ಖಂಡಿತ ಮುಸ್ಲಿಂರು ಜನಸಂಖ್ಯೆ ನಿಯಂತ್ರಣಕ್ಕೆ ಮುಂದಾಗುವರು: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ

ಮುಸ್ಲಿಂರು ಖಂಡಿತ ಜನಸಂಖ್ಯೆ ನಿಯಂತ್ರಣಕ್ಕೆ ಮುಂದಾಗುವರು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವ ಶರ್ಮಾ
ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವ ಶರ್ಮಾ
Updated on

ದಿಸ್ ಪುರ:  ಮುಸ್ಲಿಂರು ಖಂಡಿತ ಜನಸಂಖ್ಯೆ ನಿಯಂತ್ರಣಕ್ಕೆ ಮುಂದಾಗುವರು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಅಸ್ಸಾಂಗಾಗಿ ನಿಮ್ಮ 10 ವರ್ಷಗಳ ದೂರದೃಷ್ಟಿ ಏನು?

ಹಲವು ಸಮಸ್ಯೆಗಳಿವೆ. ಸಾಮಾಜಿಕ ವಲಯದಲ್ಲಿ, ಅಸ್ಸಾಂ ರಾಜ್ಯಗಳ ಉನ್ನತ ಸ್ಥಾನದಲ್ಲಿಲ್ಲ. ಮೂಲಸೌಕರ್ಯ, ರಾಜ್ಯ ಅಭಿವೃದ್ಧಿ ದರ ಸೂಚ್ಯಂಕ ಅಥವಾ ತಾಯಿ, ಶಿಶು ಮರಣ ಸೂಚ್ಯಂಕ ಮತ್ತಿತರ ವಲಯಗಳಲ್ಲಿ ಅಸ್ಸಾಂ ಶ್ರೇಯಾಂಕವನ್ನು ಹೇಗೆ ಸುಧಾರಿಸಬಹುದು ಎಂಬುದರ ಬಗ್ಗೆ ಎಲ್ಲಾ ಪ್ರಯತ್ನ ನಡೆಸುತ್ತೇನೆ. ಇದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ. ಅಸ್ಸಾಂ ಪ್ರವಾಹ, ಕಡಲ್ಕೊರೆತ ಮತ್ತಿತರ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅವುಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ. ಅಸ್ಸಾಂ ಅಭಿವೃದ್ಧಿ, ಈಶಾನ್ಯ ರಾಜ್ಯಗಳ ಅಭಿವೃದ್ಧಿಯೊಂದಿಗೆ ಸಂಬಂಧ ಹೊಂದಿದೆ. ಗಡಿ ಸಮಸ್ಯೆಗಳನ್ನು ಬಗೆಹರಿಸಿ, ಪ್ರವಾಸೋದ್ಯಮ ಮೂಲಸೌಕರ್ಯ ಅಭಿವೃದ್ಧಿ, ಸಂಪರ್ಕ ಇತ್ಯಾದಿಗಳಂತಹ ವಿವಿಧ ನೀತಿ ವಿಧಾನಗಳಲ್ಲಿ ಏಕರೂಪತೆಯನ್ನು ತರುವುದು ಮತ್ತೊಂದು ಉದ್ದೇಶವಾಗಿದೆ.

