13 ಗಂಟೆಗಳ ವರೆಗೆ ನಡೆದ ಭಾರತ-ಚೀನಾ ಗಡಿ ವಿವಾದ ಮಾತುಕತೆ!

ಗಡಿ ವಿವಾದದ ಬಗ್ಗೆ ಏ.09 ರಂದು ಚೀನಾ-ಭಾರತ ಸೇನಾ ನಿಯೋಗದ ಮಾತುಕತೆ 13 ಗಂಟೆಗಳ ವರೆಗೂ ನಡೆದಿದೆ! 
13 ತಾಸು ನಡೆದ ಭಾರತ-ಚೀನಾ ಸೇನಾ ಮಾತುಕತೆ!
13 ತಾಸು ನಡೆದ ಭಾರತ-ಚೀನಾ ಸೇನಾ ಮಾತುಕತೆ!

ನವದೆಹಲಿ: ಗಡಿ ವಿವಾದದ ಬಗ್ಗೆ ಏ.09 ರಂದು ಚೀನಾ-ಭಾರತ ಸೇನಾ ನಿಯೋಗದ ಮಾತುಕತೆ 13 ಗಂಟೆಗಳ ವರೆಗೂ ನಡೆದಿದೆ! 

ಲಡಾಖ್ ನಲ್ಲಿ ಘರ್ಷಣೆಗೆ ಕಾರಣವಾಗಿದ್ದ ಹಾಟ್ ಸ್ಪ್ರಿಂಗ್ಸ್, ಗೋಗ್ರಾ 900 ಚದರ ಕಿಲೋಮೀಟರ್ ಡೆಪ್ಸಾಂಗ್ ಪ್ಲೇನ್ ಮುಂತಾದ ಕೇಂದ್ರಗಳಿಂದ ಸೇನಾ ಹಿಂತೆಗೆತದ ಬಗ್ಗೆ 11 ನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಾತುಕತೆಗಳು ಚುಶುಲ್ ನಲ್ಲಿ ಬೆಳಿಗ್ಗೆ 10.30 ಕ್ಕೆ ಪ್ರಾರಂಭವಾದ ಸಭೆ ರಾತ್ರಿ 11:30 ಕ್ಕೆ ಮುಕ್ತಾಯಗೊಂಡಿದೆ. 

ಸುಮಾರು 2 ತಿಂಗಳುಗಳ ನಂತರ ಭಾರತ-ಚೀನಾ ನಡುವೆ ಕಾರ್ಪ್ಸ್ ಕಮಾಂಡರ್ ಮಾತುಕತೆ ನಡೆದಿದೆ. ಲೇಹ್ ನ 14 ಕಾರ್ಪ್ಸ್ ನ ಲೆಫ್ಟಿನೆಂಟ್ ಜನರಲ್ ಪಿಜಿಕೆ ಮೆನನ್ ಭಾರತೀಯ ನಿಯೋಗದ ನೇತೃತ್ವ ವಹಿಸಿದ್ದರು. ಘರ್ಷಣೆಯ ಕೇಂದ್ರಗಳಿಂದ ಕ್ಷಿಪ್ರಗತಿಯಲ್ಲಿ ಸೇನಾ ಹಿಂತೆಗೆತ ಪ್ರಕ್ರಿಯೆ ನಡೆಸುವುದು ಮಾತುಕತೆಯ ಕೇಂದ್ರಬಿಂದುವಾಗಿತ್ತು. ಪ್ಯಾಂಗಾಂಗ್ ಸರೋವರದ ಬಳಿ ಸೇನಾ ಹಿಂತೆಗೆತದ ಬಳಿಕ  ಘರ್ಷಣೆಯ ಕೇಂದ್ರಗಳಾದ ಗೋಗ್ರಾ, ಹಾಟ್ ಸ್ಪ್ರಿಂಗ್ಸ್, ಡೇಪ್ಸಾಂಗ್ ಗಳಲ್ಲಿ ಸೇನಾ ಹಿಂತೆಗೆತಕ್ಕೆ ಉಭಯ ರಾಷ್ಟ್ರಗಳಿಂದ ಯೋಜನೆ ರೂಪಿಸಲಾಗಿತ್ತು. 

"ಸೇನಾ ಮಾತುಕತೆ ಚಾಲ್ತಿಯಲ್ಲಿದೆ, ಹಾಗೂ ಬೇಸಿಗೆಯಲ್ಲಿ ಎಲ್ಎಸಿಯಲ್ಲಿ ಪರಿಸ್ಥಿತಿ ಸುಧಾರಿಸುವುದು ಅತ್ಯಂತ ಪ್ರಮುಖವಾಗಿದೆ" ಎಂದು ಹಿರಿಯ ಸೇನಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಳೆದ ಬಾರಿಯ ಸಭೆ 16 ತಾಸುಗಳು ನಡೆದಿತ್ತು ಎಂಬುದು ಗಮನಾರ್ಹ ಸಂಗತಿ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com