ಗುಜರಾತ್: 250 ಕೋಟಿ ರೂ. ಮೌಲ್ಯದ ಡ್ರಗ್ಸ್ ನೊಂದಿಗೆ ಇರಾನಿಯನ್ ಬೋಟ್ ಎಟಿಎಸ್ ವಶಕ್ಕೆ

ಗುಜರಾತ್ ಕರಾವಳಿ ಗಾರ್ಡ್ ಮತ್ತು ರಾಜ್ಯ ಭಯೋತ್ಪಾದನಾ ನಿಗ್ರಹ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯೊಂದರಲ್ಲಿ ಗುಜರಾತ್ ಕರಾವಳಿಯ ಭಾರತೀಯ ಸಮುದ್ರದಲ್ಲಿ ಏಳು ಸಿಬ್ಬಂದಿ ಮತ್ತು ಭಾರೀ ಪ್ರಮಾಣದ ಹೆರಾಯಿನ್ ಹೊಂದಿದ್ದ ಇರಾನಿಯನ್  ದೋಣಿಯೊಂದನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಬಂಧಿತ ಇರಾನ್ ಪ್ರಜೆಗಳು
ಬಂಧಿತ ಇರಾನ್ ಪ್ರಜೆಗಳು
Updated on

ಗಾಂಧಿನಗರ: ಗುಜರಾತ್ ಕರಾವಳಿ ಗಾರ್ಡ್ ಮತ್ತು ರಾಜ್ಯ ಭಯೋತ್ಪಾದನಾ ನಿಗ್ರಹ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯೊಂದರಲ್ಲಿ ಗುಜರಾತ್ ಕರಾವಳಿಯ ಭಾರತೀಯ ಸಮುದ್ರದಲ್ಲಿ ಏಳು ಸಿಬ್ಬಂದಿ ಮತ್ತು ಭಾರೀ ಪ್ರಮಾಣದ ಹೆರಾಯಿನ್ ಹೊಂದಿದ್ದ ಇರಾನಿಯನ್  ದೋಣಿಯೊಂದನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಶನಿವಾರ ರಾತ್ರಿ ಕಾರ್ಯಾಚರಣೆ ವೇಳೆಯಲ್ಲಿ ಬೋಟ್ ನ್ನು ವಶಕ್ಕೆ ಪಡೆಯಲಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 150 ರಿಂದ 250 ಕೋಟಿ ರೂ. ಮೌಲ್ಯದ  ಅಂದಾಜು 30 ರಿಂದ 50 ಕೆಜಿಯಷ್ಟು ಡ್ರಗ್ಸ್ ನ್ನು ಸಾಗಟ ಮಾಡಲಾಗುತಿತ್ತು ಎಂದು ಅವರು ಹೇಳಿದ್ದಾರೆ.  ಬೋಟ್ ನಲ್ಲಿದ್ದ ಎಲ್ಲಾ ಏಳು ಮಂದಿ ಇರಾನಿ ಸಿಬ್ಬಂದಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಹೆಚ್ಚಿನ ತನಿಖೆಗಳಿಗಾಗಿ ಬೋಟ್ ನ್ನು ಹತ್ತಿರದ ಬಂದರಿಗೆ ತರಲಾಗಿದೆ"ಎಂದು ಗುಜರಾತ್‌ನ ರಕ್ಷಣಾ ಪಿಆರ್‌ಒ ತಮ್ಮ ಅಧಿಕೃತ ಟ್ವಿಟರ್  ಖಾತೆಯಲ್ಲಿ ತಿಳಿಸಿದ್ದಾರೆ. ಸಮುದ್ರ ಮಾರ್ಗವಾಗಿ ಹೆರಾಯಿನ್ ನ್ನು ಕಳ್ಳ ಸಾಗಣೆ ಬಗ್ಗೆ ದೊರೆತ ಮಾಹಿತಿ ಆಧಾರದ ಮೇಲೆ ಕಾರ್ಯಾಚರಣೆ ನಡೆಸಲಾಯಿತು ಎಂದು ಗುಜರಾತ್ ಎಟಿಎಸ್ ಡಿಐಜಿ ಹಿಮಾಂಶು ಶುಕ್ಲಾ  ಪಿಟಿಐ ಸುದ್ದಿಸಂಸ್ಥೆಗೆ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com