ಕೋವಿಡ್ ಸೋಂಕಿತರ ಸಾವಿನ ಪ್ರಮಾಣ ತಗ್ಗಿಸುವಲ್ಲಿ ರಾಮಬಾಣವಾಗುತ್ತಿದೆ ಈ ಹೊಸ ಔಷಧಿ..!

ಕೊರೋನಾ ಸಾಂಕ್ರಾಮಿಕ 3ನೇ ಅಲೆಯ ಭೀತಿಯ ನಡುವಲ್ಲೇ ಭಾರತದಲ್ಲಿ ಸೋಂಕು ಪ್ರಮಾಣ ಕ್ರಮೇಣ ಇಳಿಕೆಯಾಗುತ್ತಿದೆ. ಅಂತೆಯೇ ಸಾವಿನ ಪ್ರಮಾಣ ಕೂಡ ತಗ್ಗುತ್ತಿದ್ದು, ಇದರ ನಡುವೆಯೇ ಕೊರೋನಾ ಔಷಧಿ ಕುರಿತ ಆಶಾದಾಯಕ ಸುದ್ದಿಯೊಂದು ಹೊರ ಬಿದ್ದಿದೆ.
ಮೊಲ್ನುಪಿರವಿರ್
ಮೊಲ್ನುಪಿರವಿರ್
Updated on

ನವದೆಹಲಿ: ಕೊರೋನಾ ಸಾಂಕ್ರಾಮಿಕ 3ನೇ ಅಲೆಯ ಭೀತಿಯ ನಡುವಲ್ಲೇ ಭಾರತದಲ್ಲಿ ಸೋಂಕು ಪ್ರಮಾಣ ಕ್ರಮೇಣ ಇಳಿಕೆಯಾಗುತ್ತಿದೆ. ಅಂತೆಯೇ ಸಾವಿನ ಪ್ರಮಾಣ ಕೂಡ ತಗ್ಗುತ್ತಿದ್ದು, ಇದರ ನಡುವೆಯೇ ಕೊರೋನಾ ಔಷಧಿ ಕುರಿತ ಆಶಾದಾಯಕ ಸುದ್ದಿಯೊಂದು ಹೊರ ಬಿದ್ದಿದೆ.

ಹೌದು.. ಪ್ರಾಯೋಗಿಕ ಕೋವಿಡ್-19 ಮಾತ್ರೆಯು ಕೊರೊನಾ ವೈರಸ್ ಸೋಂಕಿಗೆ ಒಳಗಾದ ಜನರಲ್ಲಿ ಆಸ್ಪತ್ರೆಗೆ ದಾಖಲಾಗುವ ಮತ್ತು ಸಾವಿನ ಸಾಧ್ಯತೆಯನ್ನು ಅರ್ಧದಷ್ಟು ಕಡಿಮೆ ಮಾಡಿದೆ. ಈ ಮಾತ್ರೆಯನ್ನು ಕೋವಿಡ್ ರೋಗಿಗಳ ಬಳಕೆಗೆ ಅಧಿಕೃತಗೊಳಿಸಲು ಅಮೆರಿಕ ಮತ್ತು ಪ್ರಪಂಚದಾದ್ಯಂತದ ಇರುವ ಆರೋಗ್ಯ ಅಧಿಕಾರಿಗಳನ್ನು ಸಂಪರ್ಕಿಸುವುದಾಗಿ ಹೇಳಿದೆ ಎಂದು ಔಷಧ ತಯಾರಿಕಾ ಕಂಪನಿ ಮರ್ಕ್ ಮತ್ತು ಕೋ ಹೇಳಿದೆ.

