ಗಿಲಾನಿ ಅಂತ್ಯಸಂಸ್ಕಾರದ ವೇಳೆ ದೇಶವಿದ್ರೋಹಿ ಚಟುವಟಿಕೆ: ಕಾಶ್ಮೀರ ಪೊಲೀಸರಿಂದ ವಿಡಿಯೊ ಬಿಡುಗಡೆ

ಗಿಲಾನಿ ಮನೆಯಲ್ಲಿ ನಡೆದ ದೇಶ ವಿದ್ರೋಹಿ ಚಟುವಟಿಕೆಗಳು ವಿಡಿಯೋಗಳಲ್ಲಿ ದಾಖಲಾಗಿವೆ. ಭಾರತ ವಿರೋಧಿ ಘೋಷಣೆ, ಪಾಕ್ ಪರ ಘೋಷಣೆಗಳನ್ನು ಈ ಸಂದರ್ಭದಲ್ಲಿ ಕೂಗಲಾಯಿತೆಂದು ಪೊಲೀಸರು ತಿಳಿಸಿದ್ದಾರೆ.
ಸೈಯದ್ ಅಲಿ ಶಾ ಗಿಲಾನಿ
ಸೈಯದ್ ಅಲಿ ಶಾ ಗಿಲಾನಿ
Updated on

ಶ್ರೀನಗರ: ಇತ್ತೀಚಿಗಷ್ಟೆ ನಿಧನರಾದ ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಶಾ ಗಿಲಾನಿ ಅವರ ಅಂತ್ಯ ಸಂಸ್ಕಾರ ಮಾಡುವ ಸಂದರ್ಭ ಅಲ್ಲಿ ಏನು ನಡೆಯಿತು ಎಂಬುದನ್ನು ವಿವರಿಸುವ ನಾಲ್ಕು ವಿಡಿಯೋಗಳನ್ನು ಕಾಶ್ಮೀರ ಪೊಲೀಸ್ ಇಲಾಖೆ ಟ್ವಿಟ್ಟರ್ ನಲ್ಲಿ ಬಿಡುಗಡೆಗೊಳಿಸಿದೆ.

ಶವವನ್ನು ಅಂತ್ಯಸಂಸ್ಕಾರಕ್ಕೆಂಡು ಕೊಂಡೊಯ್ದ ನಂತರ ಅವರ ಮನೆಯಲ್ಲಿ ನಾಲ್ವರು ಪೊಲೀಸರನ್ನು ಮೂರು ಗಂಟೆಗಳ ಕಾಲ ಕಾಯುವಂತೆ ಇಲಾಖೆ ಆದೇಶಿಸಿತ್ತು. ಈ ಸಂದರ್ಭ ಅವರ ಮನೆಯಲ್ಲಿ ನಡೆದ ಘಟನಾವಳಿಗಳನ್ನು ಪೊಲೀಸರು ವಿಡಿಯೊ ಚಿತ್ರೀಕರಣ ಮಾಡಿದ್ದಾರೆ ಎಂದು ಇಲಾಖೆ ತಿಳಿಸಿದೆ. 

ಗಿಲಾನಿ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಮೊದಲು ರಾಜ್ಯದ ಪೊಲೀಸ್ ವರಿಷ್ಠರು ಗಿಲಾನಿ ಪುತ್ರರಿಬ್ಬರನ್ನು ಭೇಟಿ ಮಾಡಿ ಶವ ಸಂಸ್ಕಾರವನ್ನು ಆದಷ್ಟು ಬೇಗನೆ ರಾತ್ರಿಯ ಸಮಯದಲ್ಲೇ ಮಾಡುವಂತೆ ಮನವಿ ಮಾಡಿದ್ದರು. ಇಲ್ಲದೇ ಹೋದರೆ ಕಾನೂನು ಸುವ್ಯವಸ್ಥೆ ಹದಗೆಡುತ್ತದೆ ಎಂದು ಪೊಲೀಸರು ಮನವರಿಕೆ ಮಾಡಿದರು. ಗಿಲಾನಿ ಪುತ್ರರಿಬ್ಬರು ಅದಕ್ಕೆ ಸಮ್ಮತಿ ಸೂಚಿಸಿದರು.

ಆದರೆ ನಂತರ ನಡೆದಿದ್ದೇ ಬೇರೆ. 3 ಗಂಟೆಗಳ ಕಾಲವಕಾಶ ಕೊಡಿ ನಮ್ಮ ನೆಂಟರಿಷ್ಟರು ಬರುವುದರಲ್ಲಿದ್ದಾರೆ ಎಂದು ಪುತ್ರರು ಪೊಲೀಸರನ್ನು ಕೇಳಿಕೊಂಡರು. ಅಂತೆಯೇ ಪೊಲೀಸರು ಸಮಯ ನೀಡಿದರು. ಆ ಸಮಯದಲ್ಲಿ ಪುತ್ರರಿಬ್ಬರೂ ಉಲ್ಟಾ ಹೊಡೆದರು. ಪೊಲೀಸರ ಮಾತಿಗೆ ಸೊಪ್ಪು ಹಾಕದ ಗಿಲಾನಿ ಪುತ್ರರು ಗಿಲಾನಿ ಶವವನ್ನು ಪಾಕ್ ಧ್ವಜದ ಮೂಲಕ ಸುತ್ತಿದರು. 

2- 3 ಗಂಟೆಯ ಅವಧಿಯಲ್ಲಿ ಪಾಕಿಸ್ತಾನ ಮತ್ತು ಪ್ರತ್ಯೇಕತವಾದಿಗಳ ಗುಂಪಿನಿಂದ ಒತ್ತಡಕ್ಕೊಳಗಾಗಿ ಗಿಲಾನಿ ಪುತ್ರರು ತಮ್ಮ ನಿರ್ಧಾರವನ್ನು ಬದಲಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆ 2- 3 ಗಂಟೆಯಲ್ಲಿ ಗಿಲಾನಿ ಮನೆಯಲ್ಲಿ ನಡೆದ ದೇಶ ವಿದ್ರೋಹಿ ಚಟುವಟಿಕೆಗಳು ವಿಡಿಯೋಗಳಲ್ಲಿ ದಾಖಲಾಗಿವೆ. ಭಾರತ ವಿರೋಧಿ ಘೋಷಣೆ, ಪಾಕ್ ಪರ ಘೋಷಣೆಗಳನ್ನು ಈ ಸಂದರ್ಭದಲ್ಲಿ ಕೂಗಲಾಯಿತೆಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com