![ಪ್ರಿಯಾಂಕಾ ಗಾಂಧಿ, ನವಜೋತ್ ಸಿಂಗ್ ಸಿಧು](http://media.assettype.com/kannadaprabha%2Fimport%2F2021%2F10%2F5%2Foriginal%2FPriyanka_Gandhi_and_Sidhu.jpg?w=480&auto=format%2Ccompress&fit=max)
ಚಂಡೀಘಡ: ಬುಧವಾರದೊಳಗೆ ಪ್ರಿಯಾಂಕಾ ಗಾಂಧಿ ಅವರನ್ನು ಬಿಡುಗಡೆ ಮಾಡದಿದ್ದರೆ ಮತ್ತು ರೈತರ ಹತ್ಯೆಗಾಗಿ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರನನ್ನು ಬಂಧಿಸದಿದ್ದರೆ ಉತ್ತರ ಪ್ರದೇಶದ ಲಖೀಂಪುರ್ ಖೇರ್ ಕಡೆಗೆ ಪಂಜಾಬ್ ಕಾಂಗ್ರೆಸ್ ಬರಲಿದೆ ಎಂದು ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಎಚ್ಚರಿಕೆ ನೀಡಿದ್ದಾರೆ.
ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಭೇಟಿಯನ್ನು ವಿರೋಧಿಸಿ ಭಾನುವಾರ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದರಿಂದ ಮೃತಪಟ್ಟ ಕುಟುಂಬ ಸದಸ್ಯರನ್ನು ಭೇಟಿಯಾಗಲು ಲಖೀಂಪುರ್- ಖೇರ್ ಕಡೆಗೆ ತೆರಳುತ್ತಿದ್ದ ಪ್ರಿಯಾಂಕಾ ಗಾಂಧಿ ಅವರನ್ನು ಸೋಮವಾರ ಸೀತಾಪುರ ಬಳಿ ಬಂಧಿಸಲಾಗಿತ್ತು.
ಪ್ರಿಯಾಂಕಾ ಗಾಂಧಿ ಬಂಧನವನ್ನು ಕಾಂಗ್ರೆಸ್ ಪಕ್ಷ ಪ್ರಶ್ನಿಸಿದ್ದು, ಶಾಂತಿ ಉಲ್ಲಂಘನೆ ಕಾರಣದಿಂದ ಪ್ರಿಯಾಂಕಾ ಗಾಂಧಿ ಮತ್ತಿತರ 10 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ.
ನಾಳೆಯೊಳಗೆ ರೈತರ ಬರ್ಬರ ಹತ್ಯೆಗಾಗಿ ಕೇಂದ್ರ ಸಚಿವರ ಪುತ್ರನನ್ನು ಬಂಧಿಸದಿದ್ದರೆ ಮತ್ತು ತಮ್ಮ ನಾಯಕಿ ಪ್ರಿಯಾಂಕಾ ಗಾಂಧಿ ಅವರನ್ನು ಬಿಡುಗಡೆ ಮಾಡದಿದ್ದರೆ ಲಖ್ಕೀಂಪುರ್ ಖೇರ್ ಗೆ ಪಂಜಾಬ್ ಕಾಂಗ್ರೆಸ್ ಬರಲಿದೆ ಎಂದು ಸಿಧು ಟ್ವೀಟ್ ಮಾಡಿದ್ದಾರೆ.
Advertisement