ರೈತರ ಘರ್ಜನೆ ಮುಂದೆ ಬಿಜೆಪಿಯ ಅಧಿಕಾರದ ಮದ ನಿಲ್ಲದು: ಕಿಸಾನ್ ಮಹಾಪಂಚಾಯತ್ ಪರ ಪ್ರಿಯಾಂಕಾ ಗಾಂಧಿ ಬ್ಯಾಟಿಂಗ್

ಸಂಯುಕ್ತ ಕಿಸಾನ್ ಮೋರ್ಚಾ ಇಂದು ಕಿಸಾನ್ ಮಹಾಪಂಚಾಯತ್ ಹಮ್ಮಿಕೊಂಡಿತ್ತು. ಸಾವಿರಾರು ಮಂದಿ ರೈತರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಕಿಸಾನ್ ಮಹಾಪಂಚಾಯತ್ ನಲ್ಲಿ ಪಾಲ್ಗೊಂಡಿರುವ ರೈತರು
ಕಿಸಾನ್ ಮಹಾಪಂಚಾಯತ್ ನಲ್ಲಿ ಪಾಲ್ಗೊಂಡಿರುವ ರೈತರು

ನವದೆಹಲಿ: ಇಂದು ಉತ್ತರಪ್ರದೇಶದ ಮುಜಾಫರ್ ನಗರದಲ್ಲಿ ನಡೆದ ರೈತರ ಕಿಸಾನ್ ಮಹಾಪಂಚಾಯತ್ ಸಮಾರಂಭಕ್ಕೆ ಕಾಂಗ್ರೆಸ್ ಬೆಂಬಲ ನೀಡಿದೆ. ಈ ಬಗ್ಗೆ ಮಾತನಾಡಿದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸತ್ಯದ ಪ್ರತಿಧ್ವನಿ ಕೇಳಿಸುತ್ತಿದೆ, ಈ ಅನ್ಯಾಯದ ಕೇಂದ್ರ ಸರ್ಕಾರ ರೈತರ ಮಾತನ್ನು ಕೇಳಬೇಕು ಎಂದು ಹೇಳಿದ್ದಾರೆ.  


ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಕೂಡಾ ಕೇಂದ್ರದ ವಿರುದ್ಧ ಗುಡುಗಿದ್ದು ಬಿಜೆಪಿಯ ಅಧಿಕಾರದ ಮದ ಬಹಳ ಕಾಲ ನಡೆಯುವುದಿಲ್ಲ. ರೈತರ ಘರ್ಜನೆ ಮುಂದೆ ಮೂರಾಬಟ್ಟೆಯಾಗುತ್ತದೆೀಂದು ಕೆಟಕಿಯಾಡಿದ್ದಾರೆ. 

ಕೇಂದ್ರದ ನೂತನ ಕೃಷಿ ಕಾನೂನು ವಿರೋಧಿಸಿ ಉತ್ತರಪ್ರದೇಶದ ಮುಜಾಫರ್ ನಗರದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಇಂದು ಕಿಸಾನ್ ಮಹಾಪಂಚಾಯತ್ ಹಮ್ಮಿಕೊಂಡಿತ್ತು. ಸಾವಿರಾರು ಮಂದಿ ರೈತರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.  

ಕಾಂಗ್ರೆಸ್ ವಕ್ತಾರ ರಣ್ ದೀಪ್ ಸಿಂಗ್ ಸುರ್ಜೇವಾಲ ಕೂಡ ಹೇಳಿಕೆ ನೀಡಿದ್ದು, ರೈತರಿಂದ ದುಡ್ಡು ಹೊಡೆಯುತ್ತಿರುವವರು ದೇಶದ್ರೋಹಿಗಳು ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com