ಅಸ್ಸಾಂಗೆ ಮತ್ತೊಂದು ವಿಶಿಷ್ಠ ಸಮಸ್ಯೆಯಿದೆ. ವಾರ್ಷಿಕ ಜನಸಂಖ್ಯೆ ಬೆಳವಣಿಗೆ ದರವನ್ನು ಶೇ 1.6 ಅಜುಬಾಜಿನಲ್ಲಿ ಇಡಬೇಕಾಗಿದೆ. ಆದರೆ, ಇದು ಮಿತಿ ಮೀರುತ್ತಿದೆ. ಮುಸ್ಲಿಂ ಜನಸಂಖ್ಯೆ ಬಹುತೇಕ ಶೇಕಡಾ 29 ರಷ್ಟಿದ್ದರೆ, ಹಿಂದೂಗಳ ಬೆಳವಣಿಗೆ ದರ ಕೇವಲ ಶೇ.10 ರಷ್ಟಿದೆ.  ಬಡತನ, ಅನಕ್ಷರತೆ ಮುಸ್ಲಿಂರಲ್ಲಿ ಹೆಚ್ಚಾಗಿದೆ ಎಂಬುದು ಇದರ ಅರ್ಥವಾಗಿದೆ. ಆದ್ದರಿಂದ ಜನಸಂಖ್ಯೆ ಬೆಳವಣಿಗೆ ದರ ಹೆಚ್ಚಾಗದಂತೆ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ. ಅದಕ್ಕಾಗಿ ಆರೋಗ್ಯ ಮತ್ತು ಶಿಕ್ಷಣ ಕ್ರಮಗಳನ್ನು ವಿಸ್ತರಿಸಬೇಕಾದ ಅಗತ್ಯವಿದೆ. ಆದ್ದರಿಂದ, ಇವು  ನನ್ನ ಪ್ರಾಥಮಿಕ ಉದ್ದೇಶಗಳಾಗಿವೆ.

* ಬುಡುಕಟ್ಟು ಮತ್ತು ಟೀ ತೋಟದಲ್ಲಿ ಕೆಲಸ ಮಾಡುವವರಿಗೆ ಎರಡು ಮಕ್ಕಳ ಜನಸಂಖ್ಯೆ ನೀತಿಯಿಂದ ವಿನಾಯಿತಿ, ಇಡೀ ಉದ್ದೇಶವನ್ನು ಹಾಳು ಮಾಡುವುದಿಲ್ಲವೇ?
ಅಲ್ಪಸಂಖ್ಯಾತ ಮಹಿಳೆಯರಿಗೆ ಆರ್ಥಿಕ ಒಳಗೊಳ್ಳುವಿಕೆ ಅಥವಾ ವಿಶ್ವವಿದ್ಯಾನಿಲಯಗಳಲ್ಲಿ ಬಾಲಕಿಯರಿಗೆ ಉಚಿತ ಶಿಕ್ಷಣ, ಅಲ್ಪಸಂಖ್ಯಾತ ಪ್ರದೇಶದ ಮಹಿಳೆಯರ ಕಾಲೇಜ್, ವಿಶ್ವವಿದ್ಯಾನಿಲಯ, ಪಂಚಾಯಿತಿಗಳು, ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ಮತ್ತಿತರ ಕೆಲವೊಂದು ಪ್ರೋತ್ಸಾಹಕಗಳು ಇರಲಿವೆ ಎಂದು ಹೇಳಿದ್ದೇವೆ. ಈ ನೀತಿ ನಿಯಂತಕಗಳು, ಕ್ರಮಗಳ ಬಗ್ಗೆ ಮಾತನಾಡುತ್ತವೆ. ಆದರೆ, ಪ್ರೋತ್ಸಾಹಕಗಳ ಕಡೆಗೆ ಮಾತ್ರ ಗಮನ ಹರಿಸಿದರೆ, ಎಲ್ಲಾ ನೀತಿಗಳು ವಿಫಲ ಅನಿಸುತ್ತದೆ.  ಸಮಾಜದಲ್ಲಿ, ಇಬ್ಬರೂ ಒಟ್ಟಿಗೆ ಕೆಲಸ ಮಾಡುವ ವಿಧಾನವನ್ನು ನೀವು ಹೊಂದಿರಬೇಕು.

