ಉತ್ತರ ಪ್ರದೇಶ: 3 ಮಹಿಳೆಯರಿಗೆ ಕೋವಿಡ್ ಬದಲಿಗೆ ಆಂಟಿ ರೇಬೀಸ್ ಲಸಿಕೆ ನೀಡಿಕೆ ಆರೋಪ; ತನಿಖೆಗೆ ಆದೇಶ

ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಮೂವರು ಮಹಿಳೆಯರಿಗೆ ಕೋವಿಡ್-19 ಲಸಿಕೆ ಬದಲಿಗೆ ಆಂಟಿ ರೇಬೀಸ್ ಲಸಿಕೆ ನೀಡಲಾಗಿದೆ ಎಂದು ಅವರ ಕುಟುಂಬಗಳು ಆರೋಪಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮುಜಫರ್‌ನಗರ: ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಮೂವರು ಮಹಿಳೆಯರಿಗೆ ಕೋವಿಡ್-19 ಲಸಿಕೆ ಬದಲಿಗೆ ಆಂಟಿ ರೇಬೀಸ್ ಲಸಿಕೆ ನೀಡಲಾಗಿದೆ ಎಂದು ಅವರ ಕುಟುಂಬಗಳು ಆರೋಪಿಸಿದೆ.

ಕೊರೋನಾವೈರಸ್ ಲಸಿಕೆ ಪಡೆಯಲು ಸರೋಜ್ (70), ಅನಾರ್ಕಲಿ (72) ಮತ್ತು ಸತ್ಯವತಿ (60) ಎಂಬ ಮಹಿಳೆಯರು ಗುರುವಾರ ಕಾಂಧ್ಲಾದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ತೆರಳಿದ್ದರು. 

ಈ ವೇಳೆ ಡೋಸೇಜ್ ನೀಡಿದ ನಂತರ, ಮಹಿಳೆಯರಿಗೆ ರೇಬೀಸ್ ವಿರೋಧಿ ಲಸಿಕೆ ಸ್ಲಿಪ್‌ಗಳನ್ನು ನೀಡಲಾಗಿದೆ. ಇದನ್ನು ಗಮನಿಸಿದ ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ. 

ಇನ್ನು ತಪ್ಪೇಸಗಿದ ವೈದ್ಯಕೀಯ ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಕೇಂದ್ರದ ಉಸ್ತುವಾರಿ ಬಿಜೇಂದ್ರ ಸಿಂಗ್ ಅವರು ತನಿಖೆ ನಡೆಸಲಾಗುವುದು. ಆರೋಪ ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com