾಪಿಸಿರುವ ರಾಷ್ಟ್ರೀಯ ಮಂಚ್ ಎಂಬ ಮೈತ್ರಿಕೂಟ ಇದೆ ಎಂದು ಅಂಶ ಬೆಳಕಿಗೆ ಬಂದಿತೇ ಹೊರತು, ಇದರಿಂದ ರಾಜಕೀಯ ಬದಲಾವಣೆ ತರುವ ಊಹೆ ಇಲ್ಲದಾಯಿತು. ರಾಜಕೀಯ ಕ್ರಮಗಳನ್ನು ತೆಗೆದುಕೊಳ್ಳುವ ಬದಲು ಚರ್ಚೆಗೆ ಆದ್ಯತೆ ನೀಡಲಾಗಿದೆ  ಎಂದು ಸಾಮ್ನಾದಲ್ಲಿ ಶಿವಸೇನೆ ಟೀಕಿಸಿದೆ. ಅಂತೆಯೇ ಪ್ರಸ್ತುತ ದೇಶಕ್ಕೆ ಬಲವಾದ ವಿರೋಧ ಪಕ್ಷದ ಅಗತ್ಯತೆ ಇದ್ದು, ಅಂತಹ ವಿರೋಧ ಪಕ್ಷವು ರಾಷ್ಟ್ರಮಟ್ಟದಲ್ಲಿ "ಅಸ್ತಿತ್ವದಲ್ಲಿಲ್ಲ". ಹಲವಾರು ಪ್ರಾದೇಶಿಕ ಪಕ್ಷಗಳು ಬಿಜೆಪಿ ವಿರುದ್ಧ ಎದ್ದುನಿಂತು ಚುನಾವಣೆಯಲ್ಲಿ ಅದನ್ನು ಸೋಲಿಸಿವೆ ಎಂದು ಶಿವಸೇನೆ ಹೇಳಿದೆ.

ಭಾರತೀಯ ಜನತಾ ಪಕ್ಷ (ಬಿಜೆಪಿ) ವಿರುದ್ಧ ಮೂರನೇ ರಂಗದ ಸಾಧ್ಯತೆಯ ಬಗ್ಗೆ ತೀವ್ರ ಊಹಾಪೋಹಗಳ ಮಧ್ಯೆ, ಪವಾರ್ ಅವರ ನಿವಾಸದಲ್ಲಿ ನಡೆದ ಸಭೆಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ), ಸಮಾಜವಾದಿ ಪಕ್ಷ, ಆಮ್ ಆದ್ಮಿ ಪಕ್ಷ, ರಾಷ್ಟ್ರೀಯ ಲೋಕ ದಳ ಮತ್ತು ಎಡರಂಗ ಸೇರಿದಂತೆ 8 ವಿರೋಧ ಪಕ್ಷಗಳ  ಮುಖಂಡರು ಪಾಲ್ಗೊಂಡು ಚರ್ಚೆ ನಡೆಸಿದ್ದರು. ಆದಾಗ್ಯೂ, ಚರ್ಚೆಗಳಲ್ಲಿ ಭಾಗವಹಿಸಿದ ನಾಯಕರು ರಾಷ್ಟ್ರೀಯ ವೇದಿಕೆಯು ಸಮಾನ ಮನಸ್ಕರ ಸಭೆ ಎಂದು ಹೇಳಿಕೊಂಡಿದ್ದರು. 
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com