* ಮುಸ್ಲಿಂ ಜನಸಂಖ್ಯೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರ  ಕೆಲಸ ಮಾಡಬೇಕಾಗಿದೆ ಎಂದು ನೀವು ಭಾವಿಸುತ್ತೀರಾ?
ಮುಸ್ಲಿಂ ಸಮಾಜದ ವಿವಿಧ ನಾಯಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಬಡತನ ಮತ್ತು ಅನಕ್ಷರತೆಯನ್ನು ನಿರ್ಮೂಲನೆ ಮಾಡಲು, ಸಮುದಾಯದೊಳಗಿನ ಒಂದು ವಿಧಾನದ ಅಗತ್ಯವಿದೆ. ಇದು ರಾಜಕೀಯ ಸಮಸ್ಯೆಯಲ್ಲ, ಸಮುದಾಯದೊಳಗೆ ಒಂದು ರೀತಿಯ ಉಪಕ್ರಮ ಅಥವಾ ನಾಯಕತ್ವವನ್ನು ಸೃಷ್ಟಿಸುವ ಸಲುವಾಗಿ ಮುಂದಿನ ತಿಂಗಳು ವಿವಿಧ ಮುಸ್ಲಿಂ ಸಂಘಟನೆಗಳ ಮುಖಂಡರನ್ನು ಭೇಟಿ ಮಾಡುತ್ತೇನೆ.

* ಬುಡಕಟ್ಟು ಸಮುದಾಯ ಸಣ್ಣ ಜನಸಂಖ್ಯೆಯನ್ನು ಹೊಂದಿದ್ದಾರೆ ಮತ್ತು ಅವರನ್ನು ಜನಸಂಖ್ಯಾ ನೀತಿಯಿಂದ ವಿನಾಯಿತಿ ನೀಡುವುದರಲ್ಲಿ ಅರ್ಥವಿದೆ. ಆದರೆ ಟೀ ಗಾರ್ಡನ್ ಸಮುದಾಯಕ್ಕೆ ಏಕೆ ವಿನಾಯಿತಿ ನೀಡಲಾಗಿದೆ?

ಟೀ ಗಾರ್ಡನ್  ಸಮುದಾಯದ ಜನರು ಕೂಡಾ ಬುಡಕಟ್ಟು ಸಮುದಾಯದವರಾಗಿದ್ದಾರೆ. ಅವರ ಬಗ್ಗೆಗಿನ ಇತಿಹಾಸ ನೋಡಿದರೆ, ಅಸ್ಸಾಂನೊಳಗೆ ಅವರನ್ನು ಸಂವಿಧಾನಿಕವಾಗಿ ಬುಡಕಟ್ಟು ಸಮುದಾಯ ಅಂತಾ ಘೋಷಿಸದಿದ್ದರೂ ಅವರು ಆದಿವಾಸಿಗಳು.  ಅವರಲ್ಲಿ ಮುಂಡಾ, ಕುರ್ಮಿ ಮತ್ತಿತರ ಸಮುದಾಯವಿದೆ. ಅವರು ತಮ್ಮ ತವರು ನೆಲದಲ್ಲಿ ಎಸ್ ಸಿ ಅಥವಾ ಎಸ್ ಟಿಕ್ಕೆ ಸೇರಿರಬಹುದು ಆದರೆ, ಕೆಲವೊಂದು ಸಂವಿಧಾನಿಕ ಕಾರಣದಿಂದ ಅಸ್ಸಾಂನಲ್ಲಿ ಅವರಿಗೆ ಪರಿಶಿಷ್ಟ ಪಂಗಡದ ಸ್ಥಾನಮಾನ ನೀಡಿಲ್ಲ. ಆದರೆ, ದೇಶದ ನಿಟ್ಟಿನಲ್ಲಿ ಅವರು ಆದಿವಾಸಿಗಳಾಗಿದ್ದಾರೆ. ಆದ್ದರಿಂದ, ನಮ್ಮ ನೀತಿ ಸ್ಥಿರವಾಗಿದೆ. ಅಸ್ಸಾಂನಲ್ಲಿ ಬುಡಕಟ್ಟು ಜನಸಂಖ್ಯೆ ಕ್ಷೀಣಿಸುತ್ತಿರುವುದನ್ನು ನಾವು ನೋಡಿದ್ದೇವೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com