ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಧ್ಯ ಪ್ರದೇಶ: ತಪ್ಪು ಪ್ರಸರಣ ಸಂಖ್ಯೆ ತೋರಿಸಿದ ಮೂರು ಪತ್ರಿಕೆಗಳ ವಿರುದ್ಧ ಎಫ್ಐಆರ್ ದಾಖಲಿಸಿದ ಸಿಬಿಐ

ಸರ್ಕಾರಿ ಜಾಹೀರಾತು ಪಡೆಯಲು ತಪ್ಪು ಪ್ರಸಾರ ಸಂಖ್ಯೆಯನ್ನು ನೀಡಿದ ಮಧ್ಯಪ್ರದೇಶದ ಮೂರು ಪತ್ರಿಕೆಗಳ ವಿರುದ್ಧ ಕೇಂದ್ರ ತನಿಖಾ ಸಂಸ್ಥೆ(ಸಿಬಿಐ) ಎಫ್‌ಐಆರ್ ದಾಖಲಿಸಿದೆ.

ಭೋಪಾಲ್: ಸರ್ಕಾರಿ ಜಾಹೀರಾತು ಪಡೆಯಲು ತಪ್ಪು ಪ್ರಸಾರ ಸಂಖ್ಯೆಯನ್ನು ನೀಡಿದ ಮಧ್ಯಪ್ರದೇಶದ ಮೂರು ಪತ್ರಿಕೆಗಳ ವಿರುದ್ಧ ಕೇಂದ್ರ ತನಿಖಾ ಸಂಸ್ಥೆ (ಸಿಬಿಐ) ಎಫ್‌ಐಆರ್ ದಾಖಲಿಸಿದೆ.

ಜಬಲ್ಪುರದ ಒಂದು ಪತ್ರಿಕೆ ಮತ್ತು ಸಿಯೋನಿಯ ಎರಡು ಪತ್ರಿಕೆಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಸಿಬಿಐ ತಿಳಿಸಿದೆ.

ಈ ಮೂರು ಪತ್ರಿಕೆಗಳ ಪ್ರಕಾಶಕರು/ಮಾಲೀಕರ ವಿರುದ್ಧ ಅಕ್ಟೋಬರ್ 4 ರಂದು ಜಬಲ್ಪುರದಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಸಿಬಿಐ ತನ್ನ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದ ಎಫ್‌ಐಆರ್ ಪ್ರತಿಯಲ್ಲಿ ತಿಳಿಸಿದೆ.

ಈ ವರ್ಷದ ಆಗಸ್ಟ್ 13 ರಂದು ಸಿಬಿಐನ ಜಬಲ್ಪುರ್ ಕಚೇರಿಯಲ್ಲಿ ಹಿಮಾಂಶು ಕೌಶಲ್ ಎಂಬುವವರು ಸಲ್ಲಿಸಿದ ದೂರಿನ ಆಧಾರದ ಮೇಲೆ ಕ್ರಿಮಿನಲ್ ಪಿತೂರಿ, ನಕಲಿ ಮತ್ತು ವಂಚನೆ ಆರೋಪದ ಅಡಿಯಲ್ಲಿ ಮೂರು ಪತ್ರಿಕೆಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.

ತಮ್ಮ ದೂರಿನಲ್ಲಿ, ತಮ್ಮ ಪ್ರಸಾರಕ್ಕೆ ಸಂಬಂಧಿಸಿದಂತೆ ಚಾರ್ಟರ್ಡ್ ಅಕೌಂಟೆಂಟ್‌ಗಳ ನಕಲಿ ವರದಿಯ ಆಧಾರದ ಮೇಲೆ, ಈ ಪತ್ರಿಕೆಗಳು ಕೇಂದ್ರ ಸರ್ಕಾರದ ಏಜೆನ್ಸಿಯ ಮೂಲಕ ಜಾಹೀರಾತು ಮತ್ತು ದೃಶ್ಯ ಪ್ರಚಾರ ನಿರ್ದೇಶನಾಲಯದಿಂದ (ಡಿಎವಿಪಿ) ಲಕ್ಷಾಂತರ ರೂಪಾಯಿ ಮೌಲ್ಯದ ಜಾಹೀರಾತುಗಳನ್ನು ಪಡೆಯುತ್ತಿವೆ ಎಂದು ಆರೋಪಿಸಲಾಗಿದೆ.

Related Stories

No stories found.

Advertisement

X
Kannada Prabha
www.kannadaprabha.com