ಕೊಯಮತ್ತೂರು: ಪಾನ್ ಉತ್ಪನ್ನಗಳ ಜೊತೆಗೆ ಗಾಂಜಾ ಮಿಶ್ರಣ ಮಾಡಿ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರು ಪಾನ್ ಬೀಡಾ ವ್ಯಾಪಾರಿಗಳನ್ನು ಕೋವೈ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳ ಬಳಿ 1 ಕೆ.ಜಿ ಪ್ರಮಾಣದ ಗಾಂಜಾ ಮತ್ತು ಮಾದಕ ವಸ್ತುಗಳು ಸಿಕ್ಕಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಖಚಿತ ಸುಳಿವಿನ ಆಧಾರದ ಮೇಲೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಬಂಧಿತ ಪಾನ್ ಬೀಡಾ ವ್ಯಾಪಾರಿಗಳು ಉತ್ತರ ಭಾರತದ ಕಾರ್ಮಿಕರ ಬಳಿಯಿಂದ ಮಾದಕವಸ್ತುಗಳನ್ನು ಪಡೆದುಕೊಂಡಿರುವುದಾಗಿ ತನಿಖೆ ವೇಳೆ ತಿಳಿದುಬಂದಿದೆ.
Advertisement