ಬಿಟ್ ಕಾಯಿನ್‌‌ ಪ್ರಕರಣ: ತನಿಖಾಧಿಕಾರಿಗಳ ಎದುರು ಹಾಜರಾಗದ ಆರೋಪಿ ಶ್ರೀಕಿ: ನಿಗೂಢವಾದ ಶ್ರೀಕಿ ನಡೆ

ಷರತ್ತು ಬದ್ಧ ಜಾಮೀನಿನಲ್ಲಿ ಪ್ರತಿ ಶನಿವಾರ ತನಿಖಾಧಿಕಾರಿ ಮುಂದೆ ಹಾಜರಾಗಲು ಸೂಚನೆ ನೀಡಲಾಗಿತ್ತಾದರೂ ಶ್ರೀಕಿ ಕಳೆದ ಶನಿವಾರ ತನಿಖಾಧಿಕಾರಿಗಳ ಮುಂದೆ ಹಾಜರಾಗಿಲ್ಲ.
ಹ್ಯಾಕರ್ ಶ್ರೀಕಿ
ಹ್ಯಾಕರ್ ಶ್ರೀಕಿ

ಬೆಂಗಳೂರು: ಜೈಲಿನಿಂದ ಷರತ್ತುಬದ್ಧ ಜಾಮೀನಿನ ಮೇಲೆ ಹೊರಬಂದಿರುವ ಬಿಟ್ ಕಾಯಿನ್‌‌ ಪ್ರಕರಣದ ಆರೋಪಿ ಶ್ರೀಕಿ ನಾಪತ್ತೆಯಾಗಿದ್ದಾನೆ ಎಂದು ತಿಳಿದುಬಂದಿದ್ದು, ಆತನ‌ ನಡೆ ನಿಗೂಢವಾಗಿದೆ ಎನ್ನಲಾಗುತ್ತಿದೆ.

ಷರತ್ತು ಬದ್ಧ ಜಾಮೀನಿನಲ್ಲಿ ಪ್ರತಿ ಶನಿವಾರ ತನಿಖಾಧಿಕಾರಿ ಮುಂದೆ ಹಾಜರಾಗಲು ಸೂಚನೆ ನೀಡಲಾಗಿತ್ತಾದರೂ ಶ್ರೀಕಿ ಕಳೆದ ಶನಿವಾರ ತನಿಖಾಧಿಕಾರಿಗಳ ಮುಂದೆ ಹಾಜರಾಗಿಲ್ಲ. ಅಲ್ಲದೇ ಠಾಣೆಗೆ ಹಾಜರಾಗದೇ ಇರುವುದಕ್ಕೆ ಶ್ರೀಕೃಷ್ಣ (ಶ್ರೀಕಿ) ಕಾರಣವನ್ನೂ ನೀಡಿಲ್ಲ. ಅಲ್ಲದೇ ಆತ ಮೊಬೈಲ್ ಪೋನನ್ನು ಸಹ ಬಳಸುತ್ತಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ. ಹೀಗಾಗಿ ಆತನ ನಡೆ ನಿಗೂಢವಾಗಿದೆ. 

ಇನ್ನು ಕೆಲ ದಿನ ಕಾದು ಕೋರ್ಟ್ ಮುಂದೆ ವರದಿ ನೀಡಲು ಪೊಲೀಸರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಹೊಟೇಲ್ ಗಲಾಟೆ ಸಂಬಂಧ ಪೊಲೀಸರು ಶ್ರೀಕಿಯನ್ನು ಬಂಧಿಸಿದ್ದರು. ನಿರೀಕ್ಷಣಾ ಜಾಮೀನು ಪಡೆದು ಹೊರಬಂದಿರುವ ಶ್ರೀಕಿ ಖಾಕಿ ಕಣ್ಣಿಗೂ ಕಾಣಿಸದೇ ಮರೆಯಾಗಿದ್ದ, ಆತನನ್ನು ಪೊಲೀಸರು ಮತ್ತೆ ಬೆನ್ನುಹತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com