ಒಂದೊಮ್ಮೆ ಈ ಮಾತ್ರೆಗೆ ಅನುಮೋದನೆ ಸಿಕ್ಕರೆ, ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಪ್ರಯತ್ನದಲ್ಲಿ ಪ್ರಮುಖ ಮುನ್ನಡೆಯಾಗಲಿದೆ. ಈ ಮೊಲ್ನುಪಿರವಿರ್  ಕೋವಿಡ್-19ಗೆ ಚಿಕಿತ್ಸೆ ನೀಡಬಹುದಾದದ ಮೊದಲ ಮಾತ್ರೆಯಾಗಲಿದೆ. ಅಮೆರಿಕದಲ್ಲಿ ಈಗ ಅಧಿಕೃತವಾಗಿರುವ ಎಲ್ಲಾ ಕೋವಿಡ್ -19 ಚಿಕಿತ್ಸೆಗೆ ಬಳಸುವ ಔಷಧಕ್ಕೆ ಐವಿ ಅಥವಾ ಇಂಜೆಕ್ಷನ್ ಅಗತ್ಯವಿದೆ. ಮೊಲ್ನುಪಿರವಿರ್ ಎಂದು ಕರೆಯಲ್ಪಡುವ ಈ ಮಾತ್ರೆಯನ್ನು ಪಡೆದ ರೋಗಿಗಳಲ್ಲಿ ಕೋವಿಡ್ -19 ರೋಗಲಕ್ಷಣಗಳು ಐದು ದಿನಗಳೊಳಗೆ ಕಡಿಮೆ ಆಗಿದ್ದು, ಅರ್ಧದಷ್ಟು ಆಸ್ಪತ್ರೆಗೆ ದಾಖಲಾಗುವ ಮತ್ತು ಸಾವಿನ ಪ್ರಮಾಣ ಕಡಿಮೆಯಾಗಿದೆ ಎಂದು ಮರ್ಕ್ ಮತ್ತು ಅದರ ಪಾಲುದಾರ ರಿಡ್ಜ್‌ಬ್ಯಾಕ್ ಬಯೋಥೆರಪೆಟಿಕ್ಸ್ ಸಂಸ್ಥೆ ಹೇಳಿದೆ.

ಮೆರ್ಕ್ ಮತ್ತು ರಿಡ್ಜ್‌ಬ್ಯಾಕ್ ಬಯೋಥೆರಪ್ಯೂಟಿಕ್ ಅಕ್ಟೋಬರ್ 2 ರಂದು ಮಾಡಿದ ಪ್ರಕಟಣೆಯ ಪ್ರಕಾರ ಸೌಮ್ಯ ಮತ್ತು ಮಧ್ಯಮ ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡುವ ಭರವಸೆಯಿದೆ. ಪ್ರಮುಖವಾಗಿ ಸ್ಥೂಲಕಾಯ, ಮಧುಮೇಹ ಅಥವಾ ಹೃದ್ರೋಗದಂತಹ ಆರೋಗ್ಯ ಸಮಸ್ಯೆಗಳಿಂದಾಗಿ ಕೋವಿಡ್‌ನಿಂದ ಹೆಚ್ಚು ಅಪಾಯವೆಂದು ಪರಿಗಣಿಸಲ್ಪಟ್ಟ ಮಧ್ಯಮ ಪ್ರಮಾಣದ ಕೋವಿಡ್ -19 ಲಕ್ಷಣಗಳನ್ನು ಹೊಂದಿರುವ 775 ವಯಸ್ಕರ ಮೇಲೆ ಈ ಅಧ್ಯಯನ ನಡೆಸಲಾಗಿದೆ. ಮೆರ್ಕ್ ಸಂಸ್ಥೆಯ ವರದಿಯನ್ನು ಸದ್ಯ ಯಾವುದೇ ಉನ್ನತ ವೈದ್ಯಕೀಯ ತಂಡ ಪರಿಶೀಲನೆ ನಡೆಸಿಲ್ಲ. ಭವಿಷ್ಯದ ವೈದ್ಯಕೀಯ ಪರಿಶೀಲನೆಯಲ್ಲಿ ಅದನ್ನು ಪ್ರಸ್ತುತಪಡಿಸಲು ಯೋಜಿಸಲಾಗಿದೆ ಎಂದು ಮರ್ಕ್ ಹೇಳಿದೆ.

ವೈದ್ಯರು ಇದು ಕೋವಿಡ್ ರೋಗಿಗಳಿಗೆ ಆರಂಭಿಕ ಹಂತದಲ್ಲಿ ಚಿಕಿತ್ಸೆ ನೀಡಲು ಉಪಯುಕ್ತ ಎಂದು ಹೇಳಲಾಗಿದ್ದು, ಏಕೆಂದರೆ ಆಸ್ಪತ್ರೆಯಲ್ಲಿನ ರೋಗಿಗಳ ಸಾವಿನ ಶೇ.50 ಇಳಿಕೆಯಾಗಿದೆ ಎಂದು ಹೇಳಲಾಗಿದೆ. ಪ್ರಯೋಗದ ಫಲಿತಾಂಶಗಳು ಪ್ರಬಲವಾಗಿರುವುದರಿಂದ ಸದ್ಯ ಮಾತ್ರೆಯ ಬಳಕೆ ನಿಲ್ಲಿಸುವಂತೆ ವೈದ್ಯಕೀಯ ತಜ್ಞರ ಸ್ವತಂತ್ರ ಗುಂಪು ಶಿಫಾರಸು ಮಾಡಿದೆ. ಮಾತ್ರೆಗೆ ಅನುಮೋದನೆ ನೀಡುವ ಕುರಿತಂತೆ ಅಮೆರಿಕದ ಆಹಾರ ಮತ್ತು ಔಷಧ ಆಡಳಿತದೊಂದಿಗೆ ಚರ್ಚಿಸುತ್ತಿದ್ದೇವೆ ಮತ್ತು ಮುಂದಿನ ದಿನಗಳಲ್ಲಿ ಡೇಟಾವನ್ನು ಪರಿಶೀಲನೆಗಾಗಿ ಸಲ್ಲಿಸಲು ಯೋಜಿಸಿದ್ದೇವೆ ಎಂದು ಕಂಪನಿಯ ಕಾರ್ಯನಿರ್ವಾಹಕರು ತಿಳಿಸಿದ್ದಾರೆ.

ಔಷಧಿ ಪರಿಣಾಮಕ್ಕಾಗಿ ಇನ್ನೂ ಕಾಯಬೇಕು
ಕ್ಲಿನಿಕಲ್ ಪ್ರಯೋಗಗಳ ಪ್ರಯೋಜನವನ್ನು ಪರಿಶೀಲಿಸಲು ಇನ್ನಷ್ಟು ದಿನ ಕಾಯಬೇಕು ಎಂದು ವೈಜ್ಞಾನಿಕ ಮಂಡಳಿಯ ಮುಖ್ಯಸ್ಥ ಮತ್ತು ಮಣಿಪಾಲ್ ಆಸ್ಪತ್ರೆಗಳ ಜೆರಿಯಾಟ್ರಿಕ್ ಮೆಡಿಸಿನ್ ಅಧ್ಯಕ್ಷರಾದ ಡಾ.ಅನೂಪ್ ಅಮರನಾಥ್ ಹೇಳಿದ್ದು, ಅಲ್ಲದೆ ಔಷಧ ನಿಯಂತ್ರಕ ಸಂಸ್ಥೆಯ ಅನುಮೋದನೆಗಾಗಿ ಕಾಯಬೇಕು ಎಂದು ಹೇಳಿದರು.

ಭಾರತದಲ್ಲಿ, ಐದು ಕಂಪನಿಗಳು ಈ ಔಷಧಕ್ಕಾಗಿ ಪ್ರಯೋಗಗಳನ್ನು ನಡೆಸುತ್ತಿದ್ದು, ಈ ಸಂಸ್ಥೆಗಳ ಪಟ್ಟಿಯಲ್ಲಿ ಸಿಪ್ಲಾ, ಡಾ ರೆಡ್ಡಿ, ಎಮ್‌ಕ್ಯೂರ್, ಸನ್ ಫಾರ್ಮಾ ಮತ್ತು ಟೊರೆಂಟ್ ಸಂಸ್ಥೆಗಳು ಇವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com