'ಮಹಾರಾಜನೆಂಬ ಭಾವನೆ ಬಂದಿತ್ತು'; ಏರ್ ಇಂಡಿಯಾ ವಿಮಾನದಲ್ಲಿ ಏಕಾಂಗಿಯಾಗಿ ದುಬೈಗೆ ಪ್ರಯಾಣಿಸಿದ ಉದ್ಯಮಿ ಅನುಭವ!

ಯುಎಇ ಮೂಲದ ಭಾರತೀಯ ಉದ್ಯಮಿಯೊಬ್ಬರು ಅಮೃತಸರದಿಂದ ದುಬೈಗೆ ಏರ್ ಇಂಡಿಯಾ ಅಂತಾರಾಷ್ಟ್ರೀಯ ವಿಮಾನದಲ್ಲಿ ಏಕಾಂಗಿಯಾಗಿ ಪ್ರಯಾಣಿಸುವ ಇದೀಗ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದಾರೆ.
ಏಕಾಂಗಿಯಾಗಿ ದುಬೈಗೆ ಪ್ರಯಾಣಿಸಿದ ಉದ್ಯಮಿ
ಏಕಾಂಗಿಯಾಗಿ ದುಬೈಗೆ ಪ್ರಯಾಣಿಸಿದ ಉದ್ಯಮಿ

ನವದೆಹಲಿ: ಯುಎಇ ಮೂಲದ ಭಾರತೀಯ ಉದ್ಯಮಿಯೊಬ್ಬರು ಅಮೃತಸರದಿಂದ ದುಬೈಗೆ ಏರ್ ಇಂಡಿಯಾ ಅಂತಾರಾಷ್ಟ್ರೀಯ ವಿಮಾನದಲ್ಲಿ ಏಕಾಂಗಿಯಾಗಿ ಪ್ರಯಾಣಿಸುವ ಇದೀಗ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದಾರೆ.

ಹೌದು.. ಪಂಜಾಬ್ ಮೂಲದ ಉದ್ಯಮಿ ಎಸ್‌ಪಿ ಸಿಂಗ್ ಒಬೆರಾಯ್, ಬುಧವಾರ ಬೆಳಗ್ಗೆ ನಾಲ್ಕು ಗಂಟೆಗೆ ಅಮೃತಸರದಿಂದ ದುಬೈಗೆ ಏರ್ ಇಂಡಿಯಾ ವಿಮಾನದ ಮೂಲಕ ತೆರಳಿದ್ದಾರೆ. ಅರೆ ಇದರಲ್ಲೇನು ವಿಶೇಷ ಎಂದರೆ.. ಏರ್ ಇಂಡಿಯಾ (AI-929) ಇಡೀ ವಿಮಾನದಲ್ಲಿದ್ದ ಏಕೈಕ ಪ್ರಯಾಣಿಕರೆಂದರೆ ಅದು ಉದ್ಯಮಿ ಎಸ್‌ಪಿ ಸಿಂಗ್ ಒಬೆರಾಯ್ ಮಾತ್ರ. ಇದೇ ಕಾರಣಕ್ಕೆ ಅವರು ಇದೀಗ ಸುದ್ದಿಗೆ ಗ್ರಾಸವಾಗಿದ್ದಾರೆ. 

ಈ ಕುರಿತಂತೆ ತಮ್ಮ ಸಂತಸವನ್ನು ಹಂಚಿಕೊಂಡಿರುವ ಎಸ್‌ಪಿ ಸಿಂಗ್ ಒಬೆರಾಯ್, 'ಈ ಪ್ರಯಾಣವು ನನಗೆ ಮಹಾರಾಜನ ಅನುಭವ ನೀಡಿತು. ಪ್ರಯಾಣದ ಅವಧಿಯಲ್ಲಿ ಸಿಬ್ಬಂದಿ ನನ್ನನ್ನು ಚೆನ್ನಾಗಿ ನೋಡಿಕೊಂಡರು. ವಿಮಾನದಲ್ಲಿದ್ದ ಏಕೈಕ ಪ್ರಯಾಣಿಕನಾಗಿದ್ದರಿಂದ ನನ್ನೊಂದಿಗೆ ವಿಮಾನದ ಸಿಬ್ಬಂದಿ ಸೆಲ್ಫಿ ತೆಗೆದುಕೊಂಡರು. ಒಂದಷ್ಟು ನಿಮಿಷ ಚರ್ಚೆ ನಡೆಸಿದೆವು. ಬಳಿಕ ಅವರು ಅವರ ಕೆಲಸದಲ್ಲಿ ತೊಡಗಿಕೊಂಡರು. ಒಟ್ಟಾರೆಯಾಗಿ ಈ ಅನುಭವ ಚೆನ್ನಾಗಿತ್ತು. ಆದರೆ ಯಾರೂ ಜತೆಗಿಲ್ಲದೆ ಬೋರ್ ಅನ್ನಿಸತೊಡಗಿತು ಎಂದು ಹೇಳಿದ್ದಾರೆ.

ಇನ್ನು ಎಸ್‌ಪಿ ಸಿಂಗ್ 10 ವರ್ಷಗಳ ಅವಧಿಯ ದುಬೈ ಗೋಲ್ಡನ್ ವೀಸಾ ಪಡೆದಿದ್ದು, ಅಲ್ಲಿ ಅವರ ಉದ್ಯಮ ಕೂಡ ಇದೆ. ಹೀಗಾಗಿ ಅವರು ಏಕೈಕ ಪ್ರಯಾಣಿಕನಾಗಿದ್ದರೂ, ಏರ್ ಇಂಡಿಯಾ ಸಂಸ್ಥೆ ವಿಮಾನ ಹಾರಾಟ ನಡೆಸಿದೆ. ಅಮೃತಸರದಿಂದ ದುಬೈ ಪ್ರಯಾಣಕ್ಕೆ ಸಿಂಗ್ 750 ದಿರ್ಹಾಂ (ಅಂದಾಜು 15,000) ತೆತ್ತು ಟಿಕೆಟ್ ಖರೀದಿಸಿದ್ದರು ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com