ಕೇರಳದಲ್ಲಿ 15,951 ಹೊಸ ಕೋವಿಡ್-19 ಪ್ರಕರಣಗಳು, 165 ಸಾವು

ಕೇರಳದಲ್ಲಿ 15,951 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು 165 ಮಂದಿ ಒಂದೇ ದಿನ ಕೋವಿಡ್-19 ನಿಂದ ಸಾವನ್ನಪ್ಪಿದ್ದಾರೆ.
ಕೋವಿಡ್-19 (ಸಾಂಕೇತಿಕ ಚಿತ್ರ)
ಕೋವಿಡ್-19 (ಸಾಂಕೇತಿಕ ಚಿತ್ರ)
Updated on: 

ತಿರುವನಂತಪುರಂ: ಕೇರಳದಲ್ಲಿ 15,951 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು 165 ಮಂದಿ ಒಂದೇ ದಿನ ಕೋವಿಡ್-19 ನಿಂದ ಸಾವನ್ನಪ್ಪಿದ್ದಾರೆ.

ಶನಿವಾರದಂದು 17,658 ಮಂದಿ ಚೇತರಿಸಿಕೊಂಡಿದ್ದು, ಒಟ್ಟಾರೆ ಕೇರಳದಲ್ಲಿ ಈ ವರೆಗೂ 44,41,430 ಮಂದಿ ಚೇತರಿಸಿಕೊಂಡಿದ್ದರೆ, ಒಟ್ಟಾರೆ ಸಕ್ರಿಯ ಪ್ರಕರಣಗಳ ಸಂಖ್ಯೆ 1,63,280ಗೆ ಏರಿಕೆಯಾಗಿದೆ.

ಕಳೆದ 24 ಗಂಟೆಗಳಲ್ಲಿ 1,03,484 ಮಾದರಿಗಳನ್ನು ಸಂಗ್ರಹಿಸಲಾಗಿದೆ. ಕೇರಳದಲ್ಲಿ ಎರ್ನಾಕುಲಮ್ ನಲ್ಲಿ ಅತಿ ಹೆಚ್ಚು ಪ್ರಕರಣಗಳು (2,572) ವರದಿಯಾಗಿದ್ದು, ನಂತರದ ಸ್ಥಾನದಲ್ಲಿ ತಿರುವನಂತಪುರಂ-1,861 ಪ್ರಕರಣ, ತ್ರಿಶೂರ್-1,855 ಪ್ರಕರಣ, ಕೊಟ್ಟಾಯಂ-1,486 ಪ್ರಕರಣ,  ಕೋಯಿಕ್ಕೋಡ್ 1,379 ಪ್ರಕರಣ, ಮಳಪ್ಪುರಂ ನಲ್ಲಿ 1,211 ಪ್ರಕರಣ, ಪಾಲಕ್ಕಾಡ್ ನಲ್ಲಿ 1,008 ಪ್ರಕರಣ ಅಲಪ್ಪುಳ-985, ಕೊಲ್ಲಂ ನಲ್ಲಿ 954 ಪ್ರಕರಣಗಳು ವರದಿಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com