ಮುಂದಿನ 20 ವರ್ಷಗಳಲ್ಲಿ ವಾಯು ಸೇನೆಗೆ 350 ಯುದ್ಧ ವಿಮಾನಗಳ ಸೇರ್ಪಡೆ: ಐಎಎಫ್ ಮುಖ್ಯಸ್ಥ ಭಡೌರಿಯಾ

ಭಾರತೀಯ ವಾಯುಪಡೆಯು ಮುಂದಿನ ಎರಡು ದಶಕಗಳಲ್ಲಿ ಸುಮಾರು 350 ವಿಮಾನಗಳನ್ನು ಖರೀದಿಸಲು ಯೋಜಿಸುತ್ತಿದೆ ಎಂದು ಏರ್ ಚೀಫ್ ಮಾರ್ಷಲ್ ಆರ್ ಕೆ ಎಸ್ ಭಡೌರಿಯಾ ಬುಧವಾರ ಹೇಳಿದ್ದಾರೆ.
ಭಾರತೀಯ ವಾಯುಪಡೆ ಮುಖ್ಯಸ್ಥ ಆರ್ ಕೆಎಸ್ ಭದೌರಿಯಾ
ಭಾರತೀಯ ವಾಯುಪಡೆ ಮುಖ್ಯಸ್ಥ ಆರ್ ಕೆಎಸ್ ಭದೌರಿಯಾ
Updated on

ನವದೆಹಲಿ: ಭಾರತೀಯ ವಾಯುಪಡೆಯು ಮುಂದಿನ ಎರಡು ದಶಕಗಳಲ್ಲಿ ಸುಮಾರು 350 ವಿಮಾನಗಳನ್ನು ಖರೀದಿಸಲು ಯೋಜಿಸುತ್ತಿದೆ ಎಂದು ಏರ್ ಚೀಫ್ ಮಾರ್ಷಲ್ ಆರ್ ಕೆ ಎಸ್ ಭಡೌರಿಯಾ ಬುಧವಾರ ಹೇಳಿದ್ದಾರೆ.

ಭಾರತೀಯ ಏರೋಸ್ಪೇಸ್ ವಲಯದ ಕುರಿತಾದ ಸಮಾವೇಶದಲ್ಲಿ ಪಾಲ್ಗೊಂಡು ಭಾಷಣದಲ್ಲಿ ಮಾತನಾಡಿದ ಅವರು, ಚೀನಾದ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಐಎಎಫ್‌ನ ಒಟ್ಟಾರೆ ಬಲವನ್ನು ಹೆಚ್ಚಿಸಲು ಅಸಮ್ಮಿತ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವ ಅಗತ್ಯತೆ ಇದೆ ಎಂದು ಹೇಳಿದರು. 

"ಉತ್ತರದ ನೆರೆಹೊರೆಯವರನ್ನು ನೋಡಿದರೆ, ನಾವು ಭದ್ರತೆಯ ಕಾರಣಗಳಿಗಾಗಿ ನಮ್ಮದೇ ಉದ್ಯಮದಿಂದ ಮನೆಯೊಳಗೆ ನಿರ್ಮಿಸಬೇಕಾದ ಸ್ಥಾಪಿತ ತಂತ್ರಜ್ಞಾನಗಳನ್ನು ಹೊಂದಿರಬೇಕು. ವಿವಿಧ ಸವಾಲುಗಳನ್ನು ಎದುರಿಸಲು ಭಾರತವು ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬಿಯಾಗುತ್ತಿದೆ. ಅದರಂತೆ ಮುಂದಿನ ಎರಡು
ದಶಕಗಳಲ್ಲಿ ದೇಶದೊಳಗಿಂದ ಸುಮಾರು 350 ವಿಮಾನಗಳನ್ನು ಖರೀದಿಸಲು ಐಎಎಫ್ ಎದುರು ನೋಡುತ್ತಿದೆ ಎಂದು ಹೇಳಿದರು.

ಅದೇ ಸಮಯದಲ್ಲಿ, ಇದು ಭಾರತದ ಬಗ್ಗೆ ಒಂದು ಕಠಿಣವಾದ ಪ್ರೊಜೆಕ್ಷನ್ ಎಂದು ಅವರು ಗಮನಿಸಿದ್ದು, ತೇಜಸ್ ಲಘು ಯುದ್ಧ ವಿಮಾನ ಯೋಜನೆಯು ಭಾರತದ ಏರೋಸ್ಪೇಸ್ ಉದ್ಯಮದಲ್ಲಿ ಆತ್ಮವಿಶ್ವಾಸವನ್ನು ತುಂಬಿದೆ. ಇದು ಮತ್ತಷ್ಟು ಬೆಳೆಯುವ ದೊಡ್ಡ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com