ಬಿಟ್ ಕಾಯಿನ್ ಕಾನೂನುಬದ್ಧಗೊಳಿಸುವ ಯಾವುದೇ ಚಿಂತನೆಗಳೂ ಇಲ್ಲ: ಸಂಸತ್​ನಲ್ಲಿ ಕೇಂದ್ರ ಸರ್ಕಾರ ಸ್ಪಷ್ಟನೆ

ಬಿಟ್ ಕಾಯಿನ್ ಕುರಿತು ಯಾವ ಮಾಹಿತಿಯನ್ನೂ ಸಂಗ್ರಹಿಸುವುದಿಲ್ಲ, ಬಿಟ್ ಕಾಯಿನ್'ನ್ನು ಕಾನೂನುಬದ್ಧಗೊಳಿಸುವ ಯಾವುದೇ ಪ್ರಸ್ತಾಪವೂ ಇಲ್ಲ ಎಂದು ಸಂಸತ್ತಿನಲ್ಲಿ ಕೇಂದ್ರ ಸರ್ಕಾರ ಸೋಮವಾರ ಸ್ಪಷ್ಟಪಡಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಬಿಟ್ ಕಾಯಿನ್ ಕುರಿತು ಯಾವ ಮಾಹಿತಿಯನ್ನೂ ಸಂಗ್ರಹಿಸುವುದಿಲ್ಲ, ಬಿಟ್ ಕಾಯಿನ್'ನ್ನು ಕಾನೂನುಬದ್ಧಗೊಳಿಸುವ ಯಾವುದೇ ಪ್ರಸ್ತಾಪವೂ ಇಲ್ಲ ಎಂದು ಸಂಸತ್ತಿನಲ್ಲಿ ಕೇಂದ್ರ ಸರ್ಕಾರ ಸೋಮವಾರ ಸ್ಪಷ್ಟಪಡಿಸಿದೆ.

ಸಂಸತ್ತಿನಲ್ಲಿ ರಾಜ್ಯ ಸಂಸದರಾದ ಸುಮಲತಾ ಅಂಬರೀಷ್ ಹಾಗೂ ಡಿ.ಕೆ. ಸುರೇಶ್ ಇಬ್ಬರು ಕ್ರಿಪ್ಟೋ ಕರೆನ್ಸಿ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪ್ರಶ್ನೆಗಳನ್ನು ಕೇಳಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ವಿತ್ತ ಸಚಿವಾಲಯ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಭಾರತದಲ್ಲಿ ಬಿಟ್‌ಕಾಯಿನ್ ಅನ್ನು ಕಾನೂನುಬದ್ಧ ನೋಟು ಆಗಿ ಸ್ವೀಕರಿಸುವ ಯಾವುದೇ ಯೋಜನೆಯನ್ನು ಕೇಂದ್ರ ಸರ್ಕಾರ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದರು.

ಬಳಿಕ ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಬಿಟ್‌ಕಾಯಿನ್ ವಹಿವಾಟು ಸೈಲೆಂಟಾಗಿ ಹೆಚ್ಚಾಗುತ್ತಿದೆ ಎಂದು ಸರ್ಕಾರಕ್ಕೆ ತಿಳಿದಿದೆಯೇ ಎಂಬುದಕ್ಕೆ ಉತ್ತರಿಸಿದ ಅವರು, ಭಾರತದಲ್ಲಿ ಬಿಟ್‌ಕಾಯಿನ್ ವಹಿವಾಟಿನ ಬಗ್ಗೆ ಕೇಂದ್ರವು ಯಾವುದೇ ಡೇಟಾವನ್ನು ಸಂಗ್ರಹಿಸುವುದಿಲ್ಲ ಎಂದು ತಿಳಿಸಿದರು.

ಇದೇ ವೇಳೆ ರಿಸರ್ವ್ ಬ್ಯಾಂಕ್​ನಿಂದ 2021ರ ಅಕ್ಟೋಬರ್​ನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಾಯ್ದೆ, 1934 ಅನ್ನು ತಿದ್ದುಪಡಿ ಮಾಡಲು ಪ್ರಸ್ತಾವ ಬಂದಿದೆ. ಬ್ಯಾಂಕ್ ನೋಟು ವ್ಯಾಖ್ಯಾನ ಬದಲಾಯಿಸಿ, ಡಿಜಿಟಲ್ ರೂಪದ ಕರೆನ್ಸಿ ಅನ್ನು ಸೇರ್ಪಡೆ ಮಾಡಲು ಪ್ರಸ್ತಾಪ ಬಂದಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರವು ಕ್ರಿಪ್ಟೋಕರೆನ್ಸಿ ಟ್ರೇಡಿಂಗ್ ಬಗ್ಗೆ ಯಾವುದೇ ಮಾಹಿತಿ ಸಂಗ್ರಹಿಸುವುದಿಲ್ಲ. ಕ್ರಿಪ್ಟೋಕರೆನ್ಸಿ ಮೇಲೆ ಭಾರತದಲ್ಲಿ ಸದ್ಯ ಯಾವುದೇ ನಿಯಂತ್ರಣ ಇಲ್ಲ ಎಂದು ಸಚಿವಾಲಯ ಸಂಸತ್ತಿಗೆ ಲಿಖಿತ ಉತ್ತರ ನೀಡಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com