ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹಾಗೂ ಅವರ ಪತಿ ರಾಜ್ ಕುಂದ್ರಾ ವಿರುದ್ಧ ಎಫ್ಐಆರ್ ದಾಖಲಾಗಿದೆ. ನಿತಿನ್ ಬಾರೈ ಎಂಬ ವ್ಯಕ್ತಿಯಿಂದ ಈ ದೂರು ದಾಖಲಾಗಿದ್ದು, ಶಿಲ್ಪಾ ಹಾಗೂ ರಾಜ್ ಕುಂದ್ರಾ ಸೇರಿ 1.51 ಕೋಟಿ ರೂಪಾಯಿ ವಂಚಿಸಿದ್ದಾರೆ ಅಂತಾ ದೂರು ನೀಡಿದ್ದಾರೆ.
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ರಾಜ್ ಕುಂದ್ರಾ ಅವರ ಸಂಕಷ್ಟಗಳು ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಪೋರ್ನ್ ಪ್ರಕರಣದಲ್ಲಿ ಸಿಕ್ಕಿಬಿದ್ದ ರಾಜ್ ಕುಂದ್ರಾ ಇದೀಗ ವಂಚನೆ ಪ್ರಕರಣದಲ್ಲಿ ತಗಲಾಕ್ಕೊಂಡಿದ್ದಾರೆ. ಮುಂಬೈನ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಈ ವಂಚನೆ ಪ್ರಕರಣ ದಾಖಲಾಗಿದ್ದು, 1.51 ಕೋಟಿ ರೂಪಾಯಿ ಮೋಸ ಮಾಡಲಾಗಿದೆ ಅಂತಾ ಶಿಲ್ಪಾ ಹಾಗೂ ರಾಜ್ ವಿರುದ್ಧ ಆರೋಪ ಮಾಡಲಾಗಿದೆ. 2014-2015ರಲ್ಲಿ ಫಿಟ್‌ನೆಸ್ ಕಂಪನಿಯ ಮೂಲಕ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ತನಗೆ 1.51 ಕೋಟಿ ವಂಚಿಸಿದ್ದಾರೆ ಎಂದು ನಿತಿನ್ ಬಾರೈ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ನಿತಿನ್ ಬಾರೈ ಅವರ ದೂರಿನ ಮೇರೆಗೆ ಮುಂಬೈನ ಪೊಲೀಸರು ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ವಿರುದ್ಧ ಐಪಿಸಿ ಸೆಕ್ಷನ್ 406, 409, 420, 506, 34 ಮತ್ತು 120 (ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ವಿಚಾರಣೆಗೆ ಗುರಿಪಡಿಸುವ ಸಾಧ್ಯತೆ ಇದೆ.
Advertisement