ಸ್ಕೂಲ್ ಬಸ್ ಅಡಿ ಸಿಕ್ಕು ನಜ್ಜುಗುಜ್ಜಾದ 2 ವರ್ಷದ ಹೆಣ್ಣು ಮಗು: ಚಲಿಸುತ್ತಿದ್ದ ಬಸ್ ನಿಂದಲೇ ಚಾಲಕ ಪರಾರಿ
ಬರ್ವಾನಿ: ಸ್ಕೂಲ್ ಬಸ್ ಗೆ ಸಿಕ್ಕು 2 ವರ್ಷದ ಹೆಣ್ಣು ಮಗು ಸಾವನ್ನಪ್ಪಿರುವ ದಾರುಣ ಘಟನೆ ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯ ಗಂಧವಲ್ ಎಂಬಲ್ಲಿ ನಡೆದಿದೆ.
ನತದೃಷ್ಟ ತಂದೆ ತನ್ನ ಹಿರಿಯ ಮಗನನ್ನು ಶಾಲೆ ಬಸ್ ನಿಂದ ಕರೆ ತರಲು ಹೊರಬಂದಿದ್ದರು. ಅದೇ ವೇಳೆ 2 ವರ್ಷದ ಅವರ ಪುಟ್ಟ ಮಗಳು ಯಶಿಕಾ ಹಿಂಬಾಲಿಸಿಬಂದಿದ್ದಳು. ಇತ್ತ ತಂದೆ ಸ್ಕೂಲ್ ಬಸ್ ಬಾಗಿಲಿನಿಂದ ತಮ್ಮ ಮಗನನ್ನು ಇಳಿಸುತ್ತಿದ್ದರೆ ಆತ್ತ ಯಶಿಕಾ ಸ್ಕೂಲ್ ಬಸ್ ಎದುರು ಹೋಗಿ ನಿಂತಿದ್ದಳು.
ಆಕೆ ಬಸ್ ಮುಂದುಗಡೆ ಇರುವುದು ಯಾರಿಗೂ ತಿಳಿಯಲೇ ಇಲ್ಲ. ಮಕ್ಕಳು ಬಸ್ ನಿಂದ ಇಳಿದ ನಂತರ ಬಸ್ ಚಾಲಕ ಬಸ್ ಅನ್ನು ಸ್ಟಾರ್ಟ್ ಮಾಡಿ ಮುಂದಕ್ಕೆ ಚಲಿಸಿದ್ದಾನೆ. ಆ ವೇಳೆಗೆ ಅನಾಹುತ ಸಂಭವಿಸಿ ಹೋಗಿತ್ತು. ಬಸ್ ಅಡಿ ಸಿಕ್ಕ ಮಗುವಿನ ದೇಹ ನಜ್ಜುಗುಜ್ಜಾಗಿತ್ತು.
ಸುತ್ತಮುತ್ತಲಿನ ಸಾರ್ವಜನಿಕರು ಬಸ್ ಎದುರು ಮಗು ಇರುವುದಾಗಿ ಕಿರುಚುತ್ತಾ ಮುನ್ನುಗ್ಗಿ ಬಂದರು. ಆ ವೇಳೆಗೆ ಆತಂಕಗೊಂಡ ಬಸ್ ಚಾಲಕ ಬಸ್ ಚಲಿಸುತ್ತಿರುವಂತೆಯೇ ಡೋಋ ತೆಗೆದು ಹಾರಿ ಪರಾರಿಯಾಗಿದ್ದಾನೆ.
Related Article
ತುಮಕೂರು: ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಅಪಘಾತ ಇಬ್ಬರ ಸಾವು; ಬೈಕ್ ಮೇಲೆ ಬಸ್ ಹರಿದು ಸವಾರ ಬಲಿ!
ಹರ್ಯಾಣದ ಟಿಕ್ರಿ ಗಡಿಭಾಗದಲ್ಲಿ ಭೀಕರ ಅಪಘಾತ: ಮೂವರು ರೈತ ಮಹಿಳೆಯರು ಸಾವು, ಇಬ್ಬರಿಗೆ ಗಾಯ
ಬೆಂಗಳೂರಿನಲ್ಲಿ ಭೀಕರ ಅಪಘಾತ: ಟಿಪ್ಪರ್ ಹರಿದು ತಾಯಿ, ಮಗು ಸಾವು
ತುಮಕೂರಿನಲ್ಲಿ ಭೀಕರ ರಸ್ತೆ ಅಪಘಾತ: ಖಾಸಗಿ ಬಸ್-ಟಾಟಾ ಏಸ್ ಡಿಕ್ಕಿ, ನಾಲ್ವರ ದುರ್ಮರಣ
ದಸರಾ ಹಬ್ಬದಂದೇ ಭೀಕರ ರಸ್ತೆ ಅಪಘಾತ: ಬೈಕ್ ಸ್ಕಿಡ್ ಆಗಿ ಇಬ್ಬರ ದುರ್ಮರಣ
ಪಿಒಕೆಯ ಹವೇಲಿ ಜಿಲ್ಲೆಯಲ್ಲಿ ಜೀಪ್ ಅಪಘಾತ: ಐವರು ದುರ್ಮರಣ
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