ಕೋವಿಡ್ ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು ವಿಮಾನ ನಿಲ್ದಾಣದಿಂದ 300 ಪ್ರಯಾಣಿಕರು ಪರಾರಿ!

ಕೋವಿಡ್-19 ಕಡ್ಡಾಯ ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು ಗೊಂದಲ ಸೃಷ್ಟಿಸಿ 300 ಪ್ರಯಾಣಿಕರು ಇಲ್ಲಿನ ವಿಮಾನ ನಿಲ್ದಾಣದಿಂದ ಪರಾರಿಯಾಗಿರುವ ಘಟನೆ ಬುಧವಾರ ನಡೆದಿದೆ. ಅವರ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಇಂದು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಸಿಲ್ಚಾರ್: ಕೋವಿಡ್-19 ಕಡ್ಡಾಯ ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು ಗೊಂದಲ ಸೃಷ್ಟಿಸಿ 300 ಪ್ರಯಾಣಿಕರು ಇಲ್ಲಿನ ವಿಮಾನ ನಿಲ್ದಾಣದಿಂದ ಪರಾರಿಯಾಗಿರುವ ಘಟನೆ ಬುಧವಾರ ನಡೆದಿದೆ. ಅವರ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಇಂದು ತಿಳಿಸಿದ್ದಾರೆ.

ದೇಶದ ವಿವಿಧ ಭಾಗಗಳಿಂದ ಆರು ವಿಮಾನಗಳಲ್ಲಿ ಒಟ್ಟು 690 ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾಗಿ ಕ್ಯಾಚರ್ ಜಿಲ್ಲಾ ಹೆಚ್ಚುವರಿ ಜಿಲ್ಲಾಧಿಕಾರಿ ಸುಮಿತ್ ಸತ್ತವಾನ್ ತಿಳಿಸಿದ್ದಾರೆ.

ಈ ಪ್ರಯಾಣಿಕರೆಲ್ಲರೂ ವಿಮಾನ ನಿಲ್ದಾಣ ಹಾಗೂ ಅದರ ಸಮೀಪದಲ್ಲಿರುವ ಟಿಕೊಲ್ ಮಾಡೆಲ್ ಆಸ್ಪತ್ರೆಯಲ್ಲಿ ಮಾದರಿ ಪರೀಕ್ಷೆಗೆ ಒಳಗಾಗಬೇಕಿತ್ತು. ಆದರೆ, ಪರೀಕ್ಷೆಗೆ ದುಬಾರಿ 500 ರೂ. ನಿಗದಿ ಮಾಡಲಾಗಿದೆ ಎಂದು ಎರಡು ಕಡೆಯೂ ಗೊಂದಲ ಸೃಷ್ಟಿಸಿದರು ಎಂದು ಅವರು ಮಾಹಿತಿ ನೀಡಿದ್ದಾರೆ.

ಬೇರೆ ರಾಜ್ಯದಿಂದ ಆಗಮಿಸುವ ಎಲ್ಲಾ ವಿಮಾನ ಪ್ರಯಾಣಕರಿಗೆ ಆರ್ ಟಿ- ಪಿಸಿಆರ್  ನೆಗೆಟಿವ್ ಪರೀಕ್ಷಾ ವರದಿಯನ್ನು ಅಸ್ಸಾಂ ಸರ್ಕಾರ ಕಡ್ಡಾಯಗೊಳಿಸಿದೆ. ಆದರೆ,300 ಪ್ರಯಾಣಿಕರು ನಿಯಮ ಉಲ್ಲಂಘಿಸಿರುವುದಾಗಿ ಅಧಿಕಾರಿ ಹೇಳಿದ್ದಾರೆ. 

ರೂಲ್ಸ್ ಬ್ರೇಕ್ ಮಾಡಿದ ಪ್ರಯಾಣಿಕರು ಮಾಹಿತಿ ತಮ್ಮ ಬಳಿ ಇದ್ದು, ಅವರನ್ನು ಪತ್ತೆ ಹಚ್ಚುತ್ತೇವೆ. ಐಪಿಎಸ್ ಸೆಕ್ಷನ್ 188ರ ಅಡಿಯಲ್ಲಿ ಕ್ರಿಮಿನಲ್ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

690 ಪ್ರಯಾಣಿಕರಲ್ಲಿ 189 ಜನರ ಪರೀಕ್ಷೆ ಮಾಡಲಾಗಿದ್ದು, ಆರು ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಮಣಿಪುರ, ಮಿಜೋರಾಂ, ಮತ್ತಿ ತ್ರಿಪುರಾದಿಂದ ಬರುವಂತಹ ಅನೇಕ ಟ್ರಾನ್ಸಿಟ್  ಪ್ರಯಾಣಿಕರಿಗೆ ಟೆಸ್ಟ್ ನಿಂದ ವಿನಾಯಿತಿ ನೀಡಲಾಗಿದೆ ಎಂದು ಸತ್ತವಾನ್ ತಿಳಿಸಿದ್ದಾರೆ. 

ಅಸ್ಸಾಂನಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವುದರಿಂದ ಬೇರೆ ಕಡೆಯಿಂದ ಬರುವ ಎಲ್ಲಾ ಪ್ರಯಾಣಿಕರು ಕಡ್ಡಾಯವಾಗಿ ಏಳು ದಿನಗಳ ಕಾಲ ಹೋಮ್ ಕ್ವಾರಂಟೈನ್ ನಲ್ಲಿ ಇರಬೇಕೆಂದು ಅಸ್ಸಾಂ ಸರ್ಕಾರ ಬುಧವಾರ ರಾತ್ರಿ ಘೋಷಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com