ಭಾರತದಾದ್ಯಂತ ಈ ವರೆಗೆ 15.89 ಕೋಟಿ ಕೋವಿಡ್-19 ಲಸಿಕೆ ನೀಡಿಕೆ

ಭಾರತದಾದ್ಯಂತ ಮೇ.04 ರಂದು ಬೆಳಿಗ್ಗೆ 7 ಗಂಟೆವರೆಗೂ 15.89 ಕೋಟಿ ಮಂದಿಗೆ ಕೋವಿಡ್-19 ಲಸಿಕೆ ನೀಡಲಾಗಿದೆ. 
ಕೋವಿಡ್-19 ಲಸಿಕೆ (ಸಂಗ್ರಹ ಚಿತ್ರ)
ಕೋವಿಡ್-19 ಲಸಿಕೆ (ಸಂಗ್ರಹ ಚಿತ್ರ)

ನವದೆಹಲಿ: ಭಾರತದಾದ್ಯಂತ ಮೇ.04 ರಂದು ಬೆಳಿಗ್ಗೆ 7 ಗಂಟೆವರೆಗೂ 15.89 ಕೋಟಿ ಮಂದಿಗೆ ಕೋವಿಡ್-19 ಲಸಿಕೆ ನೀಡಲಾಗಿದೆ. 

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ನೀಡಿರುವ ಮಾಹಿತಿಯ ಪ್ರಕಾರ ಈ ವರೆಗೂ ಒಟ್ಟು 15.89 ಕೋಟಿ ಮಂದಿಗೆ ಕೋವಿಡ್-19 ಲಸಿಕೆ ನೀಡಲಾಗಿದ್ದರೆ, ಈ ಪೈಕಿ 18-44 ವಯಸ್ಸಿನ 4 ಲಕ್ಷ ಮಂದಿ ಮೂರನೇ ಹಂತದಲ್ಲಿ ಲಸಿಕೆ ಪಡೆದಿದ್ದಾರೆ. 

12 ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಲ್ಲಿ 18-44 ವಯಸ್ಸಿನ 4,06,339 ಮಂದಿ ಮೊದಲ ಡೋಸ್ ಲಸಿಕೆಯನ್ನು ಪಡೆದಿದ್ದಾರೆ ಎಂದು ಸಚಿವಾಲಯ ಮಾಹಿತಿ ನೀಡಿದೆ. 

ಚತ್ತೀಸ್ ಗಢ (1,025) ದೆಹಲಿ (40,028), ಗುಜರಾತ್ (1,08,191) ಹರ್ಯಾಣ (55,565)
ಜಮ್ಮು-ಕಾಶ್ಮೀರ (5,587), ಕರ್ನಾಟಕ (2,353), ಮಹಾರಾಷ್ಟ್ರ (73,714), ಒಡಿಶಾ(6,802), ಪಂಜಾಬ್ (635), ರಾಜಸ್ಥಾನ(76,151), ತಮಿಳುನಾಡು (2,744)  ಉತ್ತರ ಪ್ರದೇಶ (33,544) ಗಳಲ್ಲಿ ಲಸಿಕೆ ನೀಡಲಾಗಿದೆ. 

23,35,822 ಸೆಷನ್ ಗಳ ಮೂಲಕ 15,89,32,921 ಮಂದಿಗೆ ಲಸಿಕೆ ಡೋಸ್ ಗಳನ್ನು ನೀಡಲಾಗಿದೆ. ಈ ಪೈಕಿ 94,48,289 ಮಂದಿ ಆರೋಗ್ಯ ಕಾರ್ಯಕರ್ತರು ಮೊದಲ ಡೋಸ್ ಲಸಿಕೆ ಪಡೆದಿದ್ದರೆ, 62,97,900 ಮಂದಿ 2 ನೇ ಡೋಸ್ ಲಸಿಕೆ ಪಡೆದಿದ್ದಾರೆ. 

1,35,05,877 ಮುನ್ನೆಲೆ ಕಾರ್ಯಕರ್ತರು ಮೊದಲ ಡೋಸ್ ಪಡೆದಿದ್ದು, 72,66,380  ಮಂದಿ ಎರಡೂ ಡೋಸ್ ಗಳ ಲಸಿಕೆಯನ್ನು ಪಡೆದಿದ್ದಾರೆ. 45-60 ವಯಸ್ಸಿನ 5,30,50,669 ಮಂದಿಗೆ ಮೊದಲ ಡೋಸ್ ಲಸಿಕೆ ಹಾಗೂ 41,42,786 ಮಂದಿಗೆ 2 ನೇ ಡೋಸ್ ಲಸಿಕೆಯನ್ನು ನೀಡಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com