ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಒಂದೇ ದಿನ 17, 282 ಹೊಸ ಕೋವಿಡ್-19 ಪ್ರಕರಣ, 100 ಸಾವು

ಬುಧವಾರ ದೆಹಲಿಯಲ್ಲಿ 17,282 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿವೆ. ಸಾಂಕ್ರಾಮಿಕ ಪ್ರಾರಂಭದ ನಂತರ ರಾಷ್ಟ್ರ ರಾಜಧಾನಿಯಲ್ಲಿ ಅತ್ಯಧಿಕ ಹೆಚ್ಚಿನ ಸಂಖ್ಯೆಯ ಸೋಂಕು ಪ್ರಕರಣಗಳು ಕಂಡುಬಂದಿದ್ದು, 100  ಮಂದಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಬುಧವಾರ ದೆಹಲಿಯಲ್ಲಿ 17,282 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿವೆ. ಸಾಂಕ್ರಾಮಿಕ ಪ್ರಾರಂಭದ ನಂತರ ರಾಷ್ಟ್ರ ರಾಜಧಾನಿಯಲ್ಲಿ ಅತ್ಯಧಿಕ ಹೆಚ್ಚಿನ ಸಂಖ್ಯೆಯ ಸೋಂಕು ಪ್ರಕರಣಗಳು ಕಂಡುಬಂದಿದ್ದು, 100  ಮಂದಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಹೊಸ ಬುಲೆಟಿನ್ ಪ್ರಕಾರ, 104 ಮಂದಿ ಸಾವನ್ನಪ್ಪುವುದರೊಂದಿಗೆ ಸಾವಿನ ಸಂಖ್ಯೆ 11, 540ಕ್ಕೆ ಏರಿಕೆಯಾಗಿದೆ. ಪಾಸಿಟಿವಿಟಿ ದರ ಶೇ.15.92 ರಷ್ಟಿದೆ. ಕಳೆದ ವರ್ಷ ನವೆಂಬರ್ 11 ರಂದು 8,593 ಪ್ರಕರಣಗಳು ವರದಿಯಾಗಿದ್ದರೆ ನವೆಂಬರ್ 18 ರಂದು 131 ಕೋವಿಡ್-19 ಸಾವು ಪ್ರಕರಣಗಳು ವರದಿಯಾಗಿದ್ದವು. ಕಳೆದ ವರ್ಷದ ನವೆಂಬರ್ ಮಧ್ಯದಿಂದಲೂ ಪಾಸಿಟಿವಿಟಿ ದರ ಶೇ.15ಕ್ಕಿಂತಲೂ ಹೆಚ್ಚಾಗಿತ್ತು.

ಮಂಗಳವಾರ 13, 468 ಹೊಸ ಪ್ರಕರಣಗಳು ಹಾಗೂ 81 ಸಾವಿನ ಪ್ರಕರಣಗಳು ವರದಿಯಾಗಿತ್ತು. ಇದು ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್-19 ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿರುವುದನ್ನು ತೋರಿಸುತ್ತಿದೆ.  ಬುಧವಾರದ ವೇಳೆಗೆ ಸುಮಾರು 7.05 ಲಕ್ಷ ರೋಗಿಗಳು ಸೋಂಕಿನಿಂದ ಚೇತರಿಸಿಕೊಂಡಿದ್ದರೆ, ಸಕ್ರಿಯ ಪ್ರಕರಣಗಳ ಸಂಖ್ಯೆ 50,736 ಆಗಿದೆ. ಒಟ್ಟಾರೇ ಸೋಂಕಿತರ ಸಂಖ್ಯೆ 7,67,438ಕ್ಕೆ ಏರಿಕೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com