ಟೌಕ್ಟೇ ಚಂಡಮಾರುತ: ಪಿ305 ಬಾರ್ಜ್ ದುರಂತದ 16 ಮಂದಿಯ ಶವಗಳು ಪತ್ತೆ; ನೌಕಾಪಡೆ ಮಾಹಿತಿ

ಟೌಕ್ಟೇ ಚಂಡಮಾರುತದ ಅಬ್ಬರಕ್ಕೆ ಸಿಲುಕಿ ಅರಬ್ಬಿ ಸಮುದ್ರದಲ್ಲಿ ಮುಳುಗಿದ್ದ ಪಿ305 ಬಾರ್ಜ್‌ ಮತ್ತು ಟಗ್‌ ಬೋಟ್‌ ವರಪ್ರದದಲ್ಲಿ ನಾಪತ್ತೆಯಾಗಿದ್ದ 16 ಮಂದಿಯ ಶವಗಳು ಮಹಾರಾಷ್ಟ್ರ ಮತ್ತು ಗುಜರಾತ್‌ ಕರಾವಳಿಯಲ್ಲಿ ಪತ್ತೆಯಾಗಿವೆ ಎಂದು ಭಾರತೀಯ ನೌಕಾಪಡೆ ಸೋಮವಾರ ತಿಳಿಸಿದೆ.
ನೌಕಾ ಪಡೆಯ ಹಡಗುಗಳಿಂದ ರಕ್ಷಣಾ ಕಾರ್ಯಾಚರಣೆ
ನೌಕಾ ಪಡೆಯ ಹಡಗುಗಳಿಂದ ರಕ್ಷಣಾ ಕಾರ್ಯಾಚರಣೆ

ಮುಂಬೈ: ಟೌಕ್ಟೇ ಚಂಡಮಾರುತದ ಅಬ್ಬರಕ್ಕೆ ಸಿಲುಕಿ ಅರಬ್ಬಿ ಸಮುದ್ರದಲ್ಲಿ ಮುಳುಗಿದ್ದ ಪಿ305 ಬಾರ್ಜ್‌ ಮತ್ತು ಟಗ್‌ ಬೋಟ್‌ ವರಪ್ರದದಲ್ಲಿ ನಾಪತ್ತೆಯಾಗಿದ್ದ 16 ಮಂದಿಯ ಶವಗಳು ಮಹಾರಾಷ್ಟ್ರ ಮತ್ತು ಗುಜರಾತ್‌ ಕರಾವಳಿಯಲ್ಲಿ ಪತ್ತೆಯಾಗಿವೆ ಎಂದು ಭಾರತೀಯ ನೌಕಾಪಡೆ ಸೋಮವಾರ ತಿಳಿಸಿದೆ.

ಈ ಕುರಿತಂತೆ ಭಾರತೀಯ ನೌಕಾಪಡೆ ವಕ್ತಾರರು ಮಾಹಿತಿ ನೀಡಿದ್ದು, 'ಮೇ 17ರಂದು ಅರಬ್ಬಿ ಸಮುದ್ರದಲ್ಲಿ 274 ಸಿಬ್ಬಂದಿ (ಪಿ305 ಬಾರ್ಜ್‌ನ 261 ಮತ್ತು ವರಪ್ರದದ 13 ಸಿಬ್ಬಂದಿ) ನಾಪತ್ತೆಯಾಗಿದ್ದರು. ಈ ಪೈಕಿ ಬಾರ್ಜ್‌ನಿಂದ 186 ಮಂದಿ ಮತ್ತು ವರಪ್ರದದಿಂದ ಇಬ್ಬರನ್ನು ರಕ್ಷಿಸಲಾಗಿತ್ತು. 70  ಮಂದಿಯ ಶವಗಳು ಸಮುದ್ರದಲ್ಲಿ ಪತ್ತೆಯಾಗಿದ್ದವು. ಇದೀಗ 274 ಸಿಬ್ಬಂದಿ ಪೈಕಿ ಬಾಕಿ ಉಳಿದಿದ್ದ 16 ಮಂದಿಯ ಶವವೂ ಪತ್ತೆಯಾಗಿದೆ. ಮಹಾರಾಷ್ಟ್ರದ ರಾಯಗಢದ ಕರಾವಳಿ ಪ್ರದೇಶದಲ್ಲಿ 8 ಮತ್ತು ಗುಜರಾತ್‌ನ ವಲ್ಸದ್ ಕರಾವಳಿ ಬಳಿ 8 ಶವಗಳು ಸಿಕ್ಕಿವೆ. ಈ ಮೂಲಕ ಅರಬ್ಬಿ ಸಮುದ್ರದಲ್ಲಿ  ನಾಪತ್ತೆಯಾಗಿದ್ದ 274 ಸಿಬ್ಬಂದಿಯ ಲೆಕ್ಕಚಾರ ಸಿಕ್ಕಿವೆ. ಶವಗಳ ಗುರುತು ಪತ್ತೆ ಹಚ್ಚುವ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. ಹಾಗಾಗಿ ಈ ಬಗ್ಗೆ ಅಂತಿಮ ದೃಢೀಕರಣ ಬಾಕಿಯಿದೆ ಎಂದು ಅವರು ಮಾಹಿತಿ ನೀಡಿದರು.

ಭಾನುವಾರದವರೆಗೆ ರಕ್ಷಣಾ ಪಡೆಯು 70 ಶವಗಳನ್ನು ಪತ್ತೆ ಹಚ್ಚಿವೆ. 16 ಶವಗಳು ಕರಾವಳಿ ತೀರಗಳಲ್ಲಿ ದೊರೆತಿವೆ. ಗುರುತು ಚೀಟಿ, ಬ್ಯಾಚ್‌ ನಂಬರ್‌, ಗಾಯದ ಗುರುತು, ಟ್ಯಾಟೂ ಮೂಲಕ ಸಂಬಂಧಿಕರು ಮೃತದೇಹಗಳನ್ನು ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ. ಈ ಮೂಲಕ ವ್ಯಕ್ತಿಯನ್ನು ಗುರುತಿಸಲು  ಸಾಧ್ಯವಾಗದಿದ್ದರೆ, ಬಳಿಕ ಡಿಎನ್‌ಎ ಪರೀಕ್ಷೆ ನಡೆಸಲಾಗುವುದು ಎಂದು ಮತ್ತೋರ್ವ ಅಧಿಕಾರಿ ಮಾಹಿತಿ ನೀಡಿದರು.

ಸೈಡ್ ಸ್ಕ್ಯಾನ್ ಸೋನಾರ್‌ಗಳನ್ನು ಹೊಂದಿದ ನೌಕಾಪಡೆಯ ಶೋಧ ನೌಕೆ ಐಎನ್‌ಎಸ್ ಮಕರ್, ಮೇ 17 ರಂದು ಪಿ 305 ರ ಭಗ್ನಾವಶೇಷವನ್ನು ಶನಿವಾರ ಪತ್ತೆ ಮಾಡಿತ್ತು. ಶೋಧ ಮತ್ತು ಪಾರುಗಾಣಿಕಾ (ಎಸ್‌ಎಆರ್) ಕಾರ್ಯಾಚರಣೆಯನ್ನು ಹೆಚ್ಚಿಸಲು ನೌಕಾಪಡೆಯು ವಿಶೇಷ ಡೈವಿಂಗ್ ತಂಡಗಳನ್ನು  ನಿಯೋಜಿಸಿತ್ತು. ಅದರಂತೆ ಎಸ್‌ಎಆರ್ ಕಾರ್ಯಾಚರಣೆಯನ್ನು ಇನ್ನೂ ನಿಲ್ಲಿಸಿಲ್ಲ ಎಂದು ವಕ್ತಾರರು ಪಿಟಿಐ ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com