ಕೊರೊನಾ ಮಣಿಸಿದ 116 ವರ್ಷದ ಮುದುಕಿ: ಮೂರು ವಾರ ಐಸಿಯುನಲ್ಲಿ ಹೋರಾಟ!

ಕೊರೊನಾ ಸೋಂಕಿಗೆ ತುತ್ತಾಗಿ ಭಯದಿಂದ ಆತ್ಮಹತ್ಯೆಗೆ ಶರಣಾಗುತ್ತಿರುವ ಮಂದಿಗೆ ಈ ವೃದ್ಧ ಮಹಿಳೆಯ ಜೀವನಸ್ಫೂರ್ತಿ ಪ್ರೇರಣೆಯಾಗಬಲ್ಲುದು.
ಆಸ್ಪತ್ರೆ ವಾರ್ಡಿನಲ್ಲಿ ಆಯ್ಸೆ ಕರಾಟೆ
ಆಸ್ಪತ್ರೆ ವಾರ್ಡಿನಲ್ಲಿ ಆಯ್ಸೆ ಕರಾಟೆ

ಅಂಕಾರ: ಅಚ್ಚರಿಯ ಘಟನೆಯೊಂದರಲ್ಲಿ 116 ವರ್ಷದ ವೃದ್ಧ ಮಹಿಳೆಯೋರ್ವಳು ಕೊರೊನಾದಿಂದ ಗುಣಮುಖರಾಗಿರುವ ಸ್ಪೂರ್ತಿದಾಯಕ ಘಟನೆ ಟರ್ಕಿ ದೇಶದಲ್ಲಿ ನಡೆದಿದೆ. ಆಕೆಯನ್ನು ಸದ್ಯ ಐಸಿಯುನಿಂದ  ನಾರ್ಮಲ್ ವಾರ್ಡಿಗೆ ಸ್ಥಳಾತರಿಸಲಾಗಿದ್ದು, ಆಕೆಯ ಜೊತೆ ಮಗ ಇದ್ದಾನೆ. 

ಆಯ್ಸೆ ಕರಾಟೆ ಎಂಬ ಹೆಸರಿನ ವೃದ್ಧ ಮಹಿಳೆ ನಿಜಕ್ಕೂ ಕೊರೊನಾ ಜೊತೆ ಕರಾಟೆ ಮಾಡಿ ಜೀವ ಉಳಿಸಿಕೊಂಡಿರುವ ಕಥೆ ಹಲವರಿಗೆ ಸ್ಫೂರ್ತಿ. ಕೊರೊನಾ ಸೋಂಕಿಗೆ ತುತ್ತಾಗಿ ಭಯದಿಂದ ಆತ್ಮಹತ್ಯೆಗೆ ಶರಣಾಗುತ್ತಿರುವ ಮಂದಿಗೆ ಈ ವೃದ್ಧ ಮಹಿಳೆಯ ಜೀವನ ಪ್ರೇರಣೆಯಾಗಬಲ್ಲುದು.

ಈ ಹಿಂದೆ 117 ವರ್ಷದ ಫ್ರೆಂಚ್ ಕ್ರೈಸ್ತ ಸನ್ಯಾಸಿನಿ ಆಂಡ್ರೆ ಎಂಬುವವರು ಕೊರೊನಾದಿಂದ ಗುಣಮುಖರಾಗಿದ್ದು ದೊಡ್ಡ ಸುದ್ದಿಯಾಗಿತ್ತು. ಕೊರೊನಾದಿಂದ ಗುಣಮುಖರಾದ ವಿಶ್ವದ ಅತಿ ಹಿರಿಯ ಮಹಿಳೆ ಎನ್ನುವ ಕೀರ್ತಿಗೆ ಅವರು ಪಾತ್ರರಾಗಿದ್ದರು.

ಇದೀಗ ಕೊರೊನಾದಿಂದ ಗುಣಮುಖರಾದ ವಿಶ್ವದ 2ನೇ ಹಿರಿಯ ಮಹಿಳೆ ಎನ್ನುವ ಕೀರ್ತಿಗೆ ಆಯ್ಸೆ ಕರಾಟೆ ಪಾತ್ರರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com