ಪ್ರಧಾನಿ ನರೇಂದ್ರ ಮೋದಿ ಗಡ್ಡವನ್ನು ಅಣಕಿಸಿದ ಕಾಂಗ್ರೆಸ್ ಮುಖಂಡ ಕಮಲ್ ನಾಥ್: ವ್ಯಾಪಕ ಟೀಕೆ

ಮೂರು ಕೃಷಿ ಕಾನೂನುಗಳು ಕನಿಷ್ಟ ಬೆಂಬಲ ಬೆಲೆ ಮತ್ತು ಸ್ಟಾಕ್ ಮಿತಿಯ ವ್ಯವಸ್ಥೆಯನ್ನು ಹಾಳುಗೆಡವುತ್ತದೆ. ಅಲ್ಲದೆ ಈ ಕಾನೂನು ಕಾಳಸಂತೆ, ಕೈಗಾರಿಕೋದ್ಯಮಿಗಳಿಗೆ ಮಾತ್ರವೇ ಲಾಭ ತಂದುಕೊಡುತ್ತದೆ ಎಂದು ಅವರು ಆರೋಪಿಸಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಇಂಧನ ಬೆಲೆ ಏರಿಕೆಗೆ ಸಂಬಂಧಿಸಿ ಮಧ‍್ಯಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕಮಲ್ ನಾಥ್ ಪ್ರಧಾನಿ ನರೇಂದ್ರ ಮೋದಿಯವರ ಗಡ್ಡವನ್ನು ಅಣಕಿಸಿದ್ದಾರೆ. ಪ್ರಧಾನಿ ಮೋದಿಯವರ ಗಡ್ಡ ಎಷ್ಟು ಉದ್ದ ಬೆಳೆಯುತ್ತಿದೆಯೋ ಅಷ್ಟೇ ಉದ್ದಕ್ಕೆ ದೇಶದಲ್ಲಿನ ವಸ್ತುಗಳ ಬೆಲೆಯೂ ಬೆಳೆಯುತ್ತಿದೆ ಎಂದು ಕಮಲ್ ನಾಥ್ ವ್ಯಂಗ್ಯವಾಡಿದ್ದಾರೆ.

ಮೋದಿ ತಮ್ಮ ಗಡ್ಡವನ್ನು ಒಂದು ಇಂಚಿನಷ್ಟು ಟ್ರಿಮ್ ಮಾಡಬೇಕು ಇದರಿಂದ ಹಣದುಬ್ಬರ ಕಡಿಮೆಯಾಗುತ್ತದೆೆಂಡು ಕಮಲ್ ನಾಥ್ ಅಣಕವಾಡೀದ್ದಾರೆ. ಮೂರು ಕೃಷಿ ಕಾನೂನುಗಳು ಕನಿಷ್ಟ ಬೆಂಬಲ ಬೆಲೆ ಮತ್ತು ಸ್ಟಾಕ್ ಮಿತಿಯ ವ್ಯವಸ್ಥೆಯನ್ನು ಹಾಳುಗೆಡವುತ್ತದೆ. ಅಲ್ಲದೆ ಈ ಕಾನೂನು ಕಾಳಸಂತೆ, ಕೈಗಾರಿಕೋದ್ಯಮಿಗಳಿಗೆ ಮಾತ್ರವೇ ಲಾಭ ತಂದುಕೊಡುತ್ತದೆ ಎಂದು ಅವರು ಆರೋಪಿಸಿದ್ದಾರೆ. 

ರಾಜ್ಯದ ಯುವಕರು ನಿರುದ್ಯೋಗಿಗಳಾಗಿದ್ದಾರೆ. ಆದರೆ ಭಾರತೀಯ ಜನತಾ ಪಕ್ಷದ ನೀತಿಗಳು ಅವರ ಭವಿಷ್ಯವನ್ನು ಹಾಳುಮಾಡುತ್ತಿವೆ ಎಂದು ಕಮಲ್ ನಾಥ್ ಕೇಂದ್ರದ ವಿರುದ್ಧ ಹರಿಹಾಯ್ದಿದ್ದಾರೆ. ಉಪಚುನಾವಣೆ ನಡೆಯುತ್ತಿರುವ ಬದ್ವಾಹಾ ವಿಧಾನಸಭಾ ಕ್ಷೇತ್ರದ ಸನವಾಡದಲ್ಲಿ ಅವರು ಮಾತನಾಡುತ್ತಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com