ಪಾರ್ಶ್ವವಾಯು ಪೀಡಿತ ಪತಿಯ ಯಾತನೆ ನೋಡಲಾಗದೆ ಆತನ ಗಂಟಲು ಸೀಳಿ ದಯಾಮರಣ ವಿಧಿಸಿದ ವೃದ್ಧ ಪತ್ನಿ

76 ವರ್ಷದ ಗೋಪಿ ಕೊಲೆಯಾದಾತ. 72 ವರ್ಷದ ಸುಮತಿ ಪತಿಯನ್ನು ಹತ್ಯೆಗೈದ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಮನೆ ಹತ್ತಿರದ ಕೊಳದ ಬಳಿ ತೆರಳಿದ್ದಳು. ತೆರಳುವಾಗ ಮಾರ್ಗ ಮಧ್ಯ ಕಾಲು ಎಡವಿ ನೆಲಕ್ಕೆ ಬಿದ್ದು ಮೂರ್ಛೆ ತಪ್ಪಿದ್ದಳು.
ಪತ್ನಿಯಿಂದಲೇ ಕೊಲೆಯಾದ ಗೋಪಿ
ಪತ್ನಿಯಿಂದಲೇ ಕೊಲೆಯಾದ ಗೋಪಿ
Updated on

ತಿರುವನಂತಪುರಂ: ಪಾರ್ಶ್ವವಾಯು ಪೀಡಿತ ವೃದ್ಧ ಪತಿಯ ಯಾತನೆಯನ್ನು ನೋಡಲಾಗದೆ ವೃದ್ಧ ಪತ್ನಿಯೇ ಆತನನ್ನು ಕೊಲೆ ಮಾಡುವ ಮೂಲಕ ಜೀವನ್ಮುಕ್ತಿ ನೀಡಿದ ಹೃದಯ ವಿದ್ರಾವಕ ಘಟನೆ ಕೇರಳದ ನೆಯ್ಯಟ್ಟಿನ್ಕರ ಎಂಬಲ್ಲಿ ನಡೆದಿದೆ.

76 ವರ್ಷದ ಗೋಪಿ ಕೊಲೆಯಾದಾತ. 72 ವರ್ಷದ ಸುಮತಿ ಪತಿಯ ಗಂಟಲು ಸೀಳಿ ಹತ್ಯೆಗೈದ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಮನೆ ಹತ್ತಿರದ ಕೊಳದ ಬಳಿ ತೆರಳಿದ್ದಳು. ತೆರಳುವಾಗ ಮಾರ್ಗ ಮಧ್ಯ ಕಾಲು ಎಡವಿ ನೆಲಕ್ಕೆ ಬಿದ್ದು ಮೂರ್ಛೆ ತಪ್ಪಿದ್ದಳು.

ಈ ಸಮಯದಲ್ಲಿ ವೃದ್ಧನ ಮೊಮ್ಮಗ ಮನೆಗೆ ಬಂಡಿದ್ದ. ಆಗ ಘಟನೆ ಬೆಳಕಿಗೆ ಬಂದು ಆತ ಸ್ಥಳೀಯರ ಸಹಾಯದಿಂದ ರಕ್ತದ ಮಡುವಿನಲ್ಲಿ ಬಿದ್ದಿದ್ದ ವೃದ್ಧನನ್ನೂ, ವೃದ್ಧೆಯನ್ನೂ ಆಸ್ಪತ್ರೆಗೆ ದಾಖಲಿಸಿದ್ದ. 

ಆ ವೇಳೆಗಾಗಲೇ ವೃದ್ಧ ಮೃತಪಟ್ಟಿದ್ದ. ವೃದ್ಧೆಗೆ ಚಿಕಿತ್ಸೆ ನೀಡಲಾಗಿದ್ದು ಆಕೆ ಚೇತರಿಸಿಕೊಳ್ಳುತ್ತಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಇನ್ನೂ ಯಾರನ್ನೂ ಬಂಧಿಸಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com