ಕಾವೇರಿ ವಿವಾದ: ಮೇಕೆದಾಟುವಿನಲ್ಲಿ ಅಕ್ರಮ ನಿರ್ಮಾಣ ಆರೋಪದ ತನಿಖೆಗೆ ಎನ್ ಜಿಟಿ ಸಮಿತಿ ರಚನೆ

ಮೇಕೆದಾಟುವಿನಲ್ಲಿ ಅನಧಿಕೃತ ನಿರ್ಮಾಣ ಚಟುವಟಿಕೆಗಳ ಆರೋಪ ಪರಿಶೀಲಿಸಲು ಜಂಟಿ ಸಮಿತಿಯೊಂದನ್ನು ರಾಷ್ಟ್ರೀಯಹಸಿರು ನ್ಯಾಯಾಧೀಕರಣ ನೇಮಿಸಿದೆ. ಅಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಲು ಕರ್ನಾಟಕ ಸರ್ಕಾರ ಪ್ರಸ್ತಾಪಿಸಿತ್ತು.
ಮೇಕೆದಾಟು
ಮೇಕೆದಾಟು

ಚೆನ್ನೈ: ಮೇಕೆದಾಟುವಿನಲ್ಲಿ ಅನಧಿಕೃತ ನಿರ್ಮಾಣ ಚಟುವಟಿಕೆಗಳ ಆರೋಪ ಪರಿಶೀಲಿಸಲು ಜಂಟಿ ಸಮಿತಿಯೊಂದನ್ನು ರಾಷ್ಟ್ರೀಯ
ಹಸಿರು ನ್ಯಾಯಾಧೀಕರಣ ನೇಮಿಸಿದೆ. ಅಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಲು ಕರ್ನಾಟಕ ಸರ್ಕಾರ ಪ್ರಸ್ತಾಪಿಸಿತ್ತು.

ಇದೇ ವರ್ಷದ ಏಪ್ರಿಲ್ 15 ರಂದು ಪ್ರಕಟಗೊಂಡ ವರದಿ ಆಧಾರದ ಮೇಲೆ ಸ್ವಯಂ ಪ್ರೇರಿತವಾಗಿ ಈ ವಿಚಾರವನ್ನು ಕೈಗೆತ್ತಿಕೊಂಡಿರುವ ನ್ಯಾಯಾಧೀಶ ಕೆ ರಾಮಕೃಷ್ಣನ್ ಹಾಗೂ ತಜ್ಞ ಸದಸ್ಯ ಡಾ ಕೆ ಸತ್ಯಗೋಪಾಲ್, ಜುಲೈ 5ರೊಳಗೆ ವರದಿ ಸಲ್ಲಿಸುವಂತೆ ಸಮಿತಿಗೆ ನಿರ್ದೇಶಿಸಿದೆ.

ಉದ್ದೇಶಿತ ಯೋಜನೆ ಪ್ರದೇಶದ ಬಳಿ ಕೆಲ ಚಟುವಟಿಕೆಗಳು ನಡೆಯುತ್ತಿದ್ದು, ಸಾಮಾಗ್ರಿಗಳನ್ನು ಸಂಗ್ರಹಿಸಲಾಗಿದೆ ಎಂದು ಸುದ್ದಿಪತ್ರಿಕೆಗಳ ವರದಿಯಲ್ಲಿ ಆರೋಪಿಸಲಾಗಿದೆ ಎಂದು ನ್ಯಾಯ ಪೀಠ ಹೇಳಿತು. ಈ ಹಿಂದೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಿಂದ ಎರಡು ಬಾರಿ ಯೋಜನೆಯನ್ನು ಮುಂದೂಡಲಾಗಿದ್ದು ಅಗತ್ಯ ಅನುಮತಿಯ ಕೊರತೆಯಿದೆ ಎಂಬುದನ್ನು ಉಲ್ಲೇಖಿಸಲಾಗಿತ್ತು ಎಂದು ನ್ಯಾಯಪೀಠ ತಿಳಿಸಿತು.

ಮೇಕೆದಾಟುವಿನಲ್ಲಿ ಪರಿಸರದ ಬಗ್ಗೆ ಸಾಕಷ್ಟು ಪ್ರಶ್ನೆಗಳಿರುವುದರಿಂದ ನ್ಯಾಯಾಧೀಕರಣ ಮಧ್ಯಪ್ರವೇಶಿಸಿದೆ.ಆದ್ದರಿಂದ ಈ ವಿಚಾರವನ್ನು ಕೈಗೆತ್ತಿಕೊಳ್ಳಲಾಗಿದೆ. ಒಂದು ವೇಳೆ ಪರಿಸರದ ಮೇಲಾಗುವ ಪರಿಣಾಮದ ಮೌಲ್ಯಮಾಪನ ನಡೆಸದೆ ಮತ್ತು ಅಗತ್ಯ ಅನುಮತಿ ಪಡೆಯದೆ ಯೋಜನೆಯನ್ನು ಕಾರ್ಯಗತಗೊಳಿಸಿದರೆ, ಅಥವಾ ಏನಾದರೂ ಅಗತ್ಯವಿದ್ದರೆ, ಅನಧಿಕೃತ ಚಟುವಟಿಕೆಯಿಂದ ಪರಿಸರದ ಮೇಲೆ ಪರಿಣಾಮ ಉಂಟಾಗುತ್ತಿದ್ದರೆ,  ನಂತರ ಈ ನ್ಯಾಯಮಂಡಳಿಯು ಮಧ್ಯಪ್ರವೇಶಿಸುವ ಅಧಿಕಾರವನ್ನು ಪಡೆಯುತ್ತದೆ ಎಂದು ನ್ಯಾಯಪೀಠ ಹೇಳಿತು.

ಅನುಮತಿ ಪಡೆಯದೆ ನಿರ್ಮಾಣ ಚಟುವಟಿಕೆಯನ್ನು ಕೈಗೊಳ್ಳಲಾಗಿದ್ದರೆ, ಯಾವುದೇ ನಿರ್ಮಾಣವನ್ನು ಮಾಡಿದ್ದರೆ ಮತ್ತು ಪರಿಸರಕ್ಕೆ ಯಾವುದೇ ಹಾನಿ ಸಂಭವಿಸಿದ್ದರೆ ಅದನ್ನು ಪರಿಶೀಲಿಸುವಂತೆ ಸಮಿತಿಗೆ ನ್ಯಾಯಪೀಠ ನಿರ್ದೇಶಿಸಿದೆ. ಸಮಿತಿಗೆ ಸೂಕ್ತ ಲಾಜಿಸ್ಟಿಕ್ ಬೆಂಬಲ ನೀಡುವುದು ಕರ್ನಾಟಕ ಅರಣ್ಯ ಇಲಾಖೆಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಯ ಜವಾಬ್ದಾರಿಯಾಗಿದೆ ಎಂದು ಪೀಠ ಹೇಳಿದೆ.

ಕೇಂದ್ರ ಪರಿಸರ ಸಚಿವಾಲಯ,  ಜಲ ಸಂಪನ್ಮೂಲ ಇಲಾಖೆ. ಕೇಂದ್ರ ನೀರು ಆಯೋಗ, ಕರ್ನಾಟಕ, ತಮಿಳುನಾಡು ಮತ್ತಿತರ ಮುಖ್ಯ ಕಾರ್ಯದರ್ಶಿಗಳಿಗೆ ನ್ಯಾಯಪೀಠ ನೋಟಿಸ್ ಕಳುಹಿಸಿದ್ದು, ಇದೇ ಮಾಹಿತಿಯನ್ನು ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com