ಕೋವಿಡ್-19 ಸೋಂಕು ಉಲ್ಬಣ: ಯುಕೆ, ಯುಎಇ, ಇಸ್ರೇಲ್ ದೇಶಗಳನ್ನೇ ಹಿಂದಿಕ್ಕಿದ ಛತ್ತೀಸ್ ಘಡದ ರಾಯ್ ಪುರ!

ಛತ್ತೀಸ್ ಘಡದ ರಾಯ್ ಪುರ ಜಿಲ್ಲೆ ಕೋವಿಡ್ ಸೋಂಕಿತರ ಪಟ್ಟಿಯಲ್ಲಿ ಯುಕೆ, ಯುಎಇ, ಇಸ್ರೇಲ್ ದೇಶಗಳನ್ನೇ ಹಿಂದಿಕ್ಕಿದೆ.

Published: 14th April 2021 02:14 PM  |   Last Updated: 14th April 2021 03:08 PM   |  A+A-


Hospital-In-Chhattisgarh

ರಾಯ್ ಪುರ್ ಆಸ್ಪತ್ರೆ ಅವರಣದಲ್ಲಿ ಹೆಣಗಳ ರಾಶಿ

Posted By : Srinivasamurthy VN
Source : The New Indian Express

ರಾಯ್ ಪುರ: ಛತ್ತೀಸ್ ಘಡದ ರಾಯ್ ಪುರ ಜಿಲ್ಲೆ ಕೋವಿಡ್ ಸೋಂಕಿತರ ಪಟ್ಟಿಯಲ್ಲಿ ಯುಕೆ, ಯುಎಇ, ಇಸ್ರೇಲ್ ದೇಶಗಳನ್ನೇ ಹಿಂದಿಕ್ಕಿದೆ.

ಹೌದು.. ಛತ್ತೀಸ್ ಘಡದ ರಾಜಧಾನಿ ರಾಯ್ ಪುರದಲ್ಲಿ ನಿನ್ನೆ ಮತ್ತೆ ದೈನಂದಿನ ಸೋಂಕಿತರ ಸಂಖ್ಯೆ ಮತ್ತೆ 4 ಸಾವಿರ ಗಡಿ ದಾಟಿದ್ದು, ಆ ಮೂಲಕ ದೈನಂದಿನ ಸೋಂಕು ವರದಿಯಲ್ಲಿ ಯುನೈಟೆಡ್ ಕಿಂಗ್‌ಡಮ್ (ಯುಕೆ), ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ), ಮೆಕ್ಸಿಕೊ, ದಕ್ಷಿಣ ಆಫ್ರಿಕಾ, ಇಸ್ರೇಲ್  ಸೇರಿದಂತೆ ಇತರೆ ದೇಶಗಳನ್ನು ಹಿಂದಿಕ್ಕಿದೆ. 

ಮಂಗಳವಾರ ರಾಯಪುರದಲ್ಲಿ 4168 ಹೊಸ ಸೋಂಕು ಪ್ರಕರಣಗಳು ದಾಖಲಾಗಿದ್ದು, ಛತ್ತೀಸ್ ಘಡದಲ್ಲಿ  ದಾಖಲಾದ ಸೋಂಕಿನ  ಪೈಕಿ ಇದು ಮೂರನೇ ಒಂದು ಭಾಗವಾಗಿದೆ. 

ಇನ್ನು ಯುಕೆ, ಯುಎಇ, ಮೆಕ್ಸಿಕೊ, ದಕ್ಷಿಣ ಆಫ್ರಿಕಾ, ಇಸ್ರೇಲ್ ನಲ್ಲಿ ದೈನಂದಿನ ಪ್ರಕರಣಗಳು ಏಪ್ರಿಲ್ 12 ರಂದು ಕ್ರಮವಾಗಿ 2472, 1928, 1793, 655, 225 ಆಗಿತ್ತು. ಈ ಎಲ್ಲ ದೇಶಗಳನ್ನೂ ಮೀರಿಸುವಂತೆ ರಾಯ್ ಪುರದಲ್ಲಿ 4 ಸಾವಿರಕ್ಕೂ ಹೆಚ್ಚು ಸೋಂಕು ಪ್ರಕರಣಗಳು ದಾಖಲಾಗಿತ್ತು.

ಇನ್ನು ಮಂಗಳವಾರ ಛತ್ತೀಸ್ ಘಡದಲ್ಲಿ 15121 ಹೊಸ ಕೊರೊನಾ ವೈರಸ್ ಸೋಂಕು ಪ್ರಕರಣಗಳು ದಾಖಲಾಗಿದ್ದು, ಆ ಮೂಲಕ ಛತ್ತೀಸ್ ಘಡದಲ್ಲಿ ಮೊದಲ ಬಾರಿಗೆ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1ಲಕ್ಷ ಗಡಿ ದಾಟಿದೆ. ಪ್ರಸ್ತುತ ಈ ರಾಜ್ಯದಲ್ಲಿ 109139 ಸಕ್ರಿಯ ಪ್ರಕರಣಗಳಿವೆ. ಅಂತೆಯೇ ಸೋಂಕು  ಸಕಾರಾತ್ಮಕ ಪ್ರಮಾಣವು ಕೂಡ ಶೇ.28.4ರಷ್ಟಿದೆ. 

ಕಳೆದ ಎರಡು ದಿನಗಳಲ್ಲಿ ಛತ್ತೀಸ್ ಘಡ ರಾಜ್ಯದಲ್ಲಿ 126 ಸೋಂಕಿತರ ಸಾವಿನ ವರದಿಯಾಗಿವೆ, ಆ ಮೂಲಕ ಇಲ್ಲಿ ಕೋವಿಡ್-19 ಸಾವಿನ ಸಂಖ್ಯೆ 5187 ಕ್ಕೆ ಏರಿಕೆಯಾಗಿದೆ.

ಕೋವಿಡ್ ಸೋಂಕಿನ ಪ್ರಮಾಣವು ರಾಯ್‌ಪುರದಲ್ಲಿ ಅಪಾಯಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿರುವುದರಿಂದ, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿನ ಹಾಸಿಗೆಗಳ ಕೊರತೆ ಉಂಟಾಗಿದೆ. ಅಲ್ಲದೆ, ಐಸಿಯು ಹಾಸಿಗೆಗಳೂ ಕೂಡ ಬಹುತೇಕ ಭರ್ತಿಯಾಗಿದ್ದು ಇದು ಅಧಿಕಾರಿಗಳ ಆತಂಕಕ್ಕೆ ಕಾರಣವಾಗಿದೆ. 

ಆಸ್ಪತ್ರೆಗಳಲ್ಲಿನ ಶವಾಗಾರಗಳು ಭರ್ತಿಯಾಗಿರುವ ಕಾರಣ ಆಸ್ಪತ್ರೆ ಅವರಣದಲ್ಲೇ ಶವಗಳನ್ನು ಶೇಖರಿಸಿಡಲಾಗುತ್ತಿದೆ. ಅತ್ತ ಶವಸಂಸ್ಕಾರಕ್ಕೂ ಕೂಡ ಹಲವಾರು ಗಂಟೆಗಳ ಕಾಲ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
 

Stay up to date on all the latest ರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp