ಕೋವಿಡ್-19 ಕುರಿತು ಅತಿ ಹೆಚ್ಚು ತಪ್ಪು ಮಾಹಿತಿ ಹರಡಿದ ರಾಷ್ಟ್ರ ಭಾರತ: ಅಧ್ಯಯನದಿಂದ ಬಹಿರಂಗ

ನಮ್ಮಲ್ಲಿ ಅತಿ ಹೆಚ್ಚು ಮಂದಿ ಇಂಟರ್ನೆಟ್ ಬಳಕೆದಾರರಿದ್ದು, ಅವರಲ್ಲಿ ಇಂಟರ್ನೆಟ್ ಕುರಿತ ಸಾಕ್ಷರತೆ ಕಡಿಮೆ ಪ್ರಮಾಣದಲ್ಲಿರುವುದು ಕೂಡಾ ಕೊರೊನಾ ಸಂಬಂಧಿ ತಪ್ಪು ಮಾಹಿತಿಗಳು ಹರಿದಾಡಲು ಪ್ರಮುಖ ಕಾರಣ
ಲಸಿಕೆ ಪಡೆಯಲು ಮುಂಬೈನ ಕೇಂದ್ರದಲ್ಲಿ ಕಾಯುತ್ತಿರುವ ಮಂದಿ
ಲಸಿಕೆ ಪಡೆಯಲು ಮುಂಬೈನ ಕೇಂದ್ರದಲ್ಲಿ ಕಾಯುತ್ತಿರುವ ಮಂದಿ

ನವದೆಹಲಿ: ಜಗತ್ತಿನಲ್ಲೇ ಅತ್ಯಧಿಕ ಪ್ರಮಾಣದ ಕೊರೊನಾ ಸಂಬಂಧಿ ತಪ್ಪು ಮಾಹಿತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಉತ್ಪಾದಿಸಿದ ರಾಷ್ಟ್ರ ಎನ್ನುವ ಕುಖ್ಯಾತಿಗೆ ಭಾರತ ಒಳಗಾಗಿದೆ. ನೂತನ ಅಧ್ಯಯನದಿಂದ ಈ ಸಂಗತಿ ಬಹಿರಂಗವಾಗಿದೆ. 

ಅತಿ ಹೆಚ್ಚು ಮಂದಿ ಇಂಟರ್ನೆಟ್ ಬಳಕೆದಾರರಿದ್ದು, ಇಂಟರ್ನೆಟ್ ಬಳಕೆದಾರರಲ್ಲಿ ಇಂಟರ್ನೆಟ್ ಸಾಕ್ಷರತೆ ಕಡಿಮೆ ಪ್ರಮಾಣದಲ್ಲಿರುವುದು ಕೂಡಾ ಕೊರೊನಾ ಸಂಬಂಧಿ ತಪ್ಪು ಮಾಹಿತಿಗಳು ಹರಿದಾಡಲು ಪ್ರಮುಖ ಕಾರಣ ಎಂದು ಸಂಶೋಧಕರು ಗುರುತಿಸಿದ್ದಾರೆ.

138 ದೇಶಗಳಲ್ಲಿ ಈ ಬಗ್ಗೆ ಸಂಶೋಧನೆ ನಡೆಸಲಾಗಿತ್ತು. ಜಗತ್ತಿನಲ್ಲಿಯೇ ಹರಿದಾಡಿದ ಕೊರೊನಾ ತಪ್ಪು ಮಾಹಿತಿ ಒಟ್ಟು ಪ್ರಮಾಣದಲ್ಲಿ ಭಾರತದ ಪಾಲು ಶೇ.18.07. ನಂತರದ ಮೂರು ಸ್ಥಾನಗಳಲ್ಲಿ ಅಮೆರಿಕ(ಶೇ.9.74), ಬ್ರೆಜಿಲ್(8.57) ಮತ್ತು ಸ್ಪೇನ್(8.03) ದೇಶಗಳಿವೆ.

ತಮಗೆ ಬಂದ ಎಲ್ಲಾ ಫಾರ್ವರ್ಡ್ ಸಂದೇಶಗಳ ಅಸಲೀಯತ್ತನ್ನು ಪರೀಕ್ಷಿಸದೆ ತಮ್ಮ ಕಾಂಟ್ಯಾಕ್ಟ್ ಲಿಸ್ಟಿನಲ್ಲಿದ್ದವರಿಗೆ ಫಾರ್ವರ್ಡ್ ಮಾಡುವ ಪದ್ಧತಿ ನಮ್ಮಲ್ಲಿ ಅನೂಚಾನವಾಗಿ ನಡೆಯುತ್ತಲೇ ಬಂದಿದೆ. ಸುಳ್ಳು ಸುದ್ದಿಗಳು ಹಬ್ಬಲು ಇದೂ ಕಾರಣ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com