ಉತ್ತರಾಖಂಡ: ಹಿಮದ ನಡುವೆ ಸಿಲುಕಿ 12 ಚಾರಣಿಗರ ದುರ್ಮರಣ: ನಾಪತ್ತೆಯಾದವರಿಗಾಗಿ ತೀವ್ರಗೊಂಡ ಹುಡುಕಾಟ

ಮಳೆ, ಪ್ರವಾಹದಿಂದ ತತ್ತರಿಸಿರುವ ಉತ್ತರಾಖಂಡ, ಮತ್ತಷ್ಟು ಅನಾಹುತಗಳಿಗೆ ಸಾಕ್ಷಿಯಾಗುತ್ತಿದೆ. ಮಳೆಯ ಬೆನ್ನಲ್ಲೇ ಹಿಮಾಲಯ ಪರ್ವತ ಪ್ರದೇಶಗಳಲ್ಲಿ ವಿಪರೀತ ಹಿಮ ಸುರಿಯುತ್ತಿರುವುದು ಭಾರಿ ಅವಘಡಕ್ಕೆ ಕಾರಣವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನವದೆಹಲಿ: ಮಳೆ, ಪ್ರವಾಹದಿಂದ ತತ್ತರಿಸಿರುವ ಉತ್ತರಾಖಂಡ, ಮತ್ತಷ್ಟು ಅನಾಹುತಗಳಿಗೆ ಸಾಕ್ಷಿಯಾಗುತ್ತಿದೆ. ಮಳೆಯ ಬೆನ್ನಲ್ಲೇ ಹಿಮಾಲಯ ಪರ್ವತ ಪ್ರದೇಶಗಳಲ್ಲಿ ವಿಪರೀತ ಹಿಮ ಸುರಿಯುತ್ತಿರುವುದು ಭಾರಿ ಅವಘಡಕ್ಕೆ ಕಾರಣವಾಗಿದೆ.

ಪ್ರತಿಕೂಲ ಹವಾಮಾನದಿಂದ ಉಂಟಾದ ಭಾರೀ ಪ್ರಮಾಣದ ಹಿಮಪಾತದಿಂದಾಗಿ ಅಕ್ಟೋಬರ್​ 18ರಂದು ದಾರಿ ತಪ್ಪಿದ್ದ 22 ಚಾರಣಿಗರಲ್ಲಿ 12 ಮಂದಿಯ ಮೃತದೇಹವನ್ನು ವಾಯುಸೇನೆ ವಶಕ್ಕೆ ಪಡದುಕೊಂಡಿದ್ದು, ನಾಪತ್ತೆಯಾದವರಿಗಾಗಿ ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರೆಸಿದೆ.

ಈ ಕುರಿತು ಮಾಹಿತಿ ನೀಡಿರುವ ಉತ್ತರಾಖಂಡ್ ಪೊಲೀಸ್ ಮಹಾ ನಿರ್ದೇಶಕ (ಡಿಜಿಪಿ) ಅಶೋಕ್ ಕುಮಾರ್ ಅವರು, ಉತ್ತರಾಖಂಡ ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (ಎಸ್‌ಡಿಆರ್‌ಎಫ್) ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿದ್ದು, ಹರ್ಷಿಲ್‌ನಲ್ಲಿ 11 ಚಾರಣಿಗರ ಗುಂಪು ಕಾಣೆಯಾಗಿದೆ. ಇದರಲ್ಲಿ ಏಳು ಚಾರಣಿಗರ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇಬ್ಬರು ಚಾರಣಿಗರನ್ನು ರಕ್ಷಿಸಲಾಗಿದ್ದು, ಇನ್ನಿಬ್ಬರಿಗಾಗಿ ಹುಡುಕಾಟ ಮುಂದುವರೆದಿದೆ ಎಂದು ಹೇಳಿದ್ದಾರೆ.

ಇದೇ ರೀತಿ 11 ಮಂದಿ ಚಾರಣಿಗರ ಮತ್ತೊಂದು ತಂಡ ನಾಪತ್ತೆಯಾಗಿದೆ. ಇದರಲ್ಲಿ 5 ಮೃತದೇಹಗಳ ವಶಪಡಿಸಿಕೊಳ್ಳಲಾಗಿದ್ದು, ನಾಲ್ವರು ಚಾರಣಿಗರನ್ನು ಸುರಕ್ಷಿತವಾಗಿ ರಕ್ಷಣೆ ಮಾಡಲಾಗಿದೆ. ಇಬ್ಬರು ನಾಪತ್ತೆಯಾಗಿದ್ದಾರೆಂದು. ಎರಡು ಪ್ರತ್ಯೇಕ ಸ್ಥಳಗಳಲ್ಲಿ ಎಂಡು ತಂಡಗಳಲ್ಲಿ ಒಟ್ಟು 22 ಮಂದಿ ನಾಪತ್ತೆಯಾಗಿದ್ದು, ಈ ವರೆಗು 12 ಮೃತದೇಹಗಳುವಶಪಡಿಸಿಕೊಂಡು 6 ಮಂದಿಯನ್ನು ರಕ್ಷಣೆ ಮಾಡಲಾಗಿದೆ. ನಾಲ್ವರಿಗಾಗಿ ಕಾರ್ಯಾಚರಣೆ ಮುಂದುವರೆದಿದೆ ಎಂದು